ತಾಜಾ ಸುದ್ದಿರಾಜಕೀಯ

ಕ್ಷೇತ್ರದ ಅಭಿವೃದ್ಧಿಯೇ ಶ್ರೀರಕ್ಷೆ: ಅಶೋಕ್ ನಾಯ್ಕ…

Share Below Link

ಶಿವಮೊಗ್ಗ: ಗ್ರಾಮಾಂತರ ಕ್ಷೇತ್ರ ದಲ್ಲಿ ಯಾವ ಹಳ್ಳಿಯನ್ನೂ ಮರೆಯದೆ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಸಾಕಷ್ಟು ಅನು ದಾನ ತಂದು ನೆರವಾಗುವುದು ದೊಡ್ಡ ಹೆಮ್ಮೆ. ಅಭಿವೃದ್ಧಿಯನ್ನೇ ಮುಂದಿಟ್ಟುಕೊಂಡು ಮತ ಯಾಚಿಸುತ್ತೇನೆ ಎಂದು ಶಾಸಕ ಮತ್ತು ಬಿಜೆಪಿ ಉಮೇದುವಾರ ಕೆ. ಬಿ. ಅಶೋಕ ನಾಯ್ಕ ಹೇಳಿದರು.
ಪ್ರೆಸ್ ಟ್ರಸ್ಟಿನಲ್ಲಿ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಜನರ ಕಡೆಯಿಂದ ಪ್ರಶಂ ಸನೆಯ ಮಾತು ಕೇಳಿಬರುತ್ತಿದೆ. ನೂರಾರು ಕೋಟಿ ಅನುದಾನ ತರುವಲ್ಲಿ ಮಾಜಿ ಸಿಎಂ ಯಡಿ ಯೂರಪ್ಪ, ಸಂಸದ ಬಿ ವೈ ರಾಘ ವೇಂದ್ರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರಣ ರಾಗಿದ್ದಾರೆ. ಜನರೂ ಸಹ ಅಭಿ ವೃದ್ಧಿಯನ್ನು ಶ್ಲಾಘಿಸುತ್ತಿದ್ದಾರೆ. ಇದರಿಂದ ಈ ಬಾರಿ ತನ್ನ ಗೆಲುವು ಸುಮಾರು ೨೫-೩೦ ಸಾವಿರ ಮತ ಗಳ ಅಂತರದಿಂದ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಮಗೆ ಬಂಜರ ತಾಂಡಾಗ ಳಲ್ಲೂ ಬೆಂಬಲ ಸಿಕ್ಕಿದೆ. ಶೇ. ೮೦ ರಷ್ಟು ಬಂಜರರು ಬಿಜೆಪಿ ಪರ ವಿದ್ದಾರೆ. ಒಳಮೀಸಲಾತಿ ವಿಚಾರ ದಲ್ಲಿ ಯಾವ ಅನ್ಯಾಯವೂ ಆಗಿಲ್ಲ. ವಿಪಕ್ಷದಲ್ಲಿರುವ ಕೆಲವರು ಇದನ್ನು ಅರ್ಥ ಮಾಡಿಕೊಳ್ಳದೆ, ಮಾತನಾಡಲು ಬೇರೆ ವಿಚಾರವಿಲ್ಲದೆ ಇದನ್ನೇ ದೊಡ್ಡ ವಿಷಯನ್ನಾಗಿ ಮಾಡುತ್ತಾ ಜನರ ದಿಕ್ಕು ತಪ್ಪಿಸುತಿದ್ದಾರೆ ಎಂದರು.
ಗ್ರಾಮಾಂತರದಲ್ಲಿ ಸಾಕಷ್ಟು ಜನರಿಗೆ ನಿವೇಶನದ ಹಕ್ಕುಪತ್ರ ಕೊಡಿಸಲಾಗಿದೆ. ಇನ್ನೂ ಬಹಳಷ್ಟು ಜನರಿದ್ದಾರೆ. ಅವರಿಗೆ ಹಕ್ಕುಪತ್ರ ಕೊಡಿಸುವುದು ತನ್ನ ಗುರಿಯಾ ಗಿದೆ. ಜೊತೆಗೆ ಶರಾವತಿ ಸಂತ್ರಸ್ತರು ಗ್ರಾಮಾಂತರ ಭಾಗದಲ್ಲಿ ಹಲವ ರಿದ್ದು, ಅವರಿಗೂ ಸಹ ನ್ಯಾಯ ಕೊಡಿಸು ವುದು, ಬಗರ್‌ಹುಕುಂ ಸಾಗುವಳಿ ಪತ್ರ ಕೊಡಿಸುವ ಜವಾಬ್ದಾರಿ ತನ್ನ ಮೇಲಿದೆ. ಇವೆಲ್ಲದರ ಹೊರತಾಗಿ ಜನರ ಬಹಳ ದಿನದ ಬೇಡಿಕೆಯಾಗಿರುವ ಗ್ರಾಮಾಂತರ ತಾಲೂಕನ್ನು ರಚಿಸುವ ಕೆಲಸವನ್ನು ಮಾಡಲು ಯತ್ನಿಸುತ್ತೇನೆ ಎಂದು ಹೇಳಿದರು.
ಗ್ರಾಮಾಂತರ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಮೇ ೭ರಂದು ಆಗಮಿಸಲಿದ್ದಾರೆ. ಅಂದು ಸಂಜೆ ಆಯನೂರಿನ ಹೊರಭಾಗದಲ್ಲಿ ಬೃಹತ್ ಸಮಾ ವೇಶ ನಡೆಸಲಾಗು ವುದು. ಇದಕ್ಕೆ ಸಕಲ ಸಿದ್ಧತೆ ನಡೆದಿದೆ. ಸುಮಾರು ೫೦ ಸಾವಿರ ಜನರು ಸೇರುವ ನಿರೀಕ್ಷ್ಷೆ ಇದೆ. ಆಯನೂರಿಗೆ ಪ್ರಧಾನಿ ಆಗಮಿಸುವುದರಿಂದ ಗ್ರಾಮಾಂತರ ಭಾಗದಲ್ಲಿ ಬಿಜೆಪಿ ಇನ್ನಷ್ಟು ಬಲಿಷ್ಠವಾಗಲಿದೆ. ಇದು ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ತನ್ನ ಗೆಲುವು ನಿಶ್ಚಿತ. ಕಾಯಕರ್ತ ರೊಟ್ಟಿಗೆ ಗ್ರಾಮಗಳ ಪ್ರವಾಸ ಮಾಡಿ ಮತದಾರರನ್ನು ಭೇಟಿ ಮಾಡುವ ಕೆಲಸವನ್ನು ಮಾಡುತ್ತಿ ರುವುದಾಗಿ ವಿವರಿಸಿದರು.
ಸಂವಾದದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ, ಕಾರ್‍ಯದರ್ಶಿ ನಾಗರಾಜ ನೇರಿಗೆ, ಶಿವಮೊಗ್ಗ ಜಿಲ್ಲಾ ಕಾರ್‍ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ ಯಡಗೆರೆ, ಕಾರ್‍ಯದರ್ಶಿ ಸಂತೋಷ್ ಉಪಸ್ಥಿತರಿದ್ದರು.