ಜಿಲ್ಲಾ ಸುದ್ದಿತಾಜಾ ಸುದ್ದಿ

ಶಿಕ್ಷಕರು ಆಧುನಿಕ ಬೋಧನಾ ವಿಧಾನ ಬಳಸಿಕೊಂಡು ಮುನ್ನಡೆದಲ್ಲಿ ವೃತ್ತಿಗೆ ನ್ಯಾಯ ಒದಗಿಸಲು ಸಾಧ್ಯ: ಬಿವೈವಿ

Share Below Link

ಶಿಕಾರಿಪುರ: ವೇಗವಾಗಿ ಬದಲಾಗುತ್ತಿರುವ ತಂತ್ರeನದ ಆವಿಷ್ಕಾರದಿಂದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಎಲ್ಲ ಮಾಹಿತಿ ದೊರಕುತ್ತಿದ್ದು, ಶಿಕ್ಷಣವನ್ನು ಮಾತ್ರ ಬೋಧಿಸುವ ಶಿಕ್ಷಕರನ್ನು ವಿದ್ಯಾರ್ಥಿಗಳು ಒಪ್ಪುವುದಿಲ್ಲ, ಈ ದಿಸೆಯಲ್ಲಿ ಶಿಕ್ಷಕರು ಆಧುನಿಕ ಬೋಧನಾ ವಿಧಾನಗಳನ್ನು ಅಳವಡಿಸಿಕೊಂಡು ಮುನ್ನಡೆದಲ್ಲಿ ಮಾತ್ರ ಶಿಕ್ಷಕ ವೃತ್ತಿಗೆ ನ್ಯಾಯ ದೊರಕಿಸಲು ಸಾಧ್ಯ ಎಂದು ಕ್ಷೇತ್ರದ ಶಾಸಕ ಬಿ.ವೈ ವಿಜಯೇಂದ್ರ ತಿಳಿಸಿದರು.
ಪಟ್ಟಣದ ಸ್ವಾಮಿ ವಿವೇಕಾ ನಂದ ವಿದ್ಯಾ ಸಂಸ್ಥೆ (ರಿ)ಯ ಎಲ್ಲ ಅಂಗ ಸಂಸ್ಥೆಗಳ ವತಿಯಿಂದ ಕಾಲೇಜು ಆವರಣದಲ್ಲಿ ನಡೆದ ಶಿಕ್ಷಕ ದಿನಾಚರಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು,ವೃತ್ತಿಯಲ್ಲಿ ಸೇವೆಯು ಪ್ರಧಾನವಾಗಿದೆ ಎಂದ ಅವರು, ಶಿಕ್ಷಕ ಇಂದು ಅತ್ಯಂತ ಜವಾಬ್ದಾರಿಯಾಗಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಶಿಕ್ಷಕರು ಮಕ್ಕಳಿಗೆ ಶಿಕ್ಷೆಯನ್ನು ನೀಡದೆ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಹೊಂದಿzರೆ. ಪೋಷಕರು ಸಹ ಮಕ್ಕಳನ್ನೂ ಎಚ್ಚರದಿಂದ ನಡೆಸಿ ಕೊಳ್ಳುವ ಪ್ರವೃತ್ತಿ ಇದೆ. ಬದಲಾಗುತ್ತಿರುವ ತಂತ್ರeನದ ಆವಿಷ್ಕಾರದಿಂದ ಎಲ್ಲ ಮಾಹಿತಿ ಆನ್‌ಲೈನ್‌ನಲ್ಲಿ ದೊರಕುತ್ತಿರುವುದ ರಿಂದ ಕೇವಲ ಬೋಧನೆಯನ್ನು ಮಾಡುವ ಶಿಕ್ಷಕರನ್ನು ವಿದ್ಯಾರ್ಥಿ ಗಳು ತಿರಸ್ಕರಿಸುತ್ತಾರೆ. ಈ ದಿಸೆಯಲ್ಲಿ ಶಿಕ್ಷಕರು ನೂತನ ಬೋಧನಾ ವಿಧಾನಗಳನ್ನು ಅಳವಡಿಸಿಕೊಂಡು ಮುನ್ನಡೆದಲ್ಲಿ ಮಾತ್ರ ಶಿಕ್ಷಕ ವೃತ್ತಿಗೆ ನ್ಯಾಯ ದೊರಕಿಸಿಕೊಡಲು ಸಾದ್ಯ ಎಂದು ತಿಳಿಸಿದರು.
ಸಿರಿಗೆರೆ ಎಸ್.ಟಿ.ಜೆ ಶಿಕ್ಷಣ ಸಂಸ್ಥೆಯ ನಿವೃತ್ತ ಪ್ರಾಚಾರ್ಯ ಡಾ.ವಾಮದೇವಪ್ಪ, ಸಮಾಜಕ್ಕೆ ಬೆನ್ನೆಲುಬು ಆದ ಶಿಕ್ಷಕರು ಮಕ್ಕಳಿಗೆ ಮಾದರಿಯಾಗಿರಬೇಕು, ಮಾರ್ಗ ದರ್ಶನ ಮತ್ತು ಸಮ ರ್ಪಣೆಯನ್ನು ನೀಡುವವರಾಗಿರಬೇಕು. ಯುವಜನರಿಗೆ ಶಿಕ್ಷಣದ ಶಕ್ತಿಯನ್ನು ನೀಡಬೇಕು. ಶಿಕ್ಷಕರಿಂದಾಗಿ ದೇಶಗಳು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಸಂಸ್ಥೆಯ ಕಾರ್ಯದರ್ಶಿ ಬಿ.ವೈ ರಾಘವೇಂದ್ರ ಮಾತನಾಡಿ, ಶಿಕ್ಷಕರು ಮತ್ತು ಗುರುಗಳ ಗೌರವ ಮತ್ತು ಸ್ಮರಣಾರ್ಥವಾಗಿ ಶಿಕ್ಷಕರ ದಿನವನ್ನು ಪ್ರತಿ ಸೆ.೫ರಂದು ಆಚರಿಸಲಾಗುತ್ತದೆ. ಶಿಕ್ಷಕರಿಗೆ ಸಮಾಜದಲ್ಲಿನ ಎಲ್ಲ ಉನ್ನತ ವ್ಯಕ್ತಿಗಳು ಗೌರವಿಸುತ್ತಾರೆ. ನಿಸ್ವಾರ್ಥ ಸೇವೆಯನ್ನು ಸಲ್ಲಿಸುವ ಪ್ರಾಮಾಣಿಕ ಕೆಲಸ ಎಂದರೆ ಅದು ಶಿಕ್ಷಕ ವೃತ್ತಿ ಎಂದು ಬಣ್ಣಿಸಿದರು. ಪವಿತ್ರ ಸಂಗ ಡಿಗರು ಪ್ರಾರ್ಥಿಸಿ, ಡಾ.ಶಿವಕು ಮಾರ್ ಸ್ವಾಗತಿಸಿ, ಡಾ.ರವಿ ನಿರೂ ಪಿಸಿ, ಡಾ.ವೀರೇಂದ್ರ ವಂದಿಸಿದರು.