ಜಿಲ್ಲಾ ಸುದ್ದಿತಾಜಾ ಸುದ್ದಿ

ಹಲ ಮಾರ್ಪಾಡಿನೊಂದಿಗೆ ಪುರುಷರ ಪ್ರಯಾಣಕ್ಕೆ ಸಹಕರಿಸಿ: ರಂಗನಾಥ್ ಆಗ್ರಹ

Share Below Link

ಶಿವಮೊಗ್ಗ, ಮಾ.೧೨: ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡಿರುವುದು ಸ್ವಾಗತಾರ್ಹವೇ. ಆದರೆ ಇದರಿಂದ ಪುರುಷರಿಗೆ ಅದರಲ್ಲೂ ವಯಸ್ಸಾದ ಪುರುಷರಿಗೆ ತುಂಬಾ ಕಿರಿಕಿರಿ ಯಾಗುತ್ತಿದ್ದು, ಪ್ರಯಾಣ ನರಕ ಯಾತನೆ ಅನುಭವಿಸುತ್ತಿzರೆ. ಸರ್ಕಾರ ಇದಕ್ಕಾಗಿ ಪರ್ಯಾಯ ಮಾರ್ಗವನ್ನು ಸೂಚಿಸಬೇಕು ಎಂದು ಸಾಮಾಜಿಕ ಅಭಿವೃದ್ಧಿ ರಂಗದ ಸಂಸ್ಥಾಪಕ ರಾಜಧ್ಯಕ್ಷ ಟಿ.ಎಲ್. ರಂಗನಾಥ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡುವುದೇ ಸಂಕಷ್ಟ ವಾಗುತ್ತದೆ. ಬಸ್ಸುಗಳೆಲ್ಲವೂ ಮಹಿಳೆ ಯರಿಂದ ತುಂಬಿ ತುಳುಕುತ್ತವೆ. ಪುರುಷರಿಗೆ ಸೀಟನ್ನೇ ಬಿಟ್ಟುಕೊಡು ವುದಿಲ್ಲ. ದೂರದ ಊರುಗಳಿಗೆ ಪ್ರಯಾಣ ಮಾಡುವ ವಯಸ್ಸಾದವರು ನಿಂತುಕೊಂಡೇ ಹೇಗೆ ಪ್ರಯಾಣ ಮಾಡಲು ಸಾಧ್ಯ ಅದರಲ್ಲೂ ಬಿಪಿ, ಸಕ್ಕರೆ ಖಾಯಿಲೆ ಇರುವವರೂ ಕೂಡ ಪ್ರಯಾಣಿಸು ತ್ತಾರೆ. ಸರ್ಕಾರದ ಆಶಯವೇನು ಒಳ್ಳೆಯದೇ. ಆದರೆ ಅದರ ದುರುಪ ಯೋಗ ಹೆಚ್ಚಾಗುತ್ತಿದೆ ಎಂದು ದೂರಿದರು.
ಸರ್ಕಾರ ಈ ಹಿನ್ನಲೆಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲೇಬೇಕಾಗಿದೆ. ಸಾರಿಗೆ ಮಂತ್ರಿಗಳು ಇಂತಹ ಗಂಭೀರ ವಿಚಾರದತ್ತ ಗಮನಹರಿಸಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಪುರುಷರು ರಸ್ತೆಗಿಳಿದು ಹೋರಾಟ ಮಾಡ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಡಿ. ಹಾಲೇಶಪ್ಪ, ಪ್ರಕಾಶ್, ಹರೀಶ್ ಇದ್ದರು.

Leave a Reply

Your email address will not be published. Required fields are marked *