ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಕರ್ನಾಟಕ – ತಮಿಳುನಾಡಿನ ರಾಮಸೇತುವಿನಂತೆ ಇಲ್ಲಿನ ತಮಿಳರು ವಾಸಿಸುತ್ತಿದ್ದಾರೆ: ಅಣ್ಣಾಮಲೈ

Share Below Link

ಶಿವಮೊಗ್ಗ: ತಮಿಳು ಜನರು ನಂಬಿಕಸ್ಥ ಶ್ರಮಿಕರಾಗಿದ್ದು, ಕರ್ನಾಟಕದ ಜನತೆ ಅವರಿಗೆ ಅತ್ಯಂತ ಗೌರವ ನೀಡಿದ್ದಾರೆ. ಅವರು ಕೂಡ ಕನ್ನಡಿಗರಾಗಿಯೇ ಇಲ್ಲಿ ಬೆಳೆದಿದ್ದು, ತಮಿಳುನಾಡು ಮತ್ತು ಕರ್ನಾಟಕದ ರಾಮಸೇತು ವಿನಂತೆ ಇಲ್ಲಿ ವಾಸವಾಗಿ ದ್ದಾರೆ. ದೇಶ ಕಟ್ಟಲು ಎಲ್ಲರೂ ಬಿಜೆಪಿ ಯನ್ನು ಬೆಂಬಲಿಸಿ ಸುಭದ್ರ ಭಾರತ ಕಟ್ಟಬೇಕು ಎಂದು ತಮಿಳುನಾಡು ಬಿಜೆಪಿ ರಾಜಧ್ಯಕ್ಷ ಕೆ. ಅಣ್ಣಾಮಲೈ ಹೇಳಿದ್ದಾರೆ.
ಅವರು ಇಂದು ನಗರದ ಎನ್‌ಇಎಸ್ ಮೈದಾನದಲ್ಲಿ ಬಿಜೆಪಿ ನಗರ ವತಿಯಿಂದ ಹಮ್ಮಿಕೊಂಡಿದ್ದ ತಮಿಳು ಬಾಂಧವರ ಸಮಾವೇಶ ವನ್ನು ಉದ್ಘಾಟಿಸಿ ಮಾತನಾಡಿ ದರು.
ಈಶ್ವರಪ್ಪನವರು ಕಳೆದ ೪೦ ವರ್ಷಗಳಿಂದ ಪಕ್ಷವನ್ನು ಅರ್ಜು ನನಂತೆ ಕಟ್ಟಿ ಬೆಳೆಸಿದ್ದು, ಈಗ ಭೀಷ್ಮರಂತೆ ಚುನಾವಣೆ ರಾಜಕಾ ರಣದಿಂದ ಹಿಂದೆ ಸರಿದು ಬಿಜೆಪಿ ಯ ಎಲ್ಲಾ ಕಿರಿಯ ಕಾರ್ಯ ಕರ್ತರಿಗೆ ಮಾರ್ಗದರ್ಶಕರಾಗಿ ಪಕ್ಷವನ್ನು ಬೆಳೆಸಿ ಮಾದರಿಯಾಗಿ ದ್ದಾರೆ. ಚನ್ನಬಸಪ್ಪ ಒಬ್ಬ ನಿಷ್ಠಾವಂತೆ ಬಿಜೆಪಿ ಕಾರ್ಯರ್ತನಾಗಿದ್ದು, ಅವರಿಗೆ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಈಗ ನೀವು ಚನ್ನಬಸಪ್ಪನವರಿಗೆ ಕೊಡುವ ಮತ ಈಶ್ವರಪ್ಪನವರಿಗೆ ಮತ್ತು ಯಡಿಯೂರಪ್ಪನವರಿಗೆ ನೀಡುವ ಮತವಾಗಿದೆ ದೇಶದ ಮತ್ತು ರಾಜ್ಯದ ಅಭಿವೃದ್ಧಿಗೆ ನೀಡುವ ಮತವಾಗಿದೆ ಎಂದರು


ಈಶ್ವರಪ್ಪನವರು ಬಿಜೆಪಿ ಹೈಕಮಾಂಡ್‌ಗೆ ಪತ್ರ ಬರೆದು ಕಾರ್ಯಕರ್ತನಿಗೆ ಅಭ್ಯರ್ಥಿಯ ನ್ನಾಗಿ ಮಾಡುವಂತೆ ಹೇಳಿದ್ದಾರೆ. ಅದರಂತೆ ಚನ್ನಬಸಪ್ಪನವರು ಅಭ್ಯರ್ಥಿಯಾಗಿ ದ್ದಾರೆ. ಸಂಪೂರ್ಣ ಬಹುಮತ ಬಂದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಆದ್ದ ರಿಂದ ಕನಿಷ್ಠ ೧೩೦ ಸ್ಥಾನ ಬಿಜೆಪಿ ಈ ಬಾರಿ ಗೆಲ್ಲಲೇಬೇಕು. ಅದಕ್ಕೆ ನಿಮ್ಮೆ ಲ್ಲರ ಸಹಕಾರ ಬೇಕು ಎಂದರು.
ಇಡೀ ದೇಶಕ್ಕೆ ಈಶ್ವರಪ್ಪ ನವರು ರೋಲ್ ಮಾಡೆಲ್ ಆಗಿದ್ದಾರೆ. ಮೋದಿಯವರು ವಿಶ್ವಗುರುವಾಗಿ ದೇಶದ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ ಕಾಂಗ್ರೆಸ್‌ನವರು ಎಲ್ಲವನ್ನೂ ಉಚಿತ ಕೊಡುತ್ತೇವೆಂದು ಸುಳ್ಳು ಹೇಳುತ್ತಿದ್ದಾರೆ. ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದಲ್ಲಿ ಅವರು ನೀಡಿದ ಗ್ಯಾರಂಟಿಯ ಬಣ್ಣ ಬಯಲಾಗಿದೆ. ಬಿಜೆಪಿ ಮಾಡಿದ ಅಭಿವೃದ್ಧಿಯನ್ನು ಮತ್ತು ಯೋಜನೆಗಳನ್ನು ನಿಲ್ಲಿಸುತ್ತೇವೆ ಎಂದು ಹೇಳುತ್ತಾ ರಿವರ್ಸ್ ಗೇರ್‌ನಲ್ಲಿ ಹೋಗುತ್ತಿದ್ದಾರೆ. ಆದರೆ ಬಿಜೆಪಿ ಕೇಂದ್ರ ಮತ್ತು ರಾಜ್ಯದಲ್ಲಿ ಒಳ್ಳೆಯ ಅಭಿವೃದ್ಧಿ ಮಾಡುತ್ತಾ ಡಬಲ್ ಇಂಜಿನ್ ಸರ್ಕಾರ ಡಬಲ್ ಸ್ಪೀಡ್‌ನಲ್ಲಿ ಹೋಗುತ್ತಿದೆ. ಈಶ್ವರಪ್ಪನವರಿಗೆ ಬಿಜೆಪಿ ಸರ್ಕಾರ ರಾಷ್ಟ್ರ ಮಟ್ಟದಲ್ಲಿ ಸ್ಥಾನಮಾನ ನೀಡಿ ಉನ್ನತ ಹುದ್ದೆಯನ್ನು ನೀಡಲಿದೆ ಎಂದರು.
ಶಾಸಕ ಈಶ್ವರಪ್ಪನವರು ಮಾತನಾಡಿ, ಒಬ್ಬ ನಿವೃತ್ತ ಐಎಸ್ ಐಪಿಎಸ್ ಅಧಿಕಾರಿ ಸಿಂಗಂ ಎಂದೇ ಖ್ಯಾತರಾದ ಅಣ್ಣಾಮಲೈ ಅವರು ಮೋದಿಯವರ ನಾಯಕತ್ವ ಮತ್ತು ಅವರ ದೂರದೃಷ್ಟಿ ನೋಡಿ ಒಂದು ಸ್ಥಾನವೂ ಇಲ್ಲದ ತಮಿಳುನಾಡಿ ನಲ್ಲಿ ಬಿಜೆಪಿಯ ರಾಜಧ್ಯಕ್ಷರಾಗಿ ನಾಲ್ಕು ಎಂಎಲ್‌ಎಗಳನ್ನು ಗೆಲ್ಲಿಸಿ ಈಗ ತಮಿಳುನಾಡಿನಲ್ಲಿ ಪಕ್ಷವನ್ನು ಭದ್ರವಾಗಿ ಕಟ್ಟುತ್ತಿದ್ದಾರೆ. ಶಾಸಕ ನಾಗಿ ನಾನು ಎಲ್ಲಾ ಸಮುದಾಯ ಗಳಿಗೂ ಅನುದಾನ ನೀಡಿದ್ದೇನೆ ಬಿಜೆಪಿ ಸರ್ಕಾರ ಬಂದಾಗ ಮೆಟ್ಟ ಮೆದಲು ತಿರುವಳ್ಳವರ್ ಪ್ರತಿಮೆಯನ್ನು ಕರ್ನಾಟಕದಲ್ಲಿ ಸ್ಥಾಪಿಸಿ ಸರ್ವಜ್ಞ ಪ್ರತಿಮೆಯನ್ನು ತಮಿಳುನಾಡಿನಲ್ಲಿ ಸ್ಥಾಪಿಸಿ ಎರಡೂ ರಾಜ್ಯಗಳ ಜನರು ಸಹೋದರರಂತೆ ಶಾಂತಿಯಿಂದ ಬಾಳಲು ಬಿಎಸ್‌ವೈ ಸರ್ಕಾರ ಕ್ರಮ ಕೈಗೊಂಡಿತ್ತು. ತಮಿಳು ಕನ್ನಡಿಗರ ಸಂಗಮಕ್ಕೆ ಇದು ದಾರಿಯಾ ಯಿತು. ಚನ್ನಬಸಪ್ಪನವರು ಕೂಡ ಶಿವಮೆಗ್ಗದ ನಗರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾ ಗಿದ್ದು, ದೇಶ ಮತ್ತು ಹಿಂದು ಧರ್ಮದ ಕಟ್ಟಾಳುವಾದ ಅವರನ್ನು ಬೆಂಬಲಿಸಿ ನನಗಿಂತ ಹೆಚ್ಚಿನ ಲೀಡಿನಲ್ಲಿ ಗೆಲ್ಲಿಸಬೇಕು. ಅವರು ಗೆದ್ದರೆ ನಾನೇ ಗೆದ್ದ ಹಾಗೆ ನಾವೆಲ್ಲರೂ ಭಾರ ತೀಯರು. ರಾಷ್ಟ್ರಕ್ಕಾಗಿ ಬಿಜೆಪಿಗೆ ಮತ ನೀಡಿ ಎಂದರು.


ಅಭ್ಯರ್ಥಿ ಚನ್ನಬಸಪ್ಪ ಮಾತ ನಾಡಿ,ದೇಶ ಸುಭಿಕ್ಷವಾಗಿರಬೇಕು. ನಮ್ಮ ಸಂಸ್ಕೃತಿ ಉಳಿಯಬೇಕು ಎಂದು ಜನಸಂಘ ಹುಟ್ಟಿಕೊಂ ಡಿತು. ವೈಚಾರಿಕ ನೆಲೆಗಟ್ಟಿನಲ್ಲಿ ಪ್ರಾರಂಭವಾದ ಜನಸಂಘ ಬಿಜೆಪಿ ಯಾಗಿ ನಮ್ಮ ದೇಶದ ಕಾಶ್ಮೀರ ವನ್ನು ಉಳಿಸಲು ಬಲಿದಾನ ನೀಡಿ ದೆ. ಅಭಿವೃದ್ಧಿಗ ಮತ್ತೊಂದು ಹೆಸರೇ ಬಿಜೆಪಿ. ಬಿಜೆಪಿ ಗೆಲ್ಲಲು ಎಲ್ಲರೂ ಶಕ್ತಿ ನೀಡಬೇಕು ಎಂದರು.
ತಮಿಳ್ ಸಮಾಜದ ಮುಖಂ ಡರಾದ ಮಂಜುನಾಥ್ ಪ್ರಾಸ್ತಾವಿಕ ಮಾತನಾಡಿ, ಬಿಎಸ್ವೈ ಮತ್ತು ಕೆ.ಎಸ್. ಈಶ್ವರಪ್ಪ ಇಬ್ಬರೂ ಶಿವ ಮೊಗ್ಗ ಜಿಲ್ಲೆಯಲ್ಲಿ ಅನೇಕ ಅಭಿ ವೃದ್ಧಿ ಮಾಡಿದ್ದು, ತಮಿಳು ಸಮಾ ಜಕ್ಕೆ ಮೆದಲಿನಿಂದಲೂ ಅನೇಕ ಅನುದಾನ ನೀಡುತ್ತಾ ಬಂದಿದ್ದಾರೆ. ನಾನು ಸಾಯುವವರೆಗೂ ಬಿಜೆಪಿ ಯಲ್ಲೇ ಇರುತ್ತೇನೆ ಮತ್ತು ಬಿಜೆಪಿ ಯನ್ನು ಬೆಂಬಲಿಸುತ್ತೇನೆ. ತಮಿಳು ಸಮಾಜಕ್ಕೆ ಈ ಇಬ್ಬರು ನಾಯಕರ ಋಣವಿದೆ. ಸಮಾಜ ಬಿಜೆಪಿ ಯನ್ನು ಬೆಂಬಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಜಗದೀಶ್, ಪ್ರಮು ಖರಾದ ನಾಗರಾಜ್, ಜನೇ ಶ್ವರ್, ಮೇಯರ್ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಕುಲದೀಪ್ ಸಿಂಗ್, ತಮಿಳುಮುಖಂಡರಾದ ಏಳುಮಲೈ,ಭೂಪಾಲ್ ರಾಜೇಂದ್ರ, ಅರುಣಗಿರಿ, ಬೇಲೂರು ರವಿ, ಶಿವಕುಮಾರ್, ದೊರೆಚಿನ್ನಪ್ಪ, ಮಂಜುನಾಥ್ ಮೆದಲಾದವರಿದ್ದರು.