ಜಿಲ್ಲಾ ಸುದ್ದಿತಾಜಾ ಸುದ್ದಿ

ಅಭೂತಪೂರ್ವ ಯಶಸ್ಸಿನೊಂದಿಗೆ ತೆರೆ ಕಂಡ ಸ್ವದೇಶಿ ಮೇಳ

Share Below Link

ಶಿವಮೊಗ್ಗ : ಜನರಿಗೆ ದೇಶೀಯ ವಸ್ತುಗಳ ಪರಿಚಯ ಮತ್ತು ಸ್ವದೇಶಿ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿ ಯಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವದೇಶಿ ಜಗರಣ ಮಂಚ್ ಆಯೋಜಿಸಿದ್ದ ಬೃಹತ್ ಸ್ವದೇಶಿ ಮೇಳವು ಅಭೂತಪೂರ್ವ ಯಶಸ್ಸಿ ನೊಂದಿಗೆ ಭಾನುವಾರ ತೆರೆ ಕಂಡಿದೆ.
ನಗರದಲ್ಲಿ ಐದು ದಿನಗಳ ಕಾಲ ನಡೆದ ಮೇಳಕ್ಕೆ ಪ್ರತಿ ನಿತ್ಯವೂ ಜನ ಸಾಗರೋಪಾದಿ ಯಲ್ಲಿ ಹರಿದು ಬಂದಿದ್ದು, ಒಟ್ಟು ೩ ಲಕ್ಷದ ೭೫ ಸಾವಿರ ಜನ ಒಟ್ಟು ಭೇಟಿ ಕೊಟ್ಟಿದ್ದು, ಮೇಳದ ೩೦೫ ಮಳಿಗೆಗಳ ಮೂಲಕ ೭ ಕೋಟಿ ೬೮ ಲಕ್ಷ ರೂ.ಗಳ ವ್ಯಾಪಾರ ವಹಿ ವಾಟು ನಡೆದಿದ್ದು ಐತಿಹಾಸಿಕ ದಾಖಲೆಯಾಗಿದೆ.
ಯಾವುದೇ ಫ್ಲೆಕ್ಸ್ ಗಳ ಪ್ರಚಾರದಾಡಂಬರವಿಲ್ಲದಿದ್ದರೂ ಸ್ವದೇಶೀ ತನಕ್ಕೆ ಶಿವಮೊಗ್ಗ ನಗರದ ಜನತೆ ಮನ್ನಣೆ ಕೊಟ್ಟಿದ್ದು, ಇದು ಸ್ವದೇಶಿ ಪ್ರeಗೆ ಸಾಕ್ಷಿಯಾಯಿ ತಲ್ಲದೇ ಜನರ ನಡುವೆ ಸಂಪರ್ಕ ಕೊಂಡಿಯಾಯಿತು. ಧೂಳು ಮುಕ್ತ, ಪ್ಲಾಸ್ಟಿಕ್ ಮುಕ್ತವಾಗಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮೂಲಕ ಪರಿಸರ ಸ್ನೇಹಿ ವಾತಾ ವರಣ ನಿರ್ಮಾಣ ಮಾಡಲಾ ಗಿತ್ತು. ಲಕ್ಷಾಂತರ ಮಂದಿ ಸೇರಿದ ಮೇಳದಲ್ಲಿ ಊಟದ ತಟ್ಟೆ, ಲೋಟ ವ್ಯವಸ್ಥೆ, ಟೀ,ಕಾಫಿ ಕೂಟ ಲೋಟದಲ್ಲಿ ವ್ಯವಸ್ಥೆ ಮಾಡಲಾ ಗಿತ್ತು.
ಆಹಾರೋಪತ್ಪಾದನೆ, ಕೈಗಾರಿಕೆ, ಕೃಷಿ, ಸ್ವದೇಶಿ ಪರಂಪರೆ ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿeನಗಳ ವಿಶ್ವ ವಿದ್ಯಾಲಯ ಪರವಾಗಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿeನಗಳ ವಿಶ್ವ ವಿದ್ಯಾಲಯ, ಬ್ಯಾಂಕ್ ಮಳಿಗೆಗಳು ಹೀಗೆ ೩೦೫ ಮಳಿಗೆಗಳ ಪೈಕಿ ೧೨೫ ದೇಶೀಯ ಸ್ಟಾಲ್, ೨೮ ಆಹಾರ ಮಳಿಗೆ, ಅಂತಾರಾಷ್ಟ್ರೀಯ ಮಟ್ಟದ ಕೈಗಾರಿಕೆ ಹಾಗೂ ೮ ರಾಷ್ಟ್ರೀಕೃತ ಬ್ಯಾಂಕ್, ೧೨ ಪ್ರಾಯೋಜಕರ ಉತ್ಪನ್ನ ಪ್ರದರ್ಶನ ಮಳಿಗೆಗಳಿ ದ್ದವು. ತಾರಸಿ ತೋಟ ತರಬೇತಿ ಕಾರ್ಯ್ಗಾರಗಳಿಂದ ಹಿಡಿದು ರೈತರ ನಡೆ ದೇಶೀಯ ಕಡೆ ಅಲ್ಲಿಯ ತನಕ ೧೬ ಕಾರ್‍ಯಾಗಾರ ಗಳು ನಡೆದವು, ಅಲ್ಲದೇ ತರಬೇತಿ ಕಾರ್ಯಾಗಾರಗಳನ್ನು ೭ ಸಾವಿರ ಜನ ನೇರ ಪ್ರಸಾರದಲ್ಲಿ ವೀಕ್ಷಣೆ ಹಾಗೂ ೧ ಲಕ್ಷದ ೨೦ ಸಾವಿರ ಜನ ಸಾಮಾಜಿಕ ಜಲ ತಾಣದಲ್ಲಿ ವೀಕ್ಷಿಸಿದ್ದು ವಿಶೇಷ,
ನಗರದಲ್ಲಿ ಕೈ ಬರಹದ ೬ ಮಹಾಧ್ವಾರಗಳನ್ನು ನಿರ್ಮಾಣ ಮಾಡಲಾಗಿತ್ತು, ಮೇಳಕ್ಕೂ ಮೊದಲು ೪೦ ಶಾಲೆಗಳನ್ನು ಸಂಪ ರ್ಕಿಸಿ ಮೇಳದ ಮಾಹಿತಿ ನೀಡ ಲಾಗಿತ್ತು. ದೇಶೀಯ ಬಟ್ಟೆಗಳಿಂದ ನಗರದಲ್ಲಿನ ಹಲವಾರು ಅಲಂಕಾರ ಮಾಡಲಾಗಿತ್ತು, ೬೦ ಅಡಿಯ ಅಗಲ ಮತ್ತು ಉದ್ದದ ರಂಗೋಲಿ, ೧೨೦೦ ಗೋ ಆರತಿ ಮತ್ತು ೩೦೦೦ ಕ್ಕೂ ಹೆಚ್ಚು ಗೋ ಗ್ರಾಸ ನೀಡಲಾಯಿತು. ಸ್ವದೇಶೀ ಚಿತ್ರಕಲಾ ಸ್ಪರ್ಧೆಯಲ್ಲಿ ೪೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು, ೩೩೪ ಮಕ್ಕಳು ಸ್ವದೇಶಿ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ೧೨೦ ಅಲಂಕೃತ ಮಡಿಕೆಗಳನ್ನು ಮಹಿಳೆಯರು ನೀಡಿದ್ದರು.
ಪ್ರತಿ ದಿನವೂ ಖ್ಯಾ ತ ಕಲಾ ವಿದರಿಂದ ಹಾಡು, ಭರತನಾಟ್ಯ, ಯೋಗ, ಸಂಗೀತ, ಬಾನ್ಸುರಿ ವಾದನ,ಯಕ್ಷಗಾನ , ಡೊಳ್ಳು , ವೀರಗಾಸೆ ಹೀಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳಕ್ಕೆ ಮೆರಗು ತಂದುಕೊಟ್ಟಿತು. ಮೇಳ ದಲ್ಲಿ ಮೇಲುಕೋಟೆ ಪುಳಿಯೋ ಗರೆ, ಮುಳುಬಾಗಿಲು ದೋಸೆ, ದಾವಣಗೆರೆ ಬೆಣ್ಣೆದೋಸೆ, ಸಾವ ಯವ ಕಬ್ಬಿನಹಾಲು, ಅಡಕೆ ಐಸ್ ಕ್ರೀಂ, ಬಂಗಾರಪೇಟೆ ಪಾನಿಪೂರಿ, ಹುಬ್ಬಳ್ಳಿಯ ಗಿರಮಿಟ್, ಸಿರಿ ಧಾನ್ಯಗಳ ರೊಟ್ಟಿ , ಅಕ್ಕಿ ರೊಟ್ಟಿ ಎಣಗಾಯಿ ಪಲ್ಯ, (ನವಣೆ, ಸಜ್ಜೆ, ರಾಗಿ, ಜೋಳ ,ಅಕ್ಕಿ ರೊಟ್ಟಿ) ಸೇರಿದಂತೆ ಕವಳಿ, ಕಂಚಿ, ಮಾವು, ನಿಂಬೆ, ಮೆಣಸಿನ ಹಿಂಡಿ, ಮೆಂತ್ಯ ಹಿಂಡಿ, ಅಗಸಿ, ಶೇಂಗಾ, ಗುರೆಳ್ಳು ಚಟ್ನಿ ಪುಡಿಯಂತಹ ವೈವಿಧ್ಯ ಮಯ ಆಹಾರಗಳೂ ಸ್ವದೇಶಿ ಆಹಾರ ಪ್ರಿಯರ ಮನಸರಸನ್ನು ಸಂತೃಪ್ತಿಗೊಳಿಸಿತು.
ಇನ್ನು ಸ್ವದೇಶಿ ಕ್ರೀಡೆಗಳಾದ ಹಗ್ಗ ಜಗ್ಗಾಟ, ಲಗೋರಿ, ಕೋಲಾಟ, ಅವ್ವ ಅಪ್ಪಚ್ಚಿ ಆಟ, ಕುದುರೆ ಆಟ, ಚೆಂಡಾಟ, ರಿಂಗ್ ಆಟ, ಬುಗುರಿ, ಟೈರ್ ಗಾಲಿ ಆಟಗಳು ಮಕ್ಕಳಿಗೆ ಭರಪೂರ ಮನರಂಜನೆ ನೀಡಿದವು.