ಜಿಲ್ಲಾ ಸುದ್ದಿತಾಜಾ ಸುದ್ದಿ

ಭಜನೆ ಪ್ರಕಾರವನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ಅಗತ್ಯವಿದೆ…

Share Below Link

ಸಾಗರ : ನಮ್ಮ ಸಂಸ್ಕತಿಯ ತಿರುಳಾದ ಭಜನೆ, ಹಾಡು, ಸಂಗೀತ ಪ್ರಕಾರಗಳನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ಅಗತ್ಯವಿದೆ ಎಂದು ಮಾಜಿ ಸಚಿವ ಎಚ್. ಹಾಲಪ್ಪ ಹರತಾಳು ಹೇಳಿದರು.
ಇಲ್ಲಿನ ಶೃಂಗೇರಿ ಶಂಕರ ಮಠದ ಸಭಾಂಗಣದಲ್ಲಿ ಶ್ರೀ ಶೃಂಗೇರಿ ಶಂಕರ ಮಠ, ಹವ್ಯಕ ಆತ್ಮಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ದಿನೇಶ್ ಜೋಷಿ ಫೌಂಡೇಷನ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಅಖಂಡ ಭಜನಾ ಸ್ಪರ್ಧೆಯ ಸಮಾರೋಪದಲ್ಲಿ ಅವರು ಮಾತನಾಡಿ, ಈಗಿನ ಯುವ ಜನಾಂಗ ಈ ಜವಾಬ್ದಾರಿ ಹೊರುವ ವಾರಸುದಾರರು ಎಂದರು.
ಪ್ರಸ್ತುತ ದಿನಮಾನದಲ್ಲಿ ಮೊಬೈಲ್, ಫೇಸ್‌ಬುಕ್ ಇತ್ಯಾದಿ ಆಧುನಿಕ ತಂತ್ರeನದಿಂದ ನಮ್ಮ ಪಾರಂಪರಿಕ ಸಾಹಿತ್ಯ, ಸಂಸ್ಕತಿ, ಭಜನೆಯ ಪ್ರಕಾರಗಳು ಜನರಿಂದ ದೂರವಾಗುತ್ತಿವೆ. ಇದನ್ನು ನಮ್ಮ ಮಕ್ಕಳು, ಮೊಮ್ಮಕ್ಕಳವರೆಗೆ ಮುಂದುವರಿಸಬೇಕು. ಭಜನೆ ಜನಸಾಮಾನ್ಯರಿಗೆ ಅರ್ಥವಾಗುತ್ತದೆ. ಇದಕ್ಕೆ ರಾಗ, ತಾಳ ಬೇಕಿಲ್ಲ. ಇಂಥ ಸ್ಪರ್ಧೆಯಿಂದ ಭಜನಾ ಕ್ಷೇತ್ರ ವಿಸ್ತಾರವಾಗುತ್ತದಲ್ಲದೇ, ಪರಸ್ಪರ ಪ್ರೀತಿ ಹೆಚ್ಚಾಗುತ್ತದೆ ಎಂದರು.


ವಿವಿಧ ಕ್ಷೇತ್ರದ ಸಾಧಕರಾದ ಲಲಿತಾ ನಾರಾಯಣಮೂರ್ತಿ, ಗಣೇಶ್ ಬೆಳಲಮಕ್ಕಿ, ಆರ್.ವಿ. ಹೆಗಡೆ, ಚಂದ್ರಶೇಖರ ನೀಚಡಿ, ಪ್ರಭಾ ವೆಂಕಟೇಶ್, ಕಸ್ತೂರಿ ಕೃಷ್ಣಮೂರ್ತಿ, ಜ್ಯೋತಿ ಮಣೂರು ಅವರಿಗೆ ಭಜನಾ ಪೋಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಶೃಂಗೇರಿ ಶಂಕರ ಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ಸದಸ್ಯ ಮಹೇಶ್‌ವಿ., ಅಡಿಕೆ ವರ್ತಕ ಮಧುಕರ ಎನ್.ಹೆಗಡೆ , ಶೈಕ್ಷಣಿಕ ತಜ್ಞ ನಾರಾಯಣಮೂರ್ತಿ ಕಾನುಗೋಡು, ಧಾರ್ಮಿಕ ಚಿಂತಕಿ ಸವಿತಾ ಶ್ರೀಕಾಂತ್, ನ್ಯಾಯವಾದಿ ಕೆ.ಎಸ್.ಗೌತಮ್ ಉಪಸ್ಥಿತರಿದ್ದರು.
ಭಜನಾ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದ ಮನೋನ್ಮಣಿಮೂರ್ತಿ ಕಮ್ಮರಡಿ, ವಿದ್ವಾನ್ ಜಿ.ಅರುಣ್ ಕುಮಾರ್, ವಿದುಷಿ ರೋಹಿಣಿ ಎನ್.ಮೂರ್ತಿ , ಶಿವಾನಂದ ಭಟ್, ವಿದುಷಿ ಉಮಾ ದಿಲೀಪ್, ನಾಗರಾಜ ಭಟ್, ವಸಂತವಾಣಿ ಅವರನ್ನು ಗೌರವಿಸಲಾಯಿತು.