ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ತರೀಕೆರೆ: ಮೈತ್ರಿ ಅಭ್ಯರ್ಥಿಗಳ ಪರ ಮತಯಾಚನೆ -ಪೂರ್ವಭಾವಿ ಸಭೆ

Share Below Link

ತರೀಕೆರೆ : ವಿಧಾನ ಪರಿಷತ್ ನೈರುತ್ಯ ಪದವಿಧರ ಮತ್ತು ನೈರುತ್ಯ ಶಿಕ್ಷಕರ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ತರೀಕೆರೆ ಮಂಡಲದ ವತಿಯಿಂದ ಇಲ್ಲಿನ ಅರಮನೆ ಹೋಟೆಲ್ ಸಭಾಂಗಣದಲ್ಲಿ ಬಿಜೆಪಿ ಕಾರ್ಯಕರ್ತರ ಮತ್ತು ಚುನಾವಣಾ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯಲ್ಲಿ ತರೀಕೆರೆ ಮಂಡಲದ ಬಿಜೆಪಿ ವಾರ್ಡ್ ಅಧ್ಯಕ್ಷರು , ಬೂತ್ ಅಧ್ಯಕ್ಷರು, ಮಹಾಶಕ್ತಿ ಕೇಂದ್ರದ ಪ್ರಮುಖರಿಗೆ ಚುನಾವಣೆಯ ರೂಪುರೇಷೆಗಳನ್ನು ತಿಳಿಸಿ ತಮ್ಮ ವ್ಯಾಪ್ತಿಯ ಮಹಾಶಕ್ತಿ ಕೇಂದ್ರಗಳಲ್ಲಿ ಪದವೀಧರ ಮತದಾರರನ್ನು ತಲುಪಿ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ| ಧನಂಜಯ ಸರ್ಜಿ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್. ಎಲ್. ಭೋಜೇಗೌಡರ ಪರವಾಗಿ ಮತಯಾಚಿಸಿ, ಗೆಲ್ಲಿಸುವಂತೆ ಮನವಿ ಮಾಡಲಾಯಿತು.
ಈ ವೇಳೆ ಚಿಕ್ಕಮಗಳೂರು ಜಿ ಬಿಜೆಪಿ ಅಧ್ಯಕ್ಷ ದೇವರಾಜ್ ಶೆಟ್ಟಿ, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜರಿ, ಪ್ರಮುಖರಾದ ವಿ. ಸುನಿಲ್ ಕುಮಾರ್, ಎಸ್ ದತ್ತಾತ್ರಿ, ಡಿ. ಎಸ್. ಅರುಣ್, ಜೆಡಿಎಸ್ ತಾಲೂಕು ಅಧ್ಯಕ್ಷ ನರೇಂದ್ರ, ಜೆಡಿಎಸ್ ಮುಖಂಡರಾದ ಶಿವಾನಂದ, ಪದವೀಧರ ಕ್ಷೇತ್ರದ ತಾಲೂಕು ಸಂಚಾಲಕ ಶಶಿಕುಮಾರ್ , ಶಿಕ್ಷಕರ ಕ್ಷೇತ್ರದ ತಾಲೂಕು ಸಂಚಾಲಕ ಸೋಮಶೇಖರ್ ಸೇರಿದಂತೆ ಸ್ಥಳೀಯ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.

This image has an empty alt attribute; its file name is Arya-coll.gif