ಶತಾಯುಷಿ ಪ್ರಸೂತಿತe ಹುಲಿಗಮ್ಮ ಇನ್ನು ನೆನಪು ಮಾತ್ರ…
ಹರಿಹರ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸೂಲಗಿತ್ತಿಯಾಗಿ ಸೇವೆ ಸಲ್ಲಿಸಿದ ಶತಾಯುಷಿ ಶ್ರೀಮತಿ ಹುಲಿಗಮ್ಮ ನೀಲಕಂಠಸಾ ರಾಜೋಳಿ (೧೦೨) ಇವರು ಏ.೩೦ರ ಮಂಗಳವಾರ ನಿಧನರಾಗಿದ್ದು ಎಸ್.ಎಸ್.ಕೆ. ಸಮಾಜ ಮತ್ತು ರಾಜೋಳಿ ಮನೆತನಕ್ಕೆ ತುಂಬಲಾರದ ನಷ್ಟವಾಗಿದೆ.
ನಮ್ಮಲ್ಲಿ ಎಷ್ಟೋ ಮಹಾನು ಭಾವರು ತೆರೆ ಮರೆಯಲ್ಲಿಯೇ ಸೇವೆ ಸಲ್ಲಿಸುತ್ತಾ ಬಂದಿzರೆ. ಪರೋಪಕಾರಮಿದಂ ಶರೀರಂ ಎನ್ನುವಂತೆ ಸಮಾಜ ಸೇವೆಯೇ ನಮ್ಮ ಮುಖ್ಯ ಗುರಿ ಎಂದು ತಿಳಿದವರು ಇಂದು ಸಿಗುವುದು ಅಪರೂಪ. ಇಂತಹ ಅಪರೂಪದ ಸಮಾಜ ಸೇವಕಿ ಎಂದರೆ ಹರಿಹರದ ಹುಲಗೆಮ್ಮ ನೀಲಕಂಠಸಾ ರಾಜೋಳಿಯವರು. ಜನಪದ ವೈದ್ಯಕೀಯ ಪದ್ದತಿಯ ರಾಯಭಾರಿ ರಾಜೋಳಿ ಮನೆತನಕ್ಕೆ ಸೇರಿದ ಈ ಹುಲಿಗಮ್ಮನವರು. ಹರಿಹರ ನಗರದ ಸರಕಾರಿ ಆಸ್ಪತ್ರೆಯಲ್ಲಿ ಡಿಗ್ರೂಪ್ ನೌಕರರಾಗಿ ೩೫ ವರ್ಷಗಳ ಕಾಲ ಸೇವೆ ಸಲ್ಲಿಸಿದ ಶತಾಯುಷಿ ಗಂಗೂಬಾಯಿ ಯವರು. ಇವರು ಮೂಲತಃ ಕೊಪ್ಪಳ ಜಿಯ ಕಾತರಿಕಿ ಗ್ರಾಮದ ಪವಾರ್ ಕುಟುಂಬದ ಮನೆತನಕ್ಕೆ ಸೊಸೆಯಾಗಿ ಹೋದವರು. ಕೆಲಸದ ನಿಮಿತ್ತ ಹರಿಹರಕ್ಕೆ ವಲಸೆ ಬಂದು ಇ ನೆಲೆಸಿದರು. ಪವಾರ್ ಕುಟುಂಬದ ನೇಕಾರ ವೃತ್ತಿಯ ಗಂಗರಾ ಮಸಾ ಹಾಗೂ ಗಂಗೂಬಾಯಿಯವರಿಗೆ ಇಬ್ಬರು ಹೆಣ್ಣುಮಕ್ಕಳು. ಹುಲಗಮ್ಮ ಹಾಗೂ ಪಾರ್ವತಿಬಾಯಿ. ತಮ್ಮ ೨೨ನೇ ವಯಸ್ಸಿಗೆ ಈ ವೃತ್ತಿಯನ್ನು ಕಲಿತಿ ದ್ದರು. ಅಂದಿನಿಂದ ಇಲ್ಲಿಯವರೆಗೆ ಸಾಂಪ್ರದಾಯಿಕ ಪದ್ದತಿಯ ಮೂಲಕ ಅಂದಾಜು ಸುಮಾರು ೧೦ ಸಾವಿರಕ್ಕಿಂತಲೂ ಅಧಿಕ ಹೆರಿಗೆಗಳನ್ನು ಮಾಡಿಸಿರುವ ಖ್ಯಾತಿ ಶತಾಯುಶಿಯಾದ ಹುಲಗಮ್ಮ ನವರಿಗೆ ಸಲ್ಲುತ್ತದೆ. ಹೆರಿಗೆ ಮಾಡಿಸಿದ್ದಕ್ಕೆ ಪ್ರತಿಯಾಗಿ ಅವರು ಏನನ್ನು ಬಯಸುತ್ತಿರಲಿಲ್ಲ. ತಮ್ಮ ತಾಯಿಯವರಿಂದ ಕಲಿತು ಸಲೀಸಾಗಿ ಹೆರಿಗೆ ಮಾಡಿಸುತ್ತಿದ್ದರು. ತಮ್ಮ ತಾಯಿಯವರ ಕಸುಬನ್ನು ಮುಂದು ವರೆಸಿಕೊಂಡು ಬಂದಂತಹ ಬಂಧುತ್ವ ಬೆಸೆ ಯುವ ಕಾಯಕವೆಂದರೆ ತಪ್ಪಾಗಲಾರದು.
ಇವರ ತಾಯಿಯವರಾದ ಗಂಗಜ್ಜಿ ಎಂದೇ ಹೆಸರಾದ ಗಂಗೂಬಾಯಿಯ ವರಿಂದ ಸೂಲಗಿತ್ತಿಯ ಪವಿತ್ರ ವಿದ್ಯೆಯನ್ನು ಕಲಿತು ಮುಂದುವರೆಸಿದರು. ಹರಿಹರ ನಗರದಲ್ಲಿ ಇವರ ತಾಯಿ ಗಂಗಜ್ಜಿಯವರ ಸೇವೆ ಅನನ್ಯ ವಾದುದು. ಏಕೆಂದರೆ ಈಗಲೂ ಹುಲಗಮ್ಮನವರಿಗೆ ಹಲವರು ಗಂಗಜ್ಜಿ ಎಂದೇ ಕರೆಯುತ್ತಿzರೆ. ಅಂದರೆ ೧೦೪ ವರ್ಷ ಜೀವಿಸಿದ ಇವರ ತಾಯಿ ಗಂಗಜ್ಜಿ ನಿಷ್ಠಾವಂತ ಸೂಲಗಿತ್ತಿ ಎಂದು ಹರಿಹರ ನಗರದ ಮನೆಮಾತಾಗಿದೆ. ಹತ್ತಿಯಂತೆ ನೂಲು, ತಾಯಿಯಂತೆ ಮಗಳು ಎಂಬ ಗಾದೆಮಾತು ಅಕ್ಷರಸಹ ಇವರಿಗೆ ಅನ್ವಯವಾಗುವುದು.
ಇವರ ತಾಯಿಯ ನಿವೃತ್ತಿಯ ನಂತರ ೭ನೇ ತರಗತಿಯನ್ನು ಅಭ್ಯಾಸ ಮಾಡಿದ ಹುಲಗಮ್ಮ ಹರಿಹರದ ಸರಕಾರಿ ಆಸ್ಪತ್ರೆಯ ಸೂಲಗಿತ್ತಿ ಕೆಲಸಕ್ಕೆ ಸೇರಿದರು. ಗರ್ಭಿಣಿ ಯರ ಭ್ರೂಣದ ನಾಡಿಮಿಡಿತ ಅರಿತು ನಂತರ ಹೆರಿಗೆ ಮಾಡಿಸುವಷ್ಟು ನಿಪುಣರಾ ಗಿದ್ದರು. ಕಡಿಮೆ ಅಭ್ಯಾಸ ಮಾಡಿದ್ದರೂ ಹುಲಿಗಮ್ಮ ತಾವು ಹೊಂದಿದ್ದ ಪ್ರಸೂತಿ ವಿದ್ಯೆ ಯಿಂದ ಅಂದಿನ ಹಲವಾರು ಮಹಿಳೆಯ ರಿಗೆ ಒಂದು ವಿಶ್ವವಿದ್ಯಾಲಯದಂತೆ ತೋರುತ್ತಿದ್ದರು. ರಾಣೆಬೆನ್ನೂರಿನ ಮೆಡ್ಲೇರಿಯ ನಾಟಿವೈದ್ಯರಾದ ನೀಲಕಂಠಸಾ ರಾಜೋಳಿ ಅವರನ್ನು ವಿವಾಹ ವಾದರು. ತಮ್ಮ ಕೆಲಸದ ನಿಮಿತ್ತ ಈ ಕುಟುಂಬದವರು ಹರಿಹರ ದಲ್ಲಿಯೇ ಬಂದು ನೆಲೆಸಿದರು.
ಇವರಿಗೆ ೭ಜನ ಗಂಡು ಮಕ್ಕಳು. ಪುಂಡಲೀಕಸಾ, (ಕೊನೆಯ ಪುಟದಿಂದ)
ಸಿದ್ದಸಾ, ಶಂಕರಸಾ, ನಾರಾ ಯಣಸಾ, ಪಾಂಡುರಂಗಸಾ, ಅಂಬಾಸಾ ಹಾಗೂ ವಿಠಲಸಾ. ಇವರು ಈಗಿಲ್ಲ, ಆದರೆ ಈ ೭ ಜನ ಗಂಡುಮಕ್ಕಳ ಮೊಮ್ಮಕ್ಕಳು ಪ್ರಸ್ತುತ ಹರಿಹರದಲ್ಲಿ ವಾಸವಾಗಿzರೆ.
ಪಟೆಗಾರ ಮನೆತನಕ್ಕೆ ಪ್ರಮುಖವಾದ ಹಬ್ಬ ದಸರಾ- ನವರಾತ್ರಿ. ಇವರ ಮನೆಯಲ್ಲಿ ಹಬ್ಬಹರಿದಿನಗಳನ್ನು ಆಚರಿಸುವ ಸಂದರ್ಭದಲ್ಲಿ ಯಾರಾದರೂ ಹೆರಿಗೆ ಮಾಡಿಸುವ ಕೆಲಸಕ್ಕೆ ಕರೆದರೆ ಸಾಕು ದಿಢೀರನೆ ಆ ಕೆಲಸಕ್ಕೆ ಹಾಜರಾಗುತ್ತಿದ್ದವರು ಹುಲಗಮ್ಮನವರು. ಇವರಿಗೆ ಹಬ್ಬ, ಪೂಜೆ, ಪ್ರಾರ್ಥನೆ ಎಂದರೆ ತಾವು ಮಾಡುವ ಕಾಯಕ ಮಾತ್ರ. ಕಾಯಕದ ದೇವರನ್ನು ಕಾಣುವ ಪ್ರವೃತ್ತಿ ಇವರದಾಗಿತ್ತು. ಇದೂವರೆಗೆ ಯಾವುದೇ ಸಭೆ- ಸಮಾರಂಭ ಕೊಡಮಾಡುವ ಸನ್ಮಾನಗಳಿಗೆ ಉತ್ಸುಕರಾಗದೆ ತಮ್ಮ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವ ಮನೋಭಾವ ಇವರದು. ತಾಯಿಗೆ ಮರು ಹುಟ್ಟು ಕೊಡುವುದು, ಮಗುವಿಗೆ ಹೊಸಹುಟ್ಟು ಕೊಡುವುದೇ ಇವರ ಬಾಳಿನ ಬಹುಮುಖ್ಯ ಕೆಲಸವೆಂದು ಅರಿತಿದ್ದರು. ಇವರಿಗೆ ಸಲ್ಲುವ ಗೌರವ, ಪ್ರಶಸ್ತಿ-ಪುರಸ್ಕಾರಗಳು ಇವರ ತಾಯಿಯವರಾದ ಗಂಗಜ್ಜಿಯವರಿಗೆ ಸಲ್ಲುತ್ತವೆ ಎಂದು ಹೇಳುವ ಕಾಯಕ ನಿಷ್ಟೆಯ ನಿಷ್ಠಾವಂತ ಮಹಿಳೆ ಹುಲಗಮ್ಮನವರು. ಇಂತಹ ಸಾಮಾಜಿಕ ಸೇವೆಯ ಮೂಲಕ ಬಾಣಂತಿಯರ ಪಾಲಿನ ದೇವರು ಎನಿಸಿಕೊಂಡವರು ಈ ಹುಲಿಗಮ್ಮ ನವರು. ಅವರ ಜೀವನ ಬದುಕು ಸಮಾಜಕ್ಕೆ ಮಾದರಿಯಾಗಲಿ. ಹರಿಹರ ನಗರದ ಹೆಸರಾಂತ ನಮ್ಮ ನಕ್ಷತ್ರ ಟಿವಿ ಮಾಲಕ, ಪತ್ರಕರ್ತ ಕೃಷ್ಣಾ ಪಿ.ರಾಜೋಳಿ ಮತ್ತು ಸಹೋದರ ಮಂಜುನಾಥ ಪಿ. ರಾಜೋಳಿ. ಈ ಮಹಾತಾಯಿಯ ಮೊಮ್ಮಕ್ಕಳು.
ಸ್ಮರಿಸಬಹುದಾದ ಮತ್ತೊಂದು ಮಹತ್ವದ ವಿಷಯವೆಂದರೆ, ಹಿರಿಯ ನಾಗರಿಕರು ಮತ್ತು ವಿಶೇಷ ಚೇತನ ಮತದಾರರಿಗೆ ಮನೆಯಲ್ಲಿ ಮತದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಏ.೨೫ ಗುರುವಾರ ತಮ್ಮ ಮನೆಯಲ್ಲಿಯೇ ೨೦೨೪ರ ಲೋಕಸಭಾ ಚುನಾವಣೆಯ ಮತ ದಾನ ಮಾಡುವುದರ ಮೂಲಕ ಇಳಿ ವಯಸ್ಸಿನಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದರು.
ಮರೆಯಲಾಗದ ಇನ್ನೊಂದು ವಿಷಯವೆಂದರೆ ಇವರ ಜೀವಮಾನದ ಸಾಧನೆಯನ್ನು ಗುರುತಿಸಿ, ಹರಿಹರ ನಗರದ ಎಸ್.ಎಸ್.ಕೆ. ಸಮಾಜದಿಂದ ಕೊಡಮಾಡಿದ ಶ್ರೀ ಸಹಸ್ರಾರ್ಜುನ ಸೇವಾ ಪ್ರಶಸ್ತಿಗೆ ಭಾಜನರಾಗಿದ್ದರು. ಇಂತಹ ಅಗಮ್ಯ ಚೇತನದ ಮಹನೀಯರು ಇಂದು ಪ್ರಾತಃಸ್ಮರಣೀಯರಾಗಿzರೆ. ಭಗವಂತ ಇವರ ಆತ್ಮಕ್ಕೆ ಚಿರಶಾಂತಿಯನ್ನು ದಯಪಾಲಿಸಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ.
ಹೆಚ್‌ಎಂ. ಗುರುಬಸವರಾಜಯ್ಯ.ಉಪನ್ಯಾಸಕರು, ನಂದಿಪುರ