ಜಿಲ್ಲಾ ಸುದ್ದಿತಾಜಾ ಸುದ್ದಿ

ಶಾಂತಿ ಕದಡುವ ಹೇಳಿಕೆ ನೀಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ: ಶೇಕಬ್ಬ ಮನವಿ

Share Below Link

ಬೆಂಗಳೂರು: ಹಾಸನ ಜಿಯ ಸಕಲೇಶಪುರ ತಾಲೂಕಿನಲ್ಲಿ ಇತ್ತೀಚಿಗೆ ನಡೆದ ಸಂಘಟನೆಯೊಂದರ ಸಭೆಯಲ್ಲಿ ಮುಸ್ಲಿಮರ ವಿರುದ್ಧ ನಿಂದನಾತ್ಮಕ, ಅವಹೇಳನಕಾರಿಯಾಗಿ ಹಾಗೂ ಮುಸ್ಲಿಮರು ತರಕಾರಿ, ಮೀನು ಮಾರಾಟಕ್ಕೆ ಹಿಂದೂಗಳ ಮನೆಗೆ ಬಂದರೆ ಗುಂಡಿಕ್ಕಿ ಎಂಬ ಹೇಳಿಕೆ ನೀಡಿರುವ ರಘು ಎಂಬುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಮುಸ್ಲಿಮ್ ಯುನಿಟಿಯ ರಾಜ್ಯ ಕಾರ್ಯಾಧ್ಯಕ್ಷ ಶೇಕಬ್ಬ ಸರ್ಕಾರವನ್ನು ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿzರೆ.
ಇತ್ತೀಚಿನ ದಿನಗಳಲ್ಲಿ ಕೆಲಸ ಸಂಘಟನೆಗಳು ಹಾಗೂ ವ್ಯಕ್ತಿಗಳು ಮತೀಯ ದ್ವೇಷ ಮತ್ತು ಕೋಮು ಗಲಭೆಗೆ ಪ್ರಚೋದನೆ ನೀಡುವಂತಹ ಭಾಷಣ ಮಾಡಿರುತ್ತಾರೆ. ಸನ್ಮಾನ್ಯ ರಘು ಅವರು ಈ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಸೃಷ್ಟಿಯಾಗುವ ಹೇಳಿಕೆ ನೀಡಬಾರದು. ಶಾಂತಿ ಕದಡುವ ಹೇಳಿಕೆಯಿಂದ ಸಹಬಾಳ್ವೆಗೆ ಧಕ್ಕೆ ಬರುವ ಕಾರಣ ಸರಕಾರ, ಜಿಡಳಿತ ಮತ್ತು ಪೊಲೀಸು ಇಲಾಖೆ ಎಚ್ಚೆತ್ತುಕೊಂಡು ಪ್ರಕರಣ ಗಂಭೀರವಾಗಿ ಪರಿಗಣಿಸಬೇಕೆಂದು ಕೇಳಿಕೊಳ್ಳುತ್ತೇವೆ ಎಂದರಲ್ಲದೆ ರಾಜ್ಯದಲ್ಲಿ ಈಗ ಸೌಹಾರ್ದ ನೆಲೆಸಿದೆ, ಅದನ್ನು ಹಾಳು ಮಾಡುವವರು ಯಾರೇ ಆಗಲಿ, ಯಾವುದೇ ಸಮುದಾಯವಾಗಲಿ ಅವರ ವಿರುದ್ಧ ಕ್ರಮಕೈಗೊಳ್ಳಲು ಹಿಂಜರಿಕೆ ಬೇಡವೆಂದು ಮನವಿ ಮಾಡಿದ್ದಾರೆ.