ಜಿಲ್ಲಾ ಸುದ್ದಿತಾಜಾ ಸುದ್ದಿ

ಹಾನಿಗೊಳಗಾಗಿದ್ದ ಈಶ್ವರಲಿಂಗ ಧಾರ್ಮಿಕ ಪೂಜೆಗಳೊಂದಿಗೆ ಪುನರ್ ಪ್ರತಿಷ್ಠಾಪನೆ…

Share Below Link

ಭದ್ರಾವತಿ: ನದಿಯಲ್ಲಿ ನೀರು ಹರಿದು ಅದರಲ್ಲಿ ಬಂದ ಗಿಡ ಗಂಟೆಗಳ ಜೊತೆಗೆ ಮರದ ದಿಮ್ಮಿಗಳು ಸೇರಿದಂತೆ ಇನ್ನಿತರ ವಸ್ತುಗಳು ಭದ್ರಾ ನದಿಯಲ್ಲಿರುವ ಶ್ರೀ ಈಶ್ವರ ಲಿಂಗ ಮಂಟಪಕ್ಕೆ ಸಿಕ್ಕಿಹಾಕಿಕೊಳ್ಳುತ್ತದೆ. ಅಂತೆಯೇ ಪ್ರತಿವರ್ಷ ನದಿಯಲ್ಲಿ ನೀರು ಕಡಿಮೆ ಆದ ನಂತರ ಇವುಗಳನ್ನು ತೆರೆವುಗೊಳಿಸಿ ದೇವರ ವಿಗ್ರಹ ಗಳನ್ನು ಸ್ವಚ್ಚಗೊಳಿಸಲಾಗುತ್ತದೆ.
ಆದರೆ ಕೆಲ ತಿಂಗಳ ಹಿಂದೆ ಬಿದ್ದ ಮಳೆ ನೀರು ಭಾರಿ ಪ್ರಮಾಣದಲ್ಲಿ ನದಿಯಲ್ಲಿ ಹರಿದ ಪರಿಣಾಮ ಅದರಲ್ಲಿ ತೇಲಿ ಬಂದ ಗಿಡ ಗಂಟೆಗಳು ಶಿವಲಿಂಗಕ್ಕೆ ಬಡಿದು ಅದು ಪ್ರತಿಷ್ಟಾಪಿಸಿದ್ದ ಪೀಠದಿಂದ ಕಿತ್ತು ಹೊರ ಬಂದು ಅ ಸಮೀಪದಲ್ಲಿ ಗಿಡಗಳಿಗೆ ಸಿಕ್ಕಿಕೊಂಡಿದೆ. ನದಿಯಲ್ಲಿ ನೀರು ಕಡಿಮೆ ಆದ ನಂತರ ಇದು ಗೋಚರಿಸಿದೆ. ಆದರೆ ಅಕ್ಕಪಕ್ಕದಲ್ಲಿದ್ದ ಗಣಪತಿ, ಸುಬ್ರಮಣ್ಯ, ಬಸವಣ್ಣ ವಿಗ್ರಹಗಳಿಗೆ ಏನೂ ಆಗಿರದಿರುವುದು ವಿಶೇಷ.
ಈಗ ನೂತನವಾಗಿ ಈಶ್ವರ ಲಿಂಗ ವಿಗ್ರಹವನ್ನು ಹಳೇ ನಗರ ವೀರಶೈವ ಸೇವಾ ಸಮಾಜದ ನೇತೃತ್ವದಲ್ಲಿ ತರೀಕೆರೆ ಹಿರೇಮಠದ ಶ್ರೀ.ಷ.ಬ್ರ. ಜಗದೀಶ್ವರ ಶಿವಾಚಾರ್ಯ ಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಶಾಸ್ತ್ರೋಕ್ತವಾಗಿ ಧಾರ್ಮಿಕ ಪೂಜೆ ವಿಧಾನ ಗಳೊಂದಿಗೆ ಪುನರ್ ಪ್ರತಿಷ್ಟಾಪನೆ ನಡೆಸಲಾಯಿತು.