ಶಾಲೆಗೆ ಸುಣ್ಣ – ಬಣ್ಣದ ಮೆರಗು ನೀಡಿದ ತಹಶೀಲ್ದಾರ್ ಮೋಹನ್ ಕುಮಾರ್…
ಶಿವಮೊಗ್ಗ, (ಹೊಸನಾವಿಕ): ಕೊಡಗು ಜಿಯ ಪೊನ್ನಂಪೇಟೆಯ ತಹಶೀಲ್ದಾರ್ ಕೆ.ಎನ್. ಮೋಹನ್ ಕುಮಾರ್‌ರವರು ಹೊಸನಗರ ತಾಲ್ಲೂಕಿನ ಕಲ್ಲುಹಳ್ಳ ಶಾಲೆಗೆ ಸುಣ್ಣ-ಬಣ್ಣ ಮಾಡಿ ಗಮನಸೆಳೆದಿzರೆ.
ಶಾಲೆ ಎಂಬುದು eನ ಮಂದಿರ. ಮಕ್ಕಳ ಭವಿಷ್ಯ ರೂಪುಗೊಳ್ಳುವ ಪವಿತ್ರ ಸ್ಥಳ. ಈ eನ ಮಂದಿರವು ಸೌಕರ್ಯ ಪೂರ್ಣವಾಗಿರಬೇಕು, ಸ್ವಚ್ಛವಾಗಿರ ಬೇಕು, ಸುರಕ್ಷಿತವಾಗಿರಬೇಕು. ಆದರೆ ಹಲವಾರು ಸರ್ಕಾರಿ ಶಾಲೆಗಳು ಕಾಲಾವಕಾಶದ ಕೊರತೆ, ಅನುದಾನದ ಅಭಾವ ಇತ್ಯಾದಿ ಕಾರಣಗಳಿಂದ ಸುಣ್ಣ-ಬಣ್ಣ ಕೆಲಸಗಳಂತಹ ಮೂಲಭೂತ ದುರಸ್ತಿ ಕಾರ್ಯಗಳನ್ನು ನಿರ್ವಹಿಸಲು ಸಂಕಷ್ಟ ಅನುಭವಿಸು ತ್ತವೆ. ಇಂತಹ ಸಂದರ್ಭದಲ್ಲಿ ಸಮಾಜದ ಹೊಣೆಗಾರರು ಮುಂದೆ ಬಂದು ಸಹಾಯಹಸ್ತ ನೀಡುವುದು ನಿಜವಾದ ಸಮಾಜ ಸೇವೆಯಾಗಿದೆ. ಈ ಕೆಲಸವನ್ನು ಕೆ.ಎನ್. ಮೋಹನ್ ಕುಮಾರ್ ಮಾಡಿzರೆ.
ಅವರು ಕೇವಲ ಅಧಿಕಾರಿ ಮಾತ್ರವಲ್ಲ, ಸಮಾಜದ ಅಭಿವೃದ್ಧಿಗೆ ಬದ್ಧರಾಗಿರುವ ವ್ಯಕ್ತಿತ್ವವೆಂದು ಈ ಕಾರ್ಯದ ಮೂಲಕ ತೋರಿಸಿzರೆ. ಶಾಲೆಯ ಗೋಡೆಗಳು ಹಾಳಾಗಿದ್ದು, ಬಣ್ಣ ಕಳಚಿ ಹೋಗಿದ್ದವು. ಮಕ್ಕಳಿಗೆ ಸ್ವಚ್ಛ ಮತ್ತು ಆಕರ್ಷಕ ವಾತಾವರಣದಲ್ಲಿ ಕಲಿಯುವ ಅವಕಾಶ ಕಲ್ಪಿಸುವ ಉzಶದಿಂದ ಕೆ.ಎನ್. ಮೋಹನ್ ಕುಮಾರ್ ಅವರು ಸ್ವಯಂ ಪ್ರೇರಿತವಾಗಿ ಆರ್ಥಿಕ ಸಹಾಯ ಒದಗಿಸಿದರು. ಅವರ ದಾನಶೀಲತೆಯಿಂದ ಶಾಲಾ ಕಟ್ಟಡಕ್ಕೆ ಹೊಸ ಮೆರುಗು ಬಂದಿದೆ. ಗೋಡೆಗಳಿಗೆ ಸುಣ್ಣ-ಬಣ್ಣ ಹಚ್ಚಿ, ಶಾಲೆಯ ಸೌಂದರ್ಯ ಹೆಚ್ಚಿಸಲಾಗಿದೆ.
ಇಂತಹ ಸಮಾಜಪರ ಮನೋಭಾವದ ಅಧಿಕಾರಿಗಳು ನಮ್ಮ ನಡುವೆ ಇರುವುದೇ ನಮ್ಮ ಭಾಗ್ಯ. ಅವರ ಈ ಸೇವೆಯನ್ನು ಸದಾ ಕೃತಜ್ಞತೆಯಿಂದ ಸ್ಮರಿಸುತ್ತೇವೆ. ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿದ ಮೋಹನ್ ಕುಮಾರ್ ಅವರಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲುಹಳ್ಳ, ಹೊಸನಗರ ತಾಲೂಕು ಶಿವಮೊಗ್ಗ ಜಿಯ ಶಾಲಾ ಮುಖ್ಯ ಶಿಕ್ಷಕಿಯಾದ ಫೌಜಿಯ ಸರವತ್, ಎಸ್‌ಡಿಎಂಸಿ ಅಧ್ಯಕ್ಷ ಪುರುಷೋತ್ತಮ್, ಶಾಲಾ ಶಿಕ್ಷಕರಾದ ಮಾಲತೇಶ್, ವಿನುತ, ದೀಪ, ಎಸ್‌ಡಿಎಂಸಿ ಸದಸ್ಯರು, ಪೋಷಕರು ಹಾಗೂ ಎ ವಿದ್ಯಾರ್ಥಿಗಳ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ಹಾಗೂ ಅಭಿನಂದನೆ ಸಲ್ಲಿಸಿzರೆ.


