ಸಾಂಸ್ಕೃತಿಕ ಅಸ್ಥಿತ್ವ ಉಳಿಸಿಕೊಳ್ಳುವ ಸಲುವಾಗಿ ಧೀವರ ಸಂಘ ಅಸ್ಥಿತ್ವಕ್ಕೆ…
ಶಿವಮೊಗ್ಗ : ನಮ್ಮ ಸಾಂಸ್ಕೃತಿಕ ಅಸ್ಥಿತ್ವವನ್ನು ಉಳಿಸಿ ಕೊಳ್ಳಲು ಕರ್ನಾಟಕ ಧೀವರ ಸಂಘ ಅಸ್ಥಿತ್ವಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಧೀವರ ಜನಾಂಗದ ಪ್ರಗತಿಗಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಒತ್ತಾಯಿಸಲಾಗು ವುದು ಎಂದು ಕರ್ನಾಟಕ ಧೀವರು ಸಂಘದ ರಾಜಧ್ಯಕ್ಷ ಡಾ. ಮಂಚೇ ಗೌಡ ಬಿ.ಹೆಚ್. ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಡಿಗರ ಸಂಘ ಎಂಬುದು ಈಗಾಗಲೇ ಇದೆ. ಇದರ ಜೊತೆಗೆ ಧೀವರ ಸಂಘವು ಕೂಡ ಕಾರ್ಯನಿರ್ವಹಿಸುತ್ತಿದೆ. ಎ ಜನಾಂಗಗಳಲ್ಲಿಯೂ ಇರು ವಂತೆ ನಮ್ಮ ಸಮಾಜದಲ್ಲಿಯೂ ಕೂಡ ಪಂಗಡಗಳು ಇವೆ. ಅದರಲ್ಲಿ ಧೀವರು ಎಂಬುದು ಪ್ರಮುಖ ವಾದ ಪಂಗಡವಾಗಿದೆ. ಧೀವರಲ್ಲಿ ವಿಶೇಷವಾದ ಕೌಶಲ್ಯಗಳಿವೆ. ಗುಡಿ ಕೈಗಾರಿಕೆ, ಹಸೆ, ಚಿತ್ತಾರೆ, ಭೂಮಿ ಹುಣ್ಣಿಮೆ, ಬುಟ್ಟಿ, ಅಡಿಕೆ ಹೀಗೆ ನಮ್ಮದೇ ಆದ ಕೌಶಲ್ಯಗಳನ್ನು ಉಳಿಸಿಕೊಳ್ಳಲು ಮತ್ತು ಮುಂದಿನ ಜನಾಂಗಕ್ಕೆ ಇವು ಧೀವರ ಕೊಡುಗೆ ಎಂದು ಬೆಳೆಸಲು ಮತ್ತು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ನಮ್ಮ ಸಮಾಜ ಬೆಳೆಯು ವಂತಾಗಲು ಧೀವರು ಸಂಘ ಅಸ್ಥಿತ್ವಕ್ಕೆ ಬಂದಿದ್ದು, ಮಹಿಳೆಯರು ಸೇರಿ ದಂತೆ ಸುಮಾರು ೨೩ಕ್ಕೂ ಹೆಚ್ಚು ಪದಾಧಿಕಾರಿಗಳು ನಮ್ಮ ಸಂಘದಲ್ಲಿ ಇzರೆ ಎಂದರು.

ಸರ್ಕಾರಕ್ಕೆ ನಮ್ಮದೇ ಆದ ಬೇಡಿಕೆಗಳಿವೆ. ಅದರಲ್ಲಿ ಮುಖ್ಯ ವಾಗಿ ಬೆಂಗಳೂರು ಧೀವರ ಸಭಾ ಭವನಕ್ಕೆ ಶಿವಮೊಗ್ಗ ಉತ್ತರ ಕನ್ನಡ, ಉಡುಪಿ, ಮಂಗಳೂರು, ಜಿ ಕೇಂದ್ರದ ಸಭಾಭವನ ಹಾಗೂ ವಿದ್ಯಾರ್ಥಿ ನಿಲಯಕ್ಕೆ ತಲಾ ೫ ಎಕರೆ ಜಗವನ್ನು ಮಂಜೂರು ಮಾಡ ಬೇಕು. ಶಿವಮೊಗ್ಗ ಜಿಯಲ್ಲೂ ಕೂಡ ಧೀವರ ಸಂಖ್ಯೆ ಹೆಚ್ಚಿದ್ದು, ಗ್ರಾಮಾಂತರ ತಾಲ್ಲೂಕುಗಳಿಗೆ ಜಮೀನು ಮಂಜೂರು ಮಾಡ ಬೇಕು. ಉತ್ತರ ಕನ್ನಡ ಜಿಯ ಪ್ರತೀ ತಾಲ್ಲೂಕುಗಳಲ್ಲೂ ವಿದ್ಯಾರ್ಥಿನಿಲಯಕ್ಕೆ ಜಗ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ನಮಗೆ ಶೇ.೭೫ರಷ್ಟು ರಾಜಕೀಯ ಪ್ರಾತಿನಿಧ್ಯ ಕೊಡ ಬೇಕು. ಸಾಗರ ತಾಲ್ಲೂಕನ್ನು ಜಿ ಕೇಂದ್ರವನ್ನಾಗಿಸಬೇಕು. ಹೊಸನಗರ ತಾಲ್ಲೂಕನ್ನು ಪುನಃ ವಿಧಾನಸಭಾ ಕ್ಷೇತ್ರವಾಗಿ ಸ್ಥಾಪಿಸ ಬೇಕು. ಮುಳುಗಡೆ ಸಂತ್ರಸ್ಥರಿಗೆ ಜಮೀನು ನೀಡಬೇಕು. ನಿರುದ್ಯೋ ಗಿಗಳನ್ನು ಗುರುತಿಸಿ ಉದ್ಯೋಗ ನೀಡಬೇಕು. ಬಡವರಿಗೆ ವಸತಿ ಕಲ್ಪಿಸಬೇಕು. ನಮ್ಮ ಕೌಶಲ್ಯಗಳಿಗೆ ಅನುಕೂಲವಾ ಗುವಂತೆ ಮತ್ತು ಶೈಕ್ಷಣಿಕ ಸಂಶೋಧನಾತ್ಮಕ ತರಬೇತಿಗಾಗಿ ನಿವೇಶನ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಉಪಾಧ್ಯಕ್ಷರಾದ ಗಣಪತಪ್ಪ, ನಾಗರಾಜ್, ಮಂಜು ನಾಥ್ ಕೆ., ಕುಪ್ಪಯ್ಯ ಟಿ., ಶಿವಕುಮಾರ್, ವೆಂಕಟೇಶ್ ಮೂರ್ತಿ, ಮಹಿಳಾ ಅಧ್ಯಕ್ಷ ಗಾಯತ್ರಿ ಶಂಕರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮುರಳೀಧರ, ಶಿವಪ್ಪ ಹೆಚ್.ವಿ., ಹಾಲಪ್ಪ ಕೆ., ಪ್ರಭಾವತಿ ಎನ್., ಶ್ರೀಮತಿ ತೀರ್ಥ ಇನ್ನಿತರರು ಉಪಸ್ಥಿತರಿದ್ದರು.


