ಗಮನ ಸೆಳೆದ ಈದ್ ಮೆರವಣಿಗೆ : ಹರಿದು ಬಂದ ಜನಸಾಗರ…
ಶಿವಮೊಗ್ಗ : ಇಸ್ಲಾಂ ಧರ್ಮದ ಸಂಸ್ಥಾಪಕ ಪ್ರವಾದಿ ಮಹಮ್ಮದ್ ಪೈಗಂಬರ ೧೫೦೦ನೇ ಜನ್ಮದಿನದ ಸವಿ ನೆನಪಿನ ಈದ್ ಮಿಲಾದ್ ಹಬ್ಬದ ಅಂಗವಾಗಿ ನಗರದಲ್ಲಿ ಜನ ಸಾಗರದ ವೈಭವದ ಮೆರವಣಿಗೆ ಯಶಸ್ವಿಯಾಗಿ ನೆರವೇರಿತು.
ನಗರದ ಸುನ್ನಿ ಜಮಿಯಾ ಮಸೀದಿ ನೇತೃತ್ವದಲ್ಲಿ ಮುಸ್ಲಿಂ ಸಮಾಜದಿಂದ ನಡೆದ ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಮುಸ್ಲಿಮರು ಶ್ರದ್ಧೆ ಭಕ್ತಿಯಿಂದ ಪಾಲ್ಗೊಂಡು ಪ್ರವಾದಿ ಅವರ ಜನ್ಮದಿನವನ್ನು ಸ್ಮರಿಸಿ ಸಂಭ್ರಮಿಸಿದರು.
ನಗರದ ಹೃದಯ ಭಾಗವಾದ ಗಾಂಧಿ ಬಜರ್‌ನ ಸುನ್ನಿ ಜಮಿ ಯಾ ಮಸೀದಿಯಿಂದ ಮಧ್ಯಾಹ್ನ ೩ಗಂಟೆ ಸುಮಾರಿಗೆ ಮೆರವಣಿಗೆ ಆರಂಭವಾಯಿತು. ಮದಾರಿ ಪಾಳ್ಯ, ಸುಳೇಬೈಲ್, ನ್ಯೂ ಮಂಡ್ಲಿ, ಹಳೆ ಮಂಡ್ಲಿ, ಇಲಿಯಾಸ್ ನಗರ, ಟಿಪ್ಪು ನಗರ, ಇಮಾಮ್ ಬಾಡ, ಕ್ಲರ್ಕ್ ಪೇಟೆ, ಬೈಪಾಸ್ ರಸ್ತೆ , ಪೆನ್ಷನ್ ಮೊಹಲ್ಲ, ಚಿಕ್ಕಲ್, ರಾಗಿ ಗುಡ್ಡ, ಜೆಪಿಎನ್ ನಗರ, ಬಾಪೂಜಿ ನಗರ, ಟ್ಯಾಂಕ್ ಮೊಹಲ್ಲ, ಅಮೀರ್ ಅಹ್ಮದ್ ಕಾಲೋನಿ, ಬಸವನಗುಡಿ, ಸೇರಿದಂತೆ ನಗರದ ವಿವಿಧ ಭಾಗದಿಂದ ಬಂದ ಮುಸ್ಲಿಂ ಬಾಂಧವರು ಮೆರವಣಿಗೆಯನ್ನು ಮುನ್ನಡೆಸಿದರು. ಮೆರವಣಿಗೆ ಹಿನ್ನೆಲೆಯಲ್ಲಿ ಅಮೀರ್ ಅಹ್ಮದ್ ವೃತ್ತದಲ್ಲಿ ಮುಸ್ಲಿಮರ ಪವಿತ್ರ ಧಾರ್ಮಿಕ ಕೇಂದ್ರ ಮೆಕ್ಕಾ ಮದೀನಾದ ಪ್ರತಿಕೃತಿ, ಹಜರತ್ ಅಲಿ ಸೇರಿದಂತೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ನಾಯಕರ ಸ್ಮರಣೆಯ ಚಿಹ್ನೆಗಳನ್ನು ಅಳವಡಿಸಲಾಗಿತ್ತು.
ಗಾಂಧಿಬಜರ್ ಅಮೀರ್ ಅಹ್ಮದ್ ಸರ್ಕಲ್ ಸೇರಿದಂತೆ ಶಿವಮೊಗ್ಗ ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳು ಹಸಿರು ಹೊದ್ದು, ವಿದ್ಯುತ್ ದೀಪಗಳಿಂದ ಅಲಂಕೃತ ಗೊಂಡಿದ್ದವು. ಆಟೋ, ಟ್ರ್ಯಾಕ್ಟರ್, ಮಿನಿ ಗೂಡ್ಸ್ ಗಾಡಿಗಳು ಸೇರಿದಂತೆ ಬೇರೆಬೇರೆ ವಾಹನಗಳಲ್ಲಿ ಪ್ರಾರ್ಥ ನಾ ಮಂದಿರ, ಗುಂಬಜ್ ಹಾಗೂ ಧಾರ್ಮಿಕ ಚಿಹ್ನೆಗಳ ಪ್ರತಿಕೃತಿ ನಿರ್ಮಿಸಿ ಅದಕ್ಕೆ ಹೂವು ಹಾಗೂ ಬೆಳಕಿನ ಅಲಂಕಾರ ಮಾಡಿ ಮೆರ ವಣಿಗೆಯಲ್ಲಿ ಕೊಂಡಲಾಯಿತು.

ಮೆರವಣಿಗೆ ಲಷ್ಕರ್ ಮೊಹಲ್ಲ, ಪೆನ್ಷನ್ ಮೊಹಲ್ಲ, ಬಿ ಹೆಚ್ ರಸ್ತೆ, ಟ್ಯಾಂಕ್ ಮೊಹಲ್ಲ, ಬಾಲರಾಜ ಅರಸ್ ರಸ್ತೆ, ಮಹಾವೀರ ಸರ್ಕಲ್ , ಗೋಪಿ ಸರ್ಕಲ್, ಅಶೋಕ ವೃತ್ತ, ಆಜದ್ ನಗರ, ಎಸ್ ಪಿ ರಸ್ತೆ ಮೂಲಕ ಅಮೀರ್ ಅಹ್ಮದ್ ವೃತ್ತ ತಲುಪಿತು. ಮೆರವಣಿಗೆ ಯಲ್ಲಿ ಬೇರೆಬೇರೆ ವೇಷ ಧರಿಸಿದ್ದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಹಬ್ಬಕ್ಕೆ ಸಂಬಂ ಧಿಸಿದ ಘೋಷಣೆಗಳು ಮೆರವಣಿಗೆ ಉದ್ದಕ್ಕೂ ಮೊಳಗಿದವು. ಮಧ್ಯಾಹ್ನ ಆರಂಭವಾದ ಮೆರವಣಿಗೆ ರಾತ್ರಿಯ ವರಿಗೆ ಪ್ರಮುಖ ಬೀದಿಗಳಲ್ಲಿ ಭವ್ಯವಾಗಿ ನಡೆಯಿತು.
ಮೆರವಣಿಗೆಯಲ್ಲಿ ಕವ್ವಾಲಿ, ಲಾವಣಿಗಳನ್ನು ಹಾಡಿ ಮೊಹ ಮ್ಮದ್ ಪೈಗಂಬರರ ಗುಣಗಾನ ಮಾಡುತ್ತಾ ಸಾಗಿದರು. ಸಾಂಪ್ರದಾ ಯಿಕ ಉಡುಪು ಧರಿಸಿದ ಮುಸ್ಲಿ ಮರು ಗಮನಸೆಳೆದರು. ಕೆಲವು ವೃತ್ತಗಳಲ್ಲಿ ಡಿಜೆ ಸದ್ದು, ಧಾರ್ಮಿಕ ಘೋಷಣೆಗಳು ಮೊಳಗಿದವು. ಪಟಾಕಿ ಸ್ವದ್ದು ಎಂದಿಗಿಂತ ಜೋರಾ ಗಿಯೇ ಇತ್ತು. ಮೆರವಣಿಗೆ ಅಮೀರ್ ಅಹ್ಮದ್ ಸರ್ಕಲ್ ತಲುಪಿದಾಗ ಅಲ್ಲಿ ಸಮುದಾಯದ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ವೀಕ್ಷಿಸಿದರು. ಶಿವಪ್ಪ ನಾಯಕ ಸರ್ಕಲ್ ಮತ್ತು ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಯುವ ಜನರು ಕುಣಿದು ಕುಪ್ಪಳಿಸಿದರು. ಕಾರು ಬೈಕುಗಳಲ್ಲಿ ಕುಟುಂಬ ಸಮೇತರಾಗಿ ಗೆಳೆಯರೊಂದಿಗೆ ಮೆರವಣಿಗೆ ಯಲ್ಲಿ ಪಾಲ್ಗೊಂಡು ಮೊಹಮ್ಮದ್ ಪೈಗಂಬರ್ ಅವರನ್ನು ಸ್ಮರಿಸಿದರು. ಮೆರವಣಿಗೆ ಸಾಗಿ ಬಂದ ಹಾದಿ ಹಸಿ ರುಮಯವಾಗಿ ಮಾರ್ಪಟ್ಟಿತು. ಹಸಿರು -ಬಿಳಿ ಬಾವುಟ, ಧಾರ್ಮಿಕ ಬರಹಗಳು ರಾರಾಜಿಸುತ್ತಿದ್ದವು. ಮೊಬೈಲ್ ಫೋನ್ಗಳಲ್ಲಿ ಮೆರವಣಿಗೆ ಯ ದೃಶ್ಯಗಳನ್ನು ಚಿತ್ರೀಕರಿಸುವುದರ ಜೊತೆಗೆ ಸೆಲ್ಫಿ ತೆಗೆದುಕೊಳ್ಳುವುದು ಕಂಡುಬಂತು. ಮೆರವಣಿಗೆ ಹೋದ ಕಡೆಯ ರಸ್ತೆ ಬದಿ ಮತ್ತು ಕಟ್ಟಡಗಳ ಮಹಡಿಯಲ್ಲಿ ನಿಂತು ಜನರು ವೀಕ್ಷಿಸಿದರು.
ವಿಶೇಷವಾಗಿ ಮಿಳಗಟ್ಟದಲ್ಲಿ ಹಿಂದೂ ಸಮಾಜದ ಗಣಪತಿ ಸಮಿತಿಯವರಿಂದ ತಂಪು ಪಾನೀಯ ಮಜ್ಜಿಗೆ ವಿತರಿಸಲಾ ಯಿತು. ಲಷ್ಕರ್ ಮೊಹದ ಮಿರಾಜ್ ಮಸೀದಿ ಕಾಂಪೌಂಡ್ ನಲ್ಲಿ ಬೆಳಿಗ್ಗೆ ಅಲ್ಲಿನ ಯುವ ಸಂಘಟನೆಯವರಿಂದ ರಕ್ತದಾನ ನಡೆಯಿತು. ಹುಲಿಯ ಪ್ರತಿಕ್ರಿತಿ ಹಿಂದೆ ಕುಳಿತು ಟಿಪ್ಪು ವೇಷದಾರಿ ಆಗಿದ್ದ ಹುಡುಗ ಮತ್ತು ಸಾಂಪ್ರ ದಾಯಿಕ ಧಿರಿಸು ಧರಿಸಿ ಕುದುರಿಯ ಮೇಲೆ ಮೆರವಣಿಗೆಗೆ ಬಂದವರು ಹಾಗೂ ರಾತ್ರಿ ಅಮೀರ್ ಅಹ್ಮದ್ ವೃತ್ತದಲ್ಲಿ ಕವಾಲಿಯ ಗಾಯನ ಸಾರ್ವಜನಿಕರ ಗಮನ ಸೆಳೆಯಿತು.
ಪ್ಯಾಲೆಸ್ಥಿನ್ ಧ್ವಜ ಪ್ರದರ್ಶನ:ಕೇಸ್ ದಾಖಲು
ಭದ್ರಾವತಿಯಲ್ಲಿ ಮೂವರು ಯುವಕರು ಪ್ಯಾಲೇಸ್ಥಿನ್ ಧ್ವಜ ಹಿಡಿದು ದ್ವಿಚಕ್ರ ವಾಹನದಲ್ಲಿ ಸುತ್ತಾಡಿರುವುದು ಸಿಸಿ ಕ್ಯಾಮೆರಾ ದಲ್ಲಿ ಸೆರೆಯಾಗಿದ್ದು ಅವರ ವಿರುದ್ಧ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಹಾವೀರ ಸರ್ಕಲ್ ಮತ್ತು ಗಾಂಧಿ ಬಜರ್ ನಲ್ಲಿ ಕಾಂಗ್ರೆಸ್ ಜಿ ಘಟಕದ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್, ಸೂಡ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಕಾಂಗ್ರೆಸ್ ಮುಖಂಡರಾದ ಹೆಚ್. ಸಿ .ಯೋಗೇಶ್, ಎಂ .ಶ್ರೀಕಾಂತ್, ಸೇರಿದಂತೆ ಮತ್ತಿತರರು ಮುಸ್ಲಿಂ ಸಮಾಜ ಬಾಂಧವರಿಗೆ ಈದ್ ಮಿ ಲಾದ್ ಶುಭಾಶಯ ಕೋರಿದರು.
ನಗರದಲ್ಲಿ ಕಳೆದ ಎಂಟತ್ತು ದಿನಗಳಿಂದ ಸಂಭ್ರಮದ ವಾತಾ ವರಣದ ನಡುವೆಯೇ ಎಲ್ಲಿ ಕೋಮುಗಲಭೆ ಆಗುತ್ತದೋ ಎಂದು ಒಂದು ರೀತಿಯ ಆತಂಕ ಕೂಡ ಮನೆ ಮಾಡಿತ್ತು. ಜಿಡಳಿತ ಮತ್ತು ಜಿ ಪೊಲೀಸ್ ಇಲಾಖೆ ಯ ಸಮರ್ಥ ನಾಯಕತ್ವದಲ್ಲಿ ನಡೆದ ಬಿಗಿ ಬಂದೋಬಸ್ತ್ ಹಾಗೂ ಸಾರ್ವಜನಿಕರ ಸಹಕಾರದಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದೆ ಎ ಕಾರ್‍ಯಕ್ರಮಗಳು ಸಮಾಪ್ತಿಯಾಗುವ ಮೂಲಕ ನಗರದ ಜನತೆ ನೆಮ್ಮದಿ ಯ ನಿಟ್ಟುಸಿರು ಬಿಡುವಂತಾಗಿದೆ.
