ಭೀಕರ ರೈಲು ಅಪಘಾತ: ಮೃತರ ಸಂಖ್ಯೆ 260ಕ್ಕೆ ಏರಿಕೆ…
ಕೋಲ್ಕತ್ತ: ನಿನ್ನೆ ಸಂಜೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಕೋರಮಂಡಲ್ ಎಕ್ಸ್‌ಪ್ರೆಸ್‌ನ ನಾಲ್ಕು ಬೋಗಿಗಳು ಹಳಿತಪ್ಪಿದ ಪರಿಣಾಮ ಎದುರು ಮಾರ್ಗದಿಂದ ಬರುತ್ತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ೨೬೧ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದು, ೯೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಘಾತ ಸ್ಥಳದಲ್ಲಿ ಎನ್ ಡಿ ಆರ್ ಎಫ್ ತಂಡಗಳು ಸ್ಥಳಕ್ಕೆ ಆಗಮಿಸಿ ಭರದಿಂದ ರಕ್ಷಣಾ ಕಾರ್ಯ ಕೈಗೊಂ ಡಿದ್ದು, ಜೂ.೩ರ ಇಂದು ಮಧ್ಯಾಹ್ನದ ವೇಳೆಗೆ ರಕ್ಷಣಾ ಕಾರ್ಯ ಪೂರ್ಣಗೊಳಿಸಲಾಗಿದೆ.
ಕೋರಮಂಡಲ್ ಎಕ್ಸ್ ಪ್ರೆಸ್ ಕೋಲ್ಕತ್ತಾ ಬಳಿಯ ಶಾಲಿಮಾರ್ ನಿಲ್ದಾಣದಿಂದ ಚೆನ್ನೈ ಸೆಂಟ್ರಲ್‌ಗೆ ತೆರಳುತ್ತಿದ್ದಾಗ ಜೂ.೨ರ ನಿನ್ನೆ ರಾತ್ರಿ ೭.೨೦ರ ಸುಮಾರಿಗೆ ಬಹಂಗಾ ಬಜರ್ ನಿಲ್ದಾಣದಲ್ಲಿ ಅಪಘಾತ ಸಂಭವಿಸಿದೆ.
ಈ ಘಟನೆ ಕುರಿತು ರೈಲ್ವೆ ವಕ್ತಾರ ಅಮಿ ತಾಭ್ ಶರ್ಮಾ ಮಾತನಾಡಿ, ಶಾಲಿಮಾರ್ -ಚೆನ್ನೈ ಕೋರಮಂಡಲ್ ಎಕ್ಸ್ ಪ್ರೆಸ್ ಬಾಲಸೋರ್ ಬಳಿ ನಿನ್ನೆ ಸಂಜೆ ೭ ಗಂಟೆ ಸುಮಾ ರಿಗೆ ಹಳಿತಪ್ಪಿದೆ. ಈ ವೇಳೆ ಬೋಗಿಗಳು ಹಳಿ ಮೇಲೆ ಬಿದ್ದಿವೆ. ಸ್ವಲ್ಪ ಸಮಯದ ನಂತರ, ಯಶವಂತಪುರದಿಂದ ಹೌರಾಕ್ಕೆ ಹೋಗುತ್ತಿದ್ದ ಮತ್ತೊಂದು ರೈಲು ಆ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ, ಇದರಿಂದಾಗಿ ಅದರ ೩-೪ ಬೋಗಿಗಳು ಸಹ ಹಳಿತಪ್ಪಿವೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ತಂಡಗಳು ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ಪೂರ್ಣಗೊಳಿಸಿ ದ್ದಾರೆ ಎಂದು ವಿಶೇಷ ಪರಿಹಾರ ಆಯುಕ್ತರ ಕಚೇರಿಯ ಪ್ರಕಟಣೆ ತಿಳಿಸಿದೆ.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಸ್ಥಳೀಯ ಜನರ ಸಹಾಯದಿಂದ ರಕ್ಷಣಾ ಕಾರ್‍ಯಾಚರಣೆ ಇಂದು ಮಧ್ಯಾಹ್ನದ ವೇಳೆಗೆ ಯಶಸ್ವಿಯಾಗಿ ಪೂರ್ಣಗೊಳಿಸಲಾ ಗಿದೆ.
ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆಯ ನಾಲ್ಕು ಕಾಲಂಗಳು, ರಾಷ್ಟ್ರೀಯ ವಿಪ ತ್ತು ನಿರ್ವಹಣಾ ಪಡೆಯ ಮೂರು ಕಾಲಂಗಳು ಮತ್ತು ೬೦ ಆಂಬ್ಯುಲೆನ್ಸ್‌ಗಳು ಗಾಯಾಳು ಗಳನ್ನು ರಕ್ಷಿಸುವಲ್ಲಿ ನಿರತವಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಮತ್ತು ರೈಲ್ವೇ ಸಹಾಯವಾಣಿಯನ್ನು ಆರಂಭಿಸಿದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲುಗಳು ಹಳಿ ತಪ್ಪಲು ಕಾರಣವೇನು ಎಂಬುದನ್ನು ತಿಳಿಯಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಿರುವುದಾಗಿ ಇಂದು ಪ್ರಕಟಿಸಿದ್ದಾರೆ. ಅಪಘಾತವು ದುರದೃಷ್ಟಕರ. ಘಟನೆ ಬಗ್ಗೆ ಸಚಿವಾಲಯಕ್ಕೆ ವರದಿ ಬಂದ ತಕ್ಷಣ ರಕ್ಷಣಾ ಕಾರ್‍ಯಾಚರಣೆಯನ್ನು ಪ್ರಾರಂಭಿ ಸಲಾಯಿತು ಎಂದು ಸಚಿವರು ಹೇಳಿದ್ದಾರೆ.
ಇನ್ನು ರೈಲ್ವೆ ಸಚಿವಾಲಯವು ಪರಿಹಾರ ವನ್ನು ಘೋಷಿಸಿದೆ. ಮೃತರ ಸಂಬಂಧಿಕರಿಗೆ ೧೦ ಲಕ್ಷ ರೂ. ತೀವ್ರವಾಗಿ ಗಾಯಗೊಂ ಡವರಿಗೆ ೨ ಲಕ್ಷ ರೂ. ಸಣ್ಣಪುಟ್ಟ ಗಾಯಾಳುಗಳಿಗೆ ೫೦,೦೦೦ ರೂ. ಎಂದು ಹೇಳಿದೆ.
ರೈಲು ದುರಂತ: ರಾಜ್ಯದ ಎಲ್ಲಾ ಪ್ರಯಾಣಿಕರು ಸುರಕ್ಷಿತ:
ಬೆಂಗಳೂರು: ಒಡಿಶಾದ ಬಾಲಸೋರ್ ಬಳಿ ಅಪಘಾತಕ್ಕೀಡಾದ ರೈಲಿನಲ್ಲಿದ್ದ ರಾಜ್ಯದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಕರ್ನಾಟಕ ರೈಲ್ವೆ ಡಿಐಜಿ ಶಶಿ ಕುಮಾರ್ ಶನಿವಾರ ಇಲ್ಲಿ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಶಶಿಕುಮಾರ್, ಕರ್ನಾಟಕದಿಂದ ಹೊರಟಿದ್ದ ರೈಲಿಗೆ ಹಾನಿಯಾಗಿದೆ. ರೈಲಿನ ೨೩ ಕೋಚ್ ಗಳ ಪೈಕಿ ಮೂರು ಬೋಗಿಗಳಿಗೆ ತೊಂದರೆಯಾಗಿದೆ ಎಂದರು.
ಸದ್ಯಕ್ಕೆ ಈ ಬೋಗಿಗಳಲ್ಲಿ ರಾಜ್ಯದ ಯಾವುದೇ ಪ್ರಯಾಣಿಕರು ಇರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅಪಘಾತದ ನಂತರ ರೈಲ್ವೆ ಅಧಿಕಾರಿ ಗಳು ಒಡಿಶಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಡಿಐಜಿ ತಿಳಿಸಿದ್ದಾರೆ.
ನಾಲ್ಕು ಸ್ಥಳಗಳಲ್ಲಿ ಸಹಾಯವಾಣಿ ಗಳನ್ನು ಸ್ಥಾಪಿಸಲಾಗಿದೆ ಮತ್ತು ರಾಜ್ಯದ ಯಾವುದೇ ಪ್ರಯಾಣಿಕರು ಗಾಯಗೊಂಡಿರುವ ಅಥವಾ ಸತ್ತಿರುವ ಬಗ್ಗೆ ಈವರೆಗೆ ವರದಿಯಾಗಿಲ್ಲ ಎಂದು ಅವರು ಪುನರುಚ್ಚರಿಸಿದರು.
ಘಟನೆಯಲ್ಲಿ ಕರ್ನಾಟಕದ ಜನರು ಪ್ರಯಾಣಿಸಿದ ಬೋಗಿಗಳಿಗೆ ಹಾನಿಯಾಗಿಲ್ಲ. ಡಿವೈಎಸ್ಪಿ ಮತ್ತು ಇತರರ ಶ್ರೇಣಿಯ ಅಧಿಕಾರಿಗಳ ತಂಡವನ್ನು ಘಟನಾ ಸ್ಥಳಕ್ಕೆ ಕಳುಹಿಸ ಲಾಗುವುದು ಎಂದು ವಿವರಿಸಿದರು.
ನಾವು ನಾಲ್ಕು ಸಹಾಯ ಕೇಂದ್ರಗಳನ್ನು ಪ್ರಾರಂಭಿಸಿದ್ದೇವೆ ಮತ್ತು ಇಲ್ಲಿಯವರೆಗೆ ಯಾವುದೇ ಕರೆಗಳನ್ನು ಸ್ವೀಕರಿಸಿಲ್ಲ. ಸುಳ್ಳು ಮಾಹಿತಿ ನೀಡಬಾರದು ಮತ್ತು ಇದುವರೆಗೂ ಕರ್ನಾಟಕದ ಪ್ರಯಾಣಿಕರ ಸಾವಿನ ಸುದ್ದಿ ಬಂದಿಲ್ಲ ಎಂದು ಡಿಐಜಿ ಹೇಳಿದರು.
ಶುಕ್ರವಾರ ಅಪಘಾತಕ್ಕೀಡಾದ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (ಬೆಂಗಳೂರು)- ಹೌರಾ ಎಕ್ಸ್‌ಪ್ರೆಸ್ ರೈಲಿನಲ್ಲಿ ರಾಜ್ಯದ ೧೧೦ ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ಮೂಲಗಳು ವಿವರಿಸಿವೆ. ಅದೃಷ್ಟವಶಾತ್ ದುರಂತದಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಯಾಣಿಕರು ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದವರಾಗಿದ್ದು, ಬೆಂಗಳೂರಿನಿಂದ ಎಸ್ ೫, ಎಸ್ ೬ ಮತ್ತು ಎಸ್ ೭ ಬೋಗಿಗಳಲ್ಲಿ ಪ್ರಯಾಣಿಸಿದ್ದರು. ಎಂಜಿನ್ ಬದಲಾಯಿಸಿದ ನಂತರ, ಅವರೆಲ್ಲರನ್ನೂ ಎಂಜಿನ್ ನಂತರ ಮೊದಲ ಕೋಚ್‌ಗೆ ಸ್ಥಳಾಂತರಿಸಲಾಯಿತು. ಇನ್ನೊಂದು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ರೈಲಿನ ಕೊನೆಯ ನಾಲ್ಕು ಬೋಗಿಗಳಿಗೆ ತೀವ್ರ ಹಾನಿಯಾಗಿದೆ ಎಂದು ಮೂಲಗಳು ವಿವರಿಸಿವೆ.
ಮೃತದೇಹಗಳ ರಾಶಿ; ಭಯಾನಕ ಅನುಭವ:
ಭುವನೇಶ್ವರ: ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿ ಯಾಗಿ ಬಿದ್ದಿರುವ ವಸ್ತುಗಳು, ಜನರ ಚೀರಾಟ, ಆರ್ತನಾದ, ಮತ್ತೊಂದೆಡೆ ಮೃತದೇಹಗಳ ರಾಶಿ. ಇವುಗಳನ್ನು ನೋಡಿ ಒಂದು ಕ್ಷಣ ಸ್ತಂಭೀಭೂತರಾಗಿ ಹೋದೆವು. ಒಡಿಶಾದ ಬಾಲಸೋರ್ ಬಳಿ ಸಂಭವಿಸಿದ ಭೀಕರ ರೈಲು ಅಪಘಾತದ ಹೃದಯ ವಿದ್ರಾವಕ ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಗಳ ನೋವಿನ ನುಡಿಗಳಿವು.
ಜೂ.೨ರ ಶುಕ್ರವಾರ ಸಂಜೆ ೬.೩೦ರಿಂದ ೭ರ ಸುಮಾರಿಗೆ ರೈಲಿನಲ್ಲಿ ಇಡೀ ಪ್ರಯಾಣಿಕರ ಕಲರವ. ಕೆಲವೆಡೆ ಹಿರಿಯರ ಮಾತುಗಳು, ಕೆಲವೆಡೆ ಮಕ್ಕಳ ನಗು. ಊಟಕ್ಕೆ ಏನು ಆರ್ಡರ್ ಮಾಡಬೇಕೆಂಬ ಚರ್ಚೆ. ಒಟ್ಟಿನಲ್ಲಿ ಶಾಲಿಮಾರ್‌ನಿಂದ ಚೆನ್ನೈ ಸೆಂಟ್ರಲ್‌ಗೆ ಹೋಗುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಒಳಗೆ ಸಂಭ್ರಮದ ವಾತಾವರಣವಿತ್ತು. ಇನ್ನೇನು ಕೆಲವೇ ಕ್ಷಣಗಳಲ್ಲಿ ನಡೆಯ ಬಾರದ ಬಲು ದೊಡ್ಡ ದುರಂತ ವೊಂದು ಘಟಿಸಲಿದೆ ಎಂಬ ತೃಣಮಾತ್ರದ ಸುಳಿವೂ ಇರದಿದ್ದ ಪ್ರಯಾಣಿಕರೆಲ್ಲ ಹಾಯಾಗಿ ಪ್ರಯಾಣ ವನ್ನು ಆಸ್ವಾದಿಸುತ್ತಿದ್ದರು. ಆದರೆ, ಕೆಲವೇ ಕ್ಷಣಗಳಲ್ಲಿ ನಡೆದದ್ದೇ ಬೇರೆ. ಭೀಕರ ದುರಂತದ ಬಗ್ಗೆ ರೈಲಿನಲ್ಲಿದ್ದ ೧೯ ವರ್ಷದ ಯುವಕ ನಿವಾಸ್ ಕುಮಾರ್ ವಿವರಿಸಿದ್ದು ಹೀಗೆ.
ಅಪಘಾತ ಸಂಭವಿಸಿದ್ದು ಹೇಗೆ?
ಮಾಧ್ಯಮ ಪ್ರತಿನಿಧಿಗಳು ಈ ಪ್ರಶ್ನೆ ಕೇಳುತ್ತಿದ್ದಂತೆಯೇ ನಿವಾಸ್ ಕುಮಾರ್ ಮುಖ ದಲ್ಲಿ ಅವ್ಯಕ್ತವಾದ ಆತಂಕದ ಗೆರೆಯೊಂದು ಸುಳಿದಂತಾಯಿತು. ಗಂಟಲು ಒಣಗಿತು. ಒಂದು ಕ್ಷಣ ಕಣ್ಣು ಮುಚ್ಚಿದ ಆತ ನಂತರ ವಿವ ರಿಸತೊಡಗಿದ. ಅಜ್ಜನ ಜೊತೆ ಹೌರಾದಿಂದ ಬಿಹಾರಕ್ಕೆ ಹೋಗುತ್ತಿದ್ದೆ. ಸ್ವಲ್ಪ ಸಮಯದ ಹಿಂದೆ, ಎಲ್ಲವೂ ತುಂಬಾ ಚೆನ್ನಾಗಿತ್ತು. ಮಕ್ಕಳು ಆಡುತ್ತಿದ್ದರು, ಜನರು ಮಾತನಾಡುತ್ತಿದ್ದರು. ಯಾರೋ ಶಾಂತವಾಗಿ ಮಲಗಿದ್ದರು. ಇದ್ದಕ್ಕಿ ದ್ದಂತೆ ೧ ಚಂಡ ಮಾರುತ ಬಂದಪ್ಪಳಿಸಿದಂತೆ ಭಾಸವಾಯಿತು. ನಂತರ ದೊಡ್ಡ ಶಬ್ದ ಕೇಳಿಸಿತು. ಕಿವಿಗಳು ಮರ ಗಟ್ಟಿದವು ಮತ್ತು ಕಣ್ಣುಗಳು ಮುಚ್ಚಿಹೋ ದವು. ಸ್ವಲ್ಪ ಹೊತ್ತಿನ ನಂತರ ಕಣ್ಣು ತೆರೆದಾಗ ಭಯಾನಕ ದೃಶ್ಯ ಕಾಣಿಸಿತು. ಸುತ್ತಲೂ ಮೃತದೇಹಗಳ ರಾಶಿ ಬಿದ್ದಿತ್ತು. ಮಕ್ಕಳ ಕಿಲಕಿಲ ನಗುವಿನ ಬದಲು ಜನರ ಕಿರುಚಾಟದ ಸದ್ದು ಕೇಳಿಸುತ್ತಿತ್ತು. ಕೆಲವೆಡೆ ಹಿರಿಯರ ಕನ್ನಡಕ, ಕೆಲವೆಡೆ ಮಕ್ಕಳ ಬಟ್ಟೆ, ಆಟಿಕೆಗಳು ಚೆಲ್ಲಾಪಿಲ್ಲಿ ಯಾಗಿದ್ದವು. ಆಂಬುಲೆನ್ಸ್‌ನ ಸೈರನ್, ಜನರ ಕಿರುಚಾಟ ಕಿವಿಯಲ್ಲಿ ಪ್ರತಿಧ್ವನಿ ಸುತ್ತಿತ್ತು. ಅಪಘಾತ ಸಂಭವಿಸಿದ ತಕ್ಷಣ ಪ್ರe ತಪ್ಪಿಹೋ ಯಿತು ಎಂದು ನಿವಾಸ್ ನೋವಿನಿಂದ ಹೇಳಿದರು.
ವಾಶ್ ರೂಂನಲ್ಲಿದ್ದ ವಂದನಾ ಸ್ವಲ್ಪದರಲ್ಲೇ ಬಚಾವ್:
ಅಪಘಾತದ ಸಂದರ್ಭ ವಾಶ್ ರೂಂ ನಲ್ಲಿದ್ದುದರಿಂದ ವಂದನಾ ಎಂಬ ಪ್ರಯಾಣಿ ಕರು ಪವಾಡಸದೃಶರಾಗಿ ಅಪಘಾತದ ಸಂದ ರ್ಭ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಅಪಘಾತದ ಸಮಯದಲ್ಲಿ ತಾನು ವಾಶ್ ರೂಂನಲ್ಲಿದ್ದೆ. ಹೀಗಾಗಿ ನನ್ನ ಪ್ರಾಣ ಉಳಿಯಿ ತು ಎಂದಿದ್ದಾರೆ.
ವಾಶ್‌ರೂಮ್‌ನಿಂದ ಹೊರ ಬಂದ ಕೂಡಲೇ ಹೊರಗಿನ ದೃಶ್ಯ ನೋಡಿ ಸಂಪೂರ್ಣ ಬೆಚ್ಚಿಬಿದ್ದೆ. ರೈಲು ಸಂಪೂರ್ಣ ವಾಲಿತ್ತು. ಸಾಮಗ್ರಿಗಳೆಲ್ಲ ಅಲ್ಲೊಂದು ಇಲ್ಲೊಂದು ಚೆಲ್ಲಾಪಿಲ್ಲಿ ಯಾಗಿ ಬಿದ್ದಿದ್ದವು. ಜನರು ಒಬ್ಬರ ಮೇಲೊಬ್ಬರು ಬಿದ್ದಿದ್ದರು. ಏನಾಯಿತು ಎಂದು ಅರ್ಥಮಾಡಿ ಕೊಳ್ಳಲು ಸಾಧ್ಯವಾ ಗಲಿಲ್ಲ. ಸುತ್ತಲೂ ಮೃತದೇಹಗಳನ್ನು ಕಂಡು ಆಘಾತವಾಯಿತು. ನಂತರ ನನ್ನನ್ನು ಸುರಕ್ಷಿ ತವಾಗಿ ಹೊರ ತೆಗೆಯ ಲಾಯಿತು ಎಂದು ವಂದನಾ ಹೇಳಿದ್ದಾರೆ.