ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಮನೆ ಮಗನ ಬೆಂಬಲಿಸಿ ಸ್ವಾಭಿಮಾನಿ ಗೆಲುವು ದಾಖಲಿಸಿ…

Share Below Link

ದಾವಣಗೆರೆ : ನನ್ನದು ಸ್ವಾಭಿಮಾನದ ಹೋರಾಟ. ದಾವಣಗೆರೆ ತಾಲೂ ಕಿನ ಕಕ್ಕರಗೊಳ್ಳ ಗ್ರಾಮ ದವನು. ಬಡ ಕುಟುಂಬದ ಹಿನ್ನೆಲೆ ಯಿಂದ ಬಂದವನು. ದಾವಣಗೆರೆ ಜಿ ಯಲ್ಲಿ ಗ್ರಾಮೀಣ ಪ್ರದೇಶ ಸೇರಿ ದಂತೆ ಇಡೀ ದೇಶವೇ ಇತ್ತ ತಿರುಗಿ ನೋಡುವಂತೆ ಮಾಡುವ ಕನಸು ಕಂಡಿದ್ದೇನೆ. ನನ್ನ ಗೆಲುವು ಸ್ವಾಭಿ ಮಾನದ ಗೆಲುವು. ನಿಮ್ಮ ಗೆಲುವು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಕಕ್ಕರಗೊಳ್ಳ ಮನವಿ ಮಾಡಿದರು.


ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿ ರಥೋತ್ಸವ ಹಾಗೂ ಓಕಳಿ ತಾಲೂಕಿನ ದುಗ್ಗಾವತಿಯಲ್ಲಿ ಸ್ವಾಮಿ ರಥೋತ್ಸವ ಉತ್ಸವದಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು, ದಾವಣಗೆರೆಯಲ್ಲಿ ಸ್ಪರ್ಧೆ ಮಾಡಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಮನೆ ಮುಂದೆ ಹಿಂದೆಯೂ ಕಾದಿದ್ದೀರಾ. ಮುಂದೆಯೂ ಕಾಯುವಂಥ ಪರಿಸ್ಥಿತಿ ಬರುತ್ತದೆ. ನಾನು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ. ನಿಮ್ಮ ಸೇವೆ ಮಾಡುವುದಕ್ಕೋಸ್ಕರ ಬಂದಿದ್ದು, ನನಗೆ ಮತ ನೀಡಿ. ನಿಮ್ಮ ಸ್ವಾಭಿಮಾನದ ಗೆಲುವು ನೀವೇ ದಾಖಲಿಸಿ ಎಂದು ಮನವಿ ಮಾಡಿದರು.
ನನಗೆ ಹಣ ಬಲ ಇಲ್ಲ, ಜತಿ ಬಲ ಇಲ್ಲ, ತೋಳ್ಬಲ ಇಲ್ಲ. ನನ್ನ ಬಲ ಏನಿದ್ದರೂ ಜನರ ಬಲ. ಜನಾದೇಶಕ್ಕೆ, ಜನರ ಪ್ರೀತಿ, ವಿಶ್ವಾಸಕ್ಕೆ ತಲೆಬಾಗುತ್ತೇನೆ. ನಾನು ಹೋಗುವ ಪ್ರತಿ ಹಳ್ಳಿ ಹಳ್ಳಿಗಳಲ್ಲಿ, ನಗರ ಪ್ರದೇಶಗಳಲ್ಲಿಯೂ ಜನರು ತೋರುತ್ತಿರುವ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು. ಎರಡು ಕುಟುಂಬ ಗಳ ರಾಜಕಾರಣ, ಹಿಡಿತಕ್ಕೆ ಬೇಸತ್ತಿದ್ದು, ಎ ವರ್ಗದವರೂ ಬೆಂಬಲಿಸುತ್ತಿzರೆ ಎಂದರು.
ಯಾವ ಗ್ರಾಮಕ್ಕೂ ಹೋದರೂ ಅಲ್ಲಿ ನೆಲೆಸಿರುವ ಪ್ರತಿ ಯೊಂದು ಜತಿ, ಧರ್ಮ, ಸಮುದಾಯದವರು ಬಂದು ಬೆಂಬಲಿಸುತ್ತಿzರೆ. ನಿಮಗೆ ನಮ್ಮ ಬೆಂಬಲ ಎಂಬ ಅಭಯ ನೀಡುತ್ತಿ zರೆ. ಹಾಗಾಗಿ, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಈ ಬಾರಿ ನನ್ನ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶಕ್ಕೆ ಬರು ವುದು ಚುನಾವಣೆಯ ಸಮಯ ದಲ್ಲಿ. ಬಳಿಕ ಬರುವುದೇ ಇಲ್ಲ. ಸಮಸ್ಯೆಗಳನ್ನು ಪರಿಹರಿಸುವುದೂ ಇಲ್ಲ. ನಿಮ್ಮ ಕೆಲಸವನ್ನೂ ಮಾಡಿ ಕೊಡುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿರುವ ಸಮಸ್ಯೆಗಳನ್ನು ನೋಡಿದರೆ ಕಳೆದ ೩೦ ವರ್ಷ ಯಾವ ರೀತಿ ನಿಮ್ಮನ್ನು ಮತಗಳಿಗೆ ಅಷ್ಟೇ ಬಳಕೆ ಮಾಡಿಕೊಳ್ಳಲಾಗಿದೆ. ಇಂಥವರಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿ. ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ. ಯಾವ ರೀತಿ ಜನಪ್ರತಿನಿಧಿ ಕೆಲಸ ಮಾಡಬೇಕು ಎಂದು ತೋರಿಸಿಕೊಡುತ್ತೇನೆ. ಸ್ವಾಭಿಮಾನಿಗೆ ಅವಕಾಶ ಕೊಡಿ. ಆಮೇಲೆ ನೀವೇ ಹೇಳುತ್ತೀರಾ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ಮಾವ ಶಾಸಕರು. ಪತಿ ಶಾಸಕರು ಹಾಗೂ ಸಚಿವರು. ಅವರ ಮನೆತನದವರೇ ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿಯಲ್ಲಿ ಜಿ. ಎಂ. ಸಿದ್ದೇಶ್ವರ ಕುಟುಂಬವೇ ಕಳೆದ ೩೦ ವರ್ಷಗಳಿಂದ ಲೋಕ ಸಭೆಗೆ ಟಿಕೆಟ್ ಪಡೆದು ಸ್ಪರ್ಧೆ ಮಾಡುತ್ತಿದೆ. ಹಾಗಾದರೆ ಪಕ್ಷಕ್ಕಾಗಿ ದುಡಿದ, ಜೀವನವನ್ನೇ ಮುಡುಪಾಗಿಟ್ಟವರ ಕಥೆ ಏನು? ಯುವಕರಿಗೆ ಅವಕಾಶ ಸಿಗಬೇಕು. ರಾಜಕಾರಣದಲ್ಲಿ ಹೊಸ ಗಾಳಿ ಬೀಸುವಂತಾಗಬೇಕು. ಈ ಬದಲಾವಣೆ ಈ ಚುನಾವಣೆ ಯಿಂದಲೇ ಆರಂಭ ಆಗಲಿ ಎಂದು ಕರೆ ನೀಡಿದರು. ದುಗ್ಗಾವತಿ ಗ್ರಾಮದ ಎ ಸಮಾಜದ ಮುಖಂಡರು, ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯ ಕರ್ತರು ವಿನಯ್ ಕುಮಾರ್ ಅವರಿಗೆ ಬೆಂಬಲ ನೀಡಿದರು.