ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ವ್ಯಕ್ತಿಯ ದೇಹ, ಮನಸ್ಸಿನ ಧನಾತ್ಮಕ ಬದಲಾವಣೆಯೇ ಯೋಗದ ಉzಶ…

Share Below Link

ಶಿವಮೊಗ್ಗ : ವ್ಯಕ್ತಿಯ ದೇಹ, ಮನಸ್ಸು, ಬುದ್ಧಿ ಹಾಗೂ ಅಹಂಕಾರಗಳಲ್ಲಿನ ಧನಾತ್ಮಕ ಬದಲಾವಣೆಯೇ ಯೋಗದ ಉzಶ ಎಂದು ಕಾರ್ಯದರ್ಶಿ ಹೆಚ್.ಎಂ. ಚಂದ್ರಶೇಖರಯ್ಯ ತಿಳಿಸಿದರು.
ಶ್ರೀ ಶಿವಗಂಗಾ ಯೋಗ ಕೇಂದ್ರದ ವತಿಯಿಂದ ಕೃಷಿ ನಗರದ ಶಕ್ತಿ ಗಣಪತಿ ಯೋಗ ಶಾಖೆಯಲ್ಲಿ ಆಯೋಜಿಸಿದ್ದ ವಾರ್ಷಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಣಪತಿ ಸಮೃದ್ಧತೆಯ ಸಂಕೇತ, ಸಡಗರ ಸಂಭ್ರಮದ ಸಂಕೇತ, ಸ್ಥಿತ ಪ್ರಜ್ಞತೆಯ ಸಂಕೇತ. ಈ ತತ್ವಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿ ಕೊಂಡು ಈ ಭೂಮಿಯಲ್ಲಿ ನಾಲ್ಕು ದಿನ ಬದುಕಿ ಹೋಗುವುದೇ ಈ ಯೋಗದ ಉzಶವೆಂದು ತಿಳಿಸಿದರು.


ಇಂದು ಎಲ್ಲಿ ನೋಡಿದರೂ ಅಶಾಂತಿ, ಅಭದ್ರತೆ, ಅಪನಂಬಿಕೆ, ಭಯ ತಾಂಡವವಾಡುತ್ತಿದೆ. ಬಹುತೇಕ ಕುಟುಂಬಗಳಲ್ಲಿ ಶಾಂತಿ, ನೆಮ್ಮದಿ ಮಾಯವಾಗುತ್ತಿದೆ. ಕಾರಣ, ಮಿತಿ ಇಲ್ಲದ ಕಾಮನೆಗಳು, ಸ್ವಾರ್ಥಪರ ಚಿಂತನೆಗಳು, ಅಧಿಕಾರ, ಕೀರ್ತಿ, ಸಂಪತ್ತಿನ ಬೆನ್ನು ಹತ್ತಿರುವ ಜಗತ್ತು ಪ್ರಕ್ಷುಬ್ಧಗೊಂಡಿದೆ. ಹಿಂಸೆ, ಯುದ್ಧಗಳಿಂದ ಜಗತ್ತು ಜರ್ಜರಿತ ವಾಗುತ್ತಿದೆ. ನಾವೆಲ್ಲ ಜಗತ್ತು ಬದಲಾಗಲಿ ಎಂದು ಹೇಳುತ್ತೇವೆ. ಆದರೆ ನಮ್ಮಲ್ಲಿ ಬದಲಾವಣೆ ಯಾಗಲಿ ಎಂದು ಯಾರೂ ಬಯಸುತ್ತಿಲ್ಲ. ಮೊದಲು ನಮ್ಮಲಿನ ಚಿಂತನೆಗಳು, ಆಲೋಚನೆಗಳು, ದುರಾಸೆಗಳು, ಹಣ, ಕೀರ್ತಿಗಾಗಿ ಬೆನ್ನು ಹತ್ತಿರುವ ವ್ಯಕ್ತಿಯ ಮನಸ್ಸು ಬದಲಾಗಬೇಕಿದೆ. ಇದು ಯೋಗದ ಅಷ್ಟಾಂಗ ಮಾರ್ಗಗಳಾದ ಆಸನ, ಪ್ರಾಣಯಾಮ ಮತ್ತು ಧ್ಯಾನ ಗಳಿಂದ ಮಾತ್ರ ಸಾಧ್ಯ ಎಂದರು.
ಸಂಸ್ಥೆಯ ಖಜಂಚಿ ಸೂರ್ಯನಾರಾಯಣ ಹೊಸತೋಟ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಳ್ಳೆಕೆರೆ ಸಂತೋಷ್ ಆಗಮಿಸಿದ್ದರು.
ಪ್ರಮುಖರಾದ ಜಿ ವಿಜಯ್ ಕುಮಾರ್, ಪ್ರೊ. ಮಂಜುನಾಥ್, ಡಾ. ನಟರಾಜ್, ಪರಮೇಶ್ವರಪ್ಪ, ಕೆ.ಚಂದ್ರಪ್ಪ, ಪರಮೇಶ್, ಮನು ಕುಮಾರ್, ಅನಿಲ್, ಸುಮಾ ನಟರಾಜ್, ಜನಕಮ್ಮ, ನಾಗರತ್ನ, ಇನ್ನಿತರರಿದ್ದರು.
ಹಿರಿಯ ಯೋಗ ಶಿಕ್ಷಕ ನೀಲಕಂಠ ರಾವ್ ಕಾರ್ಯಕ್ರಮ ನಿರೂಪಿಸಿ ದರು. ಗಣಪತಿ ವಂದಿಸಿದರು.

Leave a Reply

Your email address will not be published. Required fields are marked *