ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಸಾಧನೆಯ ಆಧಾರದಲ್ಲಿ ನನ್ನನ್ನು ಬೆಂಬಲಿಸಿ: ರಘುಪತಿ ಭಟ್ ಮನವಿ

Share Below Link

ಹೊನ್ನಾಳಿ : ನೈಋತ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ನನಗೆ ಸಾಧನೆಯ ಆಧಾರದ ಮೇಲೆ ಮತ ನೀಡಿ ಬೆಂಬಲಿಸುವಂತೆ ಉಡುಪಿಯ ಮಾಜಿ ಶಾಸಕ ಕೆ ರಘುಪತಿ ಭಟ್ ಮನವಿ ಮಾಡಿದರು.
ಹೊನ್ನಾಳಿ ವಾಲ್ಮೀಕಿ ಸಮುದಾಯ ಭವನದಲ್ಲಿ ನಡೆದ ನೈಋತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿ ಸಿರುವುದಾಗಿ ಹೇಳಿದರು.
ಉಡುಪಿಯಲ್ಲಿ ಮೂರು ಭಾರಿ ಶಾಸಕರಾಗಿ, ಜಿ ಪಿಜೆಪಿ ಅಧ್ಯಕ್ಷ ರಾಗಿ ಪಕ್ಷವನ್ನು ತಳ ಮಟ್ಟದಿಂದ ಕಟ್ಟಿ ಬೆಳಸಿದವನಾಗಿದ್ದು. ಕಳೆದಬಾರಿ ಕ್ಷೇತ್ರದ ಕಾರ್ಯಕರ್ತನಿಗೆ ಉಡುಪಿ ವಿಧಾನಸಭೆ ಟಿಕೆಟ್ ನೀಡಿದ್ದರಿಂದ ಅವರ ಗೆಲುವಿಗೆ ಶ್ರಮಿಸಿದ್ದನ್ನ ಸಭೆಯಲ್ಲಿ ಸ್ಮರಿಸಿದರು.
ಪಕ್ಷದ ಸೂಚನೆಯ ಮೇರೆಗೆ ಪದವೀಧರ ಮತದಾರರ ಸಂಪರ್ಕಿಸಿ ಕ್ಷೇತ್ರದ ಹೊಸ ಮತದಾರರ ಪಟ್ಟಿಯಲ್ಲಿ ಮತದಾರರನ್ನು ನೊಂದಾಯಿಸಿz, ಶಿವಮೊಗ್ಗದಲ್ಲಿ ಕಳೆದ ಲೋಕಸಭಾ ಚುನಾವಣೆ ಪ್ರಚಾರ ಹಿನ್ನಲೆ ೪೨ ದಿನ ಇದ್ದು ಬಿಜೆಪಿ ಕಾರ್ಯಕರ್ತ ರೊಂದಿಗೆ ಉತ್ತಮ ಭಾಂದವ್ಯ ವ್ಯಕ್ತವಾಗಿತ್ತು. ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷ ಬೇರೆಯವರಿಗೆ ಚುನಾವಣೆಯಲ್ಲಿ ಅವಕಾಶ ಕಲ್ಪಿಸಿದೆ. ಪಕ್ಷೇತರ ಅಭ್ಯರ್ಥಿಯಾದ ನನ್ನ ಕ್ರಮ ಸಂಖ್ಯೆ ೭ ಕ್ಕೆ ಮತ ನೀಡಿ ಬೆಂಬಸಲಿಸುವಂತೆ ಮನವಿ ನೀಡಿದರು.
ಸವಳಂಗ ನ್ಯಾಮತಿ ಮೂಲಕ ಇಂದು ಪ್ರವಾಸ ಆರಂಭಿಸಿರುವ ತಾವು ಹೊನ್ನಾಳಿ,ಚನ್ನಗಿರಿಯಲ್ಲೂ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ತಮ್ಮ ಕ್ಷೇತ್ರದಲ್ಲಿ ಸಾಧಕ ಶಿಕ್ಷಕ ಪ್ರಶಸ್ತಿ, ಸಾಧಕ ಶಾಲೆ ಪ್ರಶಸ್ತಿ ನೀಡಿ ಶಿಕ್ಷಣ ಪ್ರಗತಿಗೆ ಮುಂದಾಗಿದ್ದು ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸೇವೆಸಲ್ಲಿಸಿರುವ ನನ್ನನ್ನು ಬೆಂಬಲಿಸಬೇಕೆಂದರು.
ಸಮಾರಂಭದಲ್ಲಿ ಹೊನ್ನಾಳಿ ನಾರಾಯಣ್, ಬಿಂಬ ಮಂಜು ನಾಥ, ಮದನಭಾವಿ ಶಾಂತ ವೀರಪ್ಪ, ವಕೀಲ ಮಂಜುನಾಥ, ಅಶ್ವಿನಿ, ವಾಸಪ್ಪ, ಗುರುದತ್, ಕತ್ತಿಗೆ ನಾಗರಾಜ್, ಯೊಗೇಶ್ ಸೇರಿದಂತೆ ಗೊಣಗೆರೆ, ನ್ಯಾಮತಿ, ಸಾಸ್ವೇಹಳ್ಳಿ ಮತದಾರರು ಉಪಸ್ಥಿತರಿದ್ದರು.

This image has an empty alt attribute; its file name is Arya-coll.gif