ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಎನ್‌ಇಎಸ್ ಸಂಸ್ಥೆಗೆ ಟಾಟಾ ಗ್ರೀನ್ ಚಾಂಪಿಯನ್ ಪ್ರಶಸ್ತಿ…

Share Below Link

ಶಿವಮೊಗ್ಗ : ನಗರದ ಪ್ರತಿಷ್ಟಿತ ರಾಷ್ಟ್ರೀಯ ಶಿಕ್ಷಣ ಸಮಿತಿ ವತಿ ಯಿಂದ ಜೆಎನ್‌ಎನ್ ಎಂಜಿನಿ ಯರಿಂಗ್ ಕಾಲೇಜಿನಲ್ಲಿ ಅಳವಡಿಸಿ ರುವ ೪೦೦ ಕಿಲೋವ್ಯಾಟ್ ಸೌರ ವಿದ್ಯುತ್ ಸ್ಥಾವರಕ್ಕೆ ಟಾಟಾ ಕಂಪನಿಯು ಗ್ರೀನ್ ಚಾಂಪಿಯನ್ ಪ್ರಶಸ್ತಿ ನೀಡಿ ಗೌರವಿಸಿದೆ.
ಸಂಪೂರ್ಣ ಪರಿಸರ ಸ್ನೇಹಿಯಾದ ಈ ವಿದ್ಯುತ್ ಸ್ಥಾವರದಿಂದ ಪ್ರತಿ ವರ್ಷ ೫ ಲಕ್ಷದ ೫೦ ಸಾವಿರ ಯುನಿಟ್ ವಿದ್ಯುತ್ ಉತ್ಫಾದನೆಯಾಗುತ್ತಿದ್ದು, ೧೨ ಸಾವಿರ ಟನ್‌ಗಳಷ್ಟು ಇಂಗಾಲ (ಕಾರ್ಬನ್ ಡೈ ಆಕ್ಸೈಡ್) ಹೊರಸೂಸುವಿಕೆ ಕಡಿಮೆಯಾಗಿದೆ ಎಂದು ಕಂಪನಿ ಉಖಿಸಿದೆ. ಇದು ೧೯ ಸಾವಿರ ತೇಗದ ಮರಕ್ಕೆ ಸಮಾನವಾಗಿದೆ ಎಂದು ತಿಳಿಸಿದೆ.
೨೦೨೦ ರಲ್ಲಿ ಸುಮಾರು ೨ ಕೋಟಿ ವೆಚ್ಚದಲ್ಲಿ ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನ ವಿವಿಧ ವಿಭಾಗಗಳ ಕಟ್ಟಡದ ಮೇಲ್ಛಾವಣಿಯಲ್ಲಿ ಈ ಸ್ಥಾವರ ವನ್ನು ಅಳವಡಿಸಲಾಗಿದ್ದು, ಕಾಲೇಜಿಗೆ ಅಗತ್ಯವಿರುವ ದೈನಂದಿನ ವಿದ್ಯುತ್ ಪೂರೈಕೆಯ ಜೊತೆಗೆ ಗ್ರಿಡ್ ಸಂಪರ್ಕದ ಮೂಲಕ ವಿದ್ಯುಚ್ಚಕ್ತಿ ನಿಗಮಕ್ಕೆ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ದೇಶಿಯ ಉತ್ಫಾದನೆಗೆ ಹೆಚ್ಚು ಒತ್ತು ನೀಡಿ, ದಾಬಸ್‌ಪೇಟೆಯಲ್ಲಿ ತಯಾರಾದ ಟಾಟಾ ಪವರ್ ಕಂಪನಿಯ ಉಪಕರಣಗಳನ್ನೆ ವಿದ್ಯುತ್ ಸ್ಥಾವರಕ್ಕೆ ಬಳಸಲಾಗಿತ್ತು. ಈ ವಿದ್ಯುತ್ ಸ್ಥಾವರದ ಮೂಲಕ ೨೦೨೦ ರಿಂದ ಇಲ್ಲಿಯವೆರೆಗೆ ಸುಮಾರು ೧ ಕೋಟಿ ೭೩ ಲಕ್ಷ ರೂಪಾಯಿಗಳಷ್ಟು ಸಂಸ್ಥೆಗೆ ಉಳಿತಾಯವಾಗಿದೆ.
ಇದರೊಂದಿಗೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ನಾವೀನ್ಯ ಪ್ರಯೋಗಗಳನ್ನು ನಡೆಸಲು ಹಾಗೂ ಸಂಶೋಧನಾ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳಲು ಪೂರಕ ವೇದಿಕೆಯಾಗಿ ರೂಪಗೊಂ ಡಿದೆ. ಇಂತಹ ಸಾಧನೆಗೆ ಸಹಕರಿ ಸಿದ ಎ ತಜ್ಞರಿಗೆ ಹಾಗೂ ಸಿಬ್ಬಂ ದಿ ವರ್ಗಕ್ಕೆ ರಾಷ್ಟ್ರೀಯ ಶಿಕ್ಷಣ ಸಮಿ ತಿ ಅಭಿನಂದನೆಯನ್ನು ಸಲ್ಲಿಸಿದೆ.