ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ರಾಜ್ಯದಾದ್ಯಂತ ಜನರ ವಿಶ್ವಾಸಗಳಿಸಿ ೪೮ ಶಾಖೆಗಳವರೆಗೆ ಬೆಳೆದಿರುವುದು ಶ್ರೀ ಮಹಾಲಕ್ಷ್ಮಿ ಸ್ವೀಟ್ಸ್‌ನ ನೈತಿಕ ವ್ಯಾಪಾರ ಧೋರಣೆಗೆ ಸಾಕ್ಷಿ : ಕುಮಾರ್ ಬಂಗಾರಪ್ಪ

Share Below Link

ಶಿವಮೊಗ್ಗ : ರಾಜ್ಯದಾದ್ಯಂತ ಪರಿಶುದ್ಧ ತುಪ್ಪದಿಂದ ತಯಾರಿಸಲಾದ ಅಪೂರ್ವ ರುಚಿಯ ಸಿಹಿ ತಿನಿಸುಗಳ ಮೂಲಕ ಜನಮನ ಗೆದ್ದಿರುವ ಪ್ರತಿಷ್ಠಿತ ಶ್ರೀ ಮಹಾಲಕ್ಷ್ಮಿ ಸ್ವೀಟ್ಸ್ ಸಂಸ್ಥೆ ಇದೀಗ ಶಿವಮೊಗ್ಗದಲ್ಲಿ ತನ್ನ ಸಿಹಿ ಪರಂಪರೆಯ ಹೊಸ ಅಧ್ಯಾಯವನ್ನು ಆರಂಭಿಸಿದ್ದು, ನಗರದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ನೆಹರೂ ರಸ್ತೆಯ ಹೆಚ್.ಎನ್.ವಿ. ಬಿಲ್ಡಿಂಗ್‌ನಲ್ಲಿ ಸಂಸ್ಥೆಯ ೪೮ನೇ ಶಾಖೆ ಇಂದು ಭಕ್ತಿಭಾವ, ಸಂಭ್ರಮ ಮತ್ತು ಜನಸಂದಣಿಯ ನಡುವೆ ಅದ್ದೂರಿಯಾಗಿ ಉದ್ಘಾಟನೆ ಗೊಂಡಿತು.


ಡಿ.೨೨ರ ಇಂದು ಬೆಳಿಗ್ಗೆ ೧೦.೩೦ರ ಶುಭಮುಹೂರ್ತದಲ್ಲಿ ಮಾಜಿ ಸಚಿವ ಹಾಗೂ ಖ್ಯಾತ ಚಿತ್ರನಟ ಕುಮಾರ್ ಬಂಗಾರಪ್ಪ ಅವರು ತಮ್ಮ ಪುತ್ರ ಹಾಗೂ ಇನ್ನಿತರ ಗಣ್ಯರೊಂದಿಗೆ ಸೇರಿ ದೀಪ ಬೆಳಗಿಸಿ ಉದ್ಘಾಟಿಸಿದರು.
ನಂತರ ಮಾತನಾಡಿದ ಕುಮಾರ್ ಬಂಗಾರಪ್ಪ ಅವರು, ಪಾರಂಪರ್ಯ, ಪರಿಶುದ್ಧತೆ ಹಾಗೂ ಗುಣಮಟ್ಟಕ್ಕೆ ಹೆಸರಾಗಿರುವ ಶ್ರೀ ಮಹಾಲಕ್ಷ್ಮ್ಮಿ ಸ್ವೀಟ್ಸ್ ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆದಿದ್ದು, ಇಂದಿನ ಶುಭ ಮುಹೂರ್ತದಲ್ಲಿ ಶಿವಮೊಗ್ಗದಂತಹ ಸಾಂಸ್ಕೃತಿಕ ನಗರದಲ್ಲಿ ತನ್ನ ಸೇವೆಯನ್ನು ಆರಂಭಿಸಿರುವುದು ಸಂತಸದ ವಿಷಯ. ಮೈಸೂರು ಮೂಲದ ಈ ಸಂಸ್ಥೆ ರಾಜ್ಯದಾದ್ಯಂತ ಜನರ ವಿಶ್ವಾಸ ಗಳಿಸಿ ೪೮ ಶಾಖೆಗಳವರೆಗೆ ಬೆಳೆಯುತ್ತಿರುವುದು ಅದರ ನೈತಿಕ ವ್ಯಾಪಾರ ಧೋರಣೆಗೆ ಸಾಕ್ಷಿ ಎಂದರಲ್ಲದೇ, ವಿಶೇಷವಾಗಿ ಪರಿಶುದ್ಧ ತುಪ್ಪ, ನೈಸರ್ಗಿಕ ಪದಾರ್ಥಗಳು ಹಾಗೂ ಪಾರಂಪರಿಕ ವಿಧಾನದಲ್ಲಿ ತಯಾರಿಸುವ ಸಿಹಿ ತಿನಿಸುಗಳು ಸಂಸ್ಥೆಯ ಗುರುತಾಗಿವೆ ಎಂದರು.


ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪಅವರು ಮಾತನಾಡಿ, ಶಿವಮೊಗ್ಗದಲ್ಲಿ ಇಂತಹ ಪ್ರತಿಷ್ಠಿತ ಸಂಸ್ಥೆ ಆರಂಭವಾಗಿರುವುದು ನಗರಕ್ಕೆ ಹೆಮ್ಮೆಯ ಸಂಗತಿ ಎಂದು ಅಭಿಪ್ರಾಯಪಟ್ಟರು.
ಶುಭಹಾರೈಸಿ ಮಾತನಾಡಿದ ಮತ್ತೋರ್ವ ಅತಿಥಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶ್ರೀಮತಿ ಶಾರದಾ ಪೂರ್‍ಯಾನಾಯ್ಕ್ಕ ಅವರು, ಮೈಸೂರು, ಬೆಂಗಳೂರು, ಕೊಡಗು, ಹಾಸನ, ತುಮಕೂರು, ಚಿಕ್ಕಮಗಳೂರು, ಹುನಸೂರು, ಕೊಳ್ಳೇಗಾಲ, ಮಂಡ್ಯ, ಪಿರಿಯಾ ಪಟ್ಟಣ, ರಾಮನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಮಹಾಲಕ್ಷ್ಮಿ ಸ್ವೀಟ್ಸ್, ಪ್ರತಿಯೊಂದು ಶಾಖೆಯಲ್ಲೂ ಒಂದೇ ರುಚಿ, ಒಂದೇ ಗುಣಮಟ್ಟ ಎಂಬ ಧ್ಯೇಯದೊಂದಿಗೆ ಗ್ರಾಹಕರ ಮನಗೆದ್ದಿದೆ ಎಂದರಲ್ಲದೇ, ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಜೊತೆಗೆ, ಗುಣಮಟ್ಟದ ಉತ್ಪನ್ನಗಳು ಲಭ್ಯವಾಗುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು.
ಶ್ರೀ ಮಹಾಲಕ್ಷ್ಮಿ ಸ್ವೀಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಶಿವಕುಮಾರ್ ಅವರು ಮಾತನಾಡಿ, ಕೇಂದ್ರೀಕೃತ ಪಾಕಶಾಲೆಯನ್ನು ಮೈಸೂರಿನಲ್ಲಿ ಹೊಂದಿದ್ದು, ಅಲ್ಲಿಂದಲೇ ಎಲ್ಲಾ ಶಾಖೆಗಳಿಗೂ ಪ್ರತಿನಿತ್ಯ ಪೂರೈಸುತ್ತಿರುವುದು ನಮ್ಮ ವಿಶೇಷತೆ. ಸಾವಿರಾರು ಪರಿಣಿತ ಸಿಬ್ಬಂದಿಗಳು ನಮ್ಮಲ್ಲಿ ಕಾರ್ಯರ್ನಿಹಿಸುತ್ತಿದ್ದು, ಕೇವಲ ಸಿಹಿ ತಿಂಡಿಗಳಷ್ಟೇ ಅಲ್ಲದೆ ಶುಗರ್‌ಲೆಸ್ ತಿಂಡಿಗಳನ್ನು ಸಹ ಮಾಡಲಾಗುತ್ತದೆ ಎಂದರು.
ಮೈಸೂರಿನಲ್ಲಿ ೧೨, ಬೆಂಗಳೂರಿನಲ್ಲಿ ೧೧ ಮಳಿಗೆಗಳಿದ್ದು, ಇದರೊಂದಿಗೆ ಕೊಡಗಿನಲ್ಲಿ ೪, ಹಾಸನ, ಚಿಕ್ಕಮಗಳೂರಿನಲ್ಲಿ ತಲಾ ಎರಡು ಮಳಿಗೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಶಾಖೆಗಳನ್ನು ತೆರೆಯಲಾಗಿದೆ ಎಂದರು.
ಸಾಂಸ್ಕೃತಿಕ ನಗರಿಯಾದ ಶಿವಮೊಗ್ಗದಲ್ಲಿ ಬಹಳ ಹಿಂದೆಯೇ ಶಾಖೆ ತೆರೆಯುವ ಉದ್ದೇಶವಿತ್ತು. ಆದರೆ ಸೂಕ್ತ ಜಾಗ ಸಿಕ್ಕಿರಲಿಲ್ಲ. ಈಗ ಆ ಕನಸೂ ನನಸಾಗಿದೆ ಎಂದರು.
ಗ್ರಾಹಕರ ವಿಶ್ವಾಸವೇ ನಮ್ಮ ಬಂಡವಾಳ. ಶುದ್ಧತೆ, ರುಚಿ ಮತ್ತು ಆರೋಗ್ಯವನ್ನು ಕಾಪಾಡಿಕೊಂಡು ಸಿಹಿ ತಿನಿಸುಗಳನ್ನು ತಯಾರಿಸುವುದರಲ್ಲಿ ಯಾವುದೇ ರಾಜಿಯಿಲ್ಲ. ಶಿವಮೊಗ್ಗದ ಜನರ ಪ್ರೀತಿ, ವಿಶ್ವಾಸಕ್ಕೆ ತಕ್ಕಂತೆ ಸೇವೆ ನೀಡುವುದೇ ನಮ್ಮ ಗುರಿ ಎಂದರು.
ನವೀಕರಿಸಿದ ವಿನ್ಯಾಸದ ವಿಶಾಲ ಮಳಿಗೆಯಲ್ಲಿ ಸಿಹಿ ತಿನಿಸುಗಳು, ವಿಶೇಷ ಹಬ್ಬದ ತಿನಿಸುಗಳು ಹಾಗೂ ಪಾರಂಪರಿಕ ಸಿಹಿಗಳ ವಿಶಿಷ್ಟ ಸಂಗ್ರಹ ಲಭ್ಯವಿದ್ದು, ಗ್ರಾಹಕರಿಗೆ ಸುಗಮ ಸೇವೆ ಒದಗಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ಸಿಬ್ಬಂದಿ ವರ್ಗ, ಗಣ್ಯರು, ವ್ಯಾಪಾರಿಗಳು, ಹಿತೈಷಿಗಳು ಹಾಗೂ ಸಿಹಿ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಹೊಸ ಶಾಖೆಯ ಯಶಸ್ಸಿಗೆ ಹಾರೈಕೆ ಸಲ್ಲಿಸಿದರು