ಜಿಲ್ಲಾ ಸುದ್ದಿತಾಜಾ ಸುದ್ದಿ

ರಾಷ್ಟ್ರೀಯ ರಕ್ಷಣಾ ವಿವಿಯಲ್ಲಿ ಶಿಕ್ಷಕರ ದಿನಾಚರಣೆ

Share Below Link

ಶಿವಮೊಗ್ಗ : ಶಿವಮೊಗ್ಗ ರಾಷ್ಟ್ರೀಯ ರಕ್ಷಣಾ ವಿವಿ ಆವರಣ ದಲ್ಲಿ ಇಂದು ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭ ದಲ್ಲಿ ಆರಾರ್‍ಯು ಶಿವಮೊಗ್ಗ ಕ್ಯಾಂಪಸ್‌ನ ನಿರ್ದೇಶಕ ಡಾ| ಆನಂದಕುಮಾರ್ ತ್ರಿಪಾಠಿ ಅವರು ಸರ್ವರನ್ನು ಸ್ವಾಗತಿಸಿ ಮಾತನಾಡಿ, ರಾಷ್ಟ್ರೀಯ ರಕ್ಷಣಾ ವಿವಿ ಸಾಂಪ್ರದಾ ಯಿಕ ರೀತಿಯಲ್ಲಿ ಸೆ.೪ರಿಂದ ಶೈಕ್ಷಣಿಕ ಕಾರ್ಯವನ್ನು ಔಪಚಾರಿಕವಾಗಿ ಪ್ರಾರಂಭಿಸಿದೆ.
ಈ ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರೀಯ ಭದ್ರತೆ, ಡಿಜಿಟಲ್ ತನಿಖೆ ಮತ್ತು ಪೊಲೀಸ್ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಣವನ್ನು ಒದಗಿಸು ತ್ತದೆ. ಪದವಿ, ಸ್ನಾತಕೋತ್ತರ, ಡಿಪ್ಲೊಮಾ ಮತ್ತು ಪ್ರಮಾಣಪತ್ರ ಮಟ್ಟದ ಶಿಕ್ಷಣವನ್ನು ನೀಡಲಾಗು ವುದು ಎಂದರು.
ವಿವಿ ಉಪಕುಲಪತಿ ಡಾ| ಬಿಮಲ್ ಎನ್ ಪಟೇಲ್ ಅವರು ಮಾತನಾಡಿ, ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸಮ್ಮೇಳ ನದ ಮೂಲಕ ವಿಶ್ವವಿದ್ಯಾಲಯದ ಕಾರ್ಯಕ್ರಮ ಗಳ ಬಗ್ಗೆ ವಿವರವಾಗಿ ತಿಳಿಸಿದರು.
ಇಲ್ಲಿಂದ ಶಿಕ್ಷಣ ಪಡೆದ ನಂತರ ವಿದ್ಯಾರ್ಥಿಗಳು ಪೊಲೀಸ್, ಭದ್ರತಾ ಸೇವೆ ಮತ್ತು ವೈಯಕ್ತಿಕ ಭದ್ರತೆ ಕ್ಷೇತ್ರದಲ್ಲಿ ಅಪಾರ ಉದ್ಯೋಗಾವಕಾಶಗಳನ್ನು ಹೊಂದಲಿzರೆ ಎಂದರು.
ಜಿಧಿಕಾರಿ ಡಾ.ಸೆಲ್ವಮಣಿ ಮಾತನಾಡಿ, ನಿಮ್ಮ ಪ್ರಗತಿಗೆ ಸದಾ ಸಂತಸ ವ್ಯಕ್ತಪಡಿಸುವ ಜಗತ್ತಿನ ಇಬ್ಬರು ವ್ಯಕ್ತಿಗಳೆಂದರೆ ಶಿಕ್ಷಕರು ಮತ್ತು ಪೋಷಕರು. ಆದ್ದರಿಂದ, ಶಿಕ್ಷಕರ ಸಮರ್ಪಣೆ ಮತ್ತು ಶೈಕ್ಷಣಿಕ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ಜಿ ರಕ್ಷಣಾಧಿಕಾರಿ ಮಿಥುನ್‌ಕುಮಾರ್ ಮಾತನಾಡಿ, ನೀವು ಈ ವಿಶ್ವವಿದ್ಯಾನಿಲಯದ ಮೊದಲ ಅಧಿವೇಶನದ ವಿದ್ಯಾರ್ಥಿಗಳು, ಇದು ವಿದ್ಯಾರ್ಥಿ ಗಳಿಗೆ, ಶಿಕ್ಷಕರಿಗೆ ಮತ್ತು ವಿಶ್ವ ವಿದ್ಯಾನಿಲಯಕ್ಕೆ ವಿಶೇಷವಾಗಿದೆ. ಇದು ನಿಮಗೆ ಎಂದೆಂದಿಗೂ ವಿಶೇಷವಾಗಿ ಉಳಿಯುತ್ತದೆ.
ಉತ್ತಮ eನವು ಜೀವನವನ್ನು ಮುಂದಕ್ಕೆ ಕೊಂಡೊಯ್ಯಲು ಸಹಾಯಕವಾಗಿದೆ ಎಂದು ಅವರು ಹೇಳಿದರು ಮತ್ತು ಮುಂದಿನ ದಿನಗಳಲ್ಲಿ ಈ ವಿಶ್ವವಿದ್ಯಾಲಯವು ದೇಶ ಮಾತ್ರವಲ್ಲದೆ ವಿಶ್ವ ಮಟ್ಟದಲ್ಲಿ ಹೆಸರು ಮಾಡುತ್ತದೆ ಎಂದರು.