ಮೀಸಲಾತಿ ಪ್ರಕಟ ವಿಳಂಬ ಸರಿಯಲ್ಲ :ಮೇಘರಾಜ್ …
ಶಿವಮೊಗ್ಗ: ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾ ಧ್ಯಕ್ಷ ಸ್ಥಾನದ ಮೀಸಲಾತಿ ಘೋಷಣೆ ಮಾಡದೆ ರಾಜ್ಯ ಸರ್ಕಾರ ಚುನಾಯಿತಿ ಪ್ರತಿನಿಧಿಗಳ ಅಧಿಕಾರವನ್ನು ಮೊಟಕುಗೊಳಿಸು ತ್ತಿದೆ ಎಂದು ಜಿ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಆರೋಪಿಸಿ ದರು.
ಅವರು ಇಂದು ಬಿಜೆಪಿ ಕಚೇ ರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸುಮಾ ರು ೧೦೦ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳ ಮೊದಲ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಡಳಿತ ಅವಧಿ ಮುಕ್ತಾಯ ಗೊಂಡು ಮೂರು ತಿಂಗಳು ಕಳೆದರೂ ಇದುವರೆಗೆ ಮೀಸಲಾತಿ ಪ್ರಕಟಿಸದೆ ಚುನಾಯಿತ ಪ್ರತಿನಿಧಿಗಳ ಹಕ್ಕು ಮೊಟಕುಗೊಳಿಸಿದೆ ಎಂದರು.
ಅಧಿಕಾರ ವಿಕೇಂದ್ರೀಕರಣದ ಉದ್ದೇಶ ಮರೆಯಾಗಿ ಕೇವಲ ಅಧಿಕಾರಿಗಳೇ ಆಡಳಿತ ನಡೆಸು ವಂತಾಗಿದೆ. ಆಡಳಿತಾಧಿಕಾರಿಗಳಿಗೆ ಇಚ್ಚಾಶಕ್ತಿ ಇಲ್ಲದೆ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಕಾಮಗಾರಿ ನಡೆಸಲು ಆದೇಶ ಸಿಗದೆ ಕನಿಷ್ಠ ಮೂಲಭೂತ ಸೌಲಭ್ಯಗಳು ಸಹ ದೊರೆಯುತ್ತಿಲ್ಲ ಎಂದರು.
ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ನಿಗದಿಪಡಿಸದೆ ರಾಜ್ಯ ಸರ್ಕಾರ ದ್ರೋಹ ಮಾಡುತ್ತಿದೆ. ಹಾಗೂ ನಿರ್ಲಕ್ಷ್ಯ ಧೋರಣೆ, ವಿಳಂಬದ ಪರಿಣಾಮ ಅವಧಿ ಮುಗಿದು ಎರಡು ವರ್ಷಗಳಾ ದರೂ ಸಹ ಜಿ.ಪಂ ಮತ್ತು ತಾ.ಪಂ. ಚುನಾವಣೆ ಸಹ ನಡೆದಿಲ್ಲ. ಕಳೆದ ಮೂರು ತಿಂಗಳಿನಿಂದ ಸ್ಥಳೀಯ ಸಂಸ್ಥೆಗಳಾದ ಪಪಂ., ನಗರಸಭೆ, ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಕೂಡ ಪ್ರಕಟಿಸದಿರು ವುದರಿಂದ ಸ್ಥಳೀಯ ಆಡಳಿತವನ್ನು ಕುಗ್ಗಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ದೂರಿದರು.
ಅಧಿಕಾರ ವಿಕೇಂದ್ರೀಕರಣಕ್ಕೆ ಇರುವ ಮಹತ್ವ ತಿಳಿದು ಸರ್ಕಾರ ನಿರ್ಲಕ್ಷ್ಯ ಮಾಡಬಾರದು. ಒಂದಲ್ಲ ಒಂದು ನೆಪವೊಡ್ಡಿ ಸ್ಥಳೀಯ ಆಡಳಿತದ ಮೀಸಲಾತಿ ಪ್ರಕಟ ವಿಳಂಬ ಮಾಡುತ್ತಿರುವುದು ಸರಿಯಲ್ಲ ಎಂದರು.
ಮೀಸಲಾತಿ ನಿಗದಿ ಬಗ್ಗೆ ಕೂಡಲೇ ಚರ್ಚಿಸಿ ಗ್ರಾ.ಪಂ., ಸ್ಥಳೀಯ ಸಂಸ್ಥೆಗಳಿಂದ ಹಿಡಿದು ಜಿ.ಪಂ.ವರೆಗೆ ಯಾವುದೇ ಹಸ್ತಕ್ಷೇ ಪವಿಲ್ಲದೆ ಮೀಸಲಾತಿ ಪ್ರಕಟಗೊ ಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಅಧಿವೇಶನದಲ್ಲೂ ಸಹ ಈ ಬಗ್ಗೆ ವಿರೋಧ ಪಕ್ಷವಾಗಿ ಬಿಜೆಪಿ ಶೂನ್ಯ ವೇಳೆಯಲ್ಲಿ ಚರ್ಚಿಸಲು ಸಾಧ್ಯವಾಗಿಲ್ಲ. ಲೋಕಸಭಾ ಚುನಾ ವಣೆ ದೃಷ್ಟಿಯಲ್ಲಿಟ್ಟುಕೊಂಡು ಗ್ಯಾರಂಟಿ ಯೋಜನೆ ಜರಿಗೆ ಮಾತ್ರ ಸರ್ಕಾರ ಗಮನಹರಿಸುತ್ತಿ ದೆಯೇ ಹೊರತು ಆಡಳಿತದ ಬಗ್ಗೆ ನಿರ್ಲಕ್ಷಿಸುತ್ತಿದೆ ಎಂದು ದೂರಿದ ಅವರು, ಮೀಸಲಾತಿ ಘೋಷಣೆಗೆ ವಿಳಂಬ ಮಾಡುತ್ತಾ ಚುನಾಯಿತ ಪ್ರತಿನಿಧಿಗಳ ಹಕ್ಕನ್ನು ಕಸಿದು ಕೊಂಡಿದೆ ಎಂದರು.
ಪಿಎಸ್‌ಐ ಹಗರಣದ ತನಿಖೆ ಯನ್ನು ಸಿಐಡಿ ಪ್ರಾಮಾಣಿಕವಾಗಿ ಮಾಡಿದೆ. ಆದರೆ ಸರ್ಕಾರ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲು ಹೊರಟಿದೆ. ಇದಕ್ಕೂ ಮಿಗಿಲಾದ ಉನ್ನತ ತನಿಖೆಯಾಗಲಿ ಎಂದು ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ eನೇಂದ್ರ ಹೇಳಿದರು.
ಬಂಧನಕ್ಕೊಳಗಾದ ಐವರು ಶಂಕಿತ ಉಗ್ರರು ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ನಡೆಸುವವರಿದ್ದರು. ಇವರ ಬಂಧನಕ್ಕೆ ಪೊಲೀಸ್ ಇಲಾಖೆಗೆ ಅಭಿನಂದಿಸಿದ ಅವರು, ಪ್ರಕರ ಣವನ್ನು ಎನ್‌ಐಎಗೆ ವಹಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮೀ ಶಂಕರ ನಾಂiiಕ್, ಪಾಲಿಕೆ ಸದಸ್ಯರಾದ ಇ. ವಿಶ್ವಾಸ್, ಅನಿತಾ ರವಿಶಂಕರ್, ಸಂಗೀತಾ ನಾಗರಾಜ್, ಲತಾ ಗಣೇಶ್, ಆಶಾ ಚಂದ್ರಪ್ಪ ಸೇರಿದಂತೆ ಜಿಯ ಸ್ಥಳೀಯ ಸಂಸ್ಥೆಗಳ ಪಕ್ಷದ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.