ಮೇ ೧ರಿಂದ ವಿಮಾನ ಸೇವೆ ತಾತ್ಕಾಲಿಕ ಸ್ಥಗಿತ?!
ಶಿವಮೊಗ್ಗ : ಶಿವಮೊಗ್ಗ- ಬೆಂಗಳೂರು ನಡುವಿನ ಇಂಡಿಗೋ ವಿಮಾನ ಸೇವೆ ಮೇ ೧ರಿಂದ ತಾತ್ಕಾಲಿಕವಾಗಿ ಸ್ಥಗಿತ ಗೊಳ್ಳಲಿದೆ. ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಹೊರಡಿಸಿ ರುವ ಹೊಸ ಸುರಕ್ಷತಾ ಮಾರ್ಗಸೂಚಿಗಳ ಅನ್ವಯ ಕಾರ್ಯಾಚರಣೆಗೆ ಅಗತ್ಯವಿರುವ ಪೈಲೆಟ್ಗಳ ಕೊರತೆ ಎದುರಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ.
ಪ್ರಸ್ತುತ ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಪ್ರತಿದಿನವೂ ಇಂಡಿಗೋ ಸಂಸ್ಥೆಯ ಏಕೈಕ ನೇರ ವಿಮಾನ ಸಂಚಾರವೇ ಲಭ್ಯವಿದ್ದು, ಈ ಸೇವೆ ಸ್ಥಗಿತಗೊಳ್ಳುವುದರಿಂದ ಪ್ರಯಾಣಿಕರಿಗೆ ತಾತ್ಕಾಲಿಕ ಅಸೌಕರ್ಯ ಉಂಟಾಗುವ ಸಾಧ್ಯತೆ ಇದೆ. ಸಂಸ್ಥೆಯು ಮೊದಲ ಹಂತ ದಲ್ಲಿ ಮೂರು ತಿಂಗಳ ಕಾಲ ಸೇವೆ ಸ್ಥಗಿತಗೊಳಿಸುವುದಾಗಿ ಸೂಚಿಸಿದೆ.

ವಿಮಾನ ನಿಲ್ದಾಣದ ಅಧಿಕಾರಿ ಯೊಬ್ಬರು ನೀಡಿದ ಮಾಹಿತಿ ಯಂತೆ, ಮೇ ಮಧ್ಯಭಾಗದಿಂದ ಮಳೆಗಾಲ ಆರಂಭವಾಗುವುದ ರಿಂದ ಈ ಅವಧಿ ವಿಮಾನಯಾನ ಕ್ಷೇತ್ರದಲ್ಲಿ ಆಫ್ ಸೀಸನ್ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯೂ ಕಡಿಮೆ ಯಾಗುವ ನಿರೀಕ್ಷೆಯಿದ್ದು, ಸೇವೆ ಸ್ಥಗಿತದ ಪರಿಣಾಮ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇನ್ನು, ೨೦೨೫ರ ಜೂನ್ ೧೨ ರಂದು ಗುಜರಾತ್ನ ಅಹ್ಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ (ಎಐ-೧೭೧) ವಿಮಾನ ಪತನದ ನಂತರ ದೇಶಾದ್ಯಂತ ವಿಮಾನಗಳ ಸುರಕ್ಷಿತ ಕಾರ್ಯಾಚರಣೆಗೆ ಡಿಜಿಸಿಎ ಕಠಿಣ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಈ ನಿಯಮಾವಳಿಗಳ ಅನುಷ್ಠಾನಕ್ಕೆ ವಿಮಾನಯಾನ ಸಂಸ್ಥೆಗಳಿಗೆ ಒಂದು ವರ್ಷದ ಗಡುವು ನೀಡಲಾಗಿದೆ. ಹೊಸ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಂದರ್ಭದಲ್ಲಿ ಪೈಲೆಟ್ಗಳ ತರಬೇತಿ, ನಿಯೋಜನೆ ಹಾಗೂ ಕಾರ್ಯಘಟ್ಟಗಳ ಮರುಹೊಂದಿಕೆ ಅಗತ್ಯವಾಗಿದ್ದು, ಇದರಿಂದ ಇಂಡಿಗೋ ಸಂಸ್ಥೆಗೆ ತಾತ್ಕಾಲಿಕವಾಗಿ ಪೈಲೆಟ್ ಕೊರತೆ ಉಂಟಾಗಿದೆ ಎಂದು ತಿಳಿದುಬಂದಿದೆ.
ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದಿಂದ ಇತರ ನಗರಗಳಿಗೆ ವಿಮಾನ ಸೇವೆಗಳು ಮುಂದುವರಿಯುತ್ತಿವೆ. ಸ್ಟಾರ್ ಏರ್ ಸಂಸ್ಥೆ ಹೈದರಾಬಾದ್ ಮತ್ತು ಗೋವಾ ಕಡೆಗೆ ನಿತ್ಯ ಹಾರಾಟ ನಡೆಸುತ್ತಿದ್ದು, ಸ್ಪೈಸ್ ಜೆಟ್ ಸಂಸ್ಥೆ ತಿರುಪತಿ, ಚೆನ್ನೈ ಹಾಗೂ ಹೈದರಾಬಾದ್ ಸಂಪರ್ಕ ಕಲ್ಪಿಸುತ್ತಿದೆ. ಆದಾಗ್ಯೂ, ಶಿವಮೊಗ್ಗ- ಬೆಂಗಳೂರು ಮಾರ್ಗದಲ್ಲಿ ಪ್ರಯಾಣಿಕರ ಬೇಡಿಕೆ ಹೆಚ್ಚು ಇರುವುದರಿಂದ ಇಂಡಿಗೋ ಸೇವೆಯ ಸ್ಥಗಿತವು ಸ್ಥಳೀಯ ಉದ್ಯಮಿಗಳು, ಐಟಿ ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ.
ಸ್ಥಳೀಯ ವಾಣಿಜ್ಯ ವಲಯ ಹಾಗೂ ಸಾರ್ವಜನಿಕರು ಈ ತಾತ್ಕಾಲಿಕ ಸ್ಥಗಿತ ಅವಧಿಯನ್ನು ಕಡಿಮೆಗೊಳಿಸಲು ಮತ್ತು ಶೀಘ್ರ ದ ಸೇವೆಯನ್ನು ಪುನರಾರಂಭಿಸಲು ಕೇಂದ್ರ ಹಾಗೂ ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿzರೆ.
