ಇತರೆಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಅಡಿಕೆ ದರ ದಿಢೀರ್ ಕುಸಿತ: ಆರ್‌ಎಂಎಂ ಆತಂಕ…

Share Below Link

ಶಿವಮೊಗ್ಗ: ಅಡಿಕೆ ಬೆಳೆಗೆ ಹಳದಿ ಚುಕ್ಕಿ ರೋಗಕ್ಕೆ ಔಷಧಿ ಕಂಡು ಹಿಡಿಯಬೇಕು ಹಾಗೂ ಅಡಿಕೆ ಧಾರಣೆ ಇಳಿಮುಖವಾಗುತ್ತಿರುವುದ ರಿಂದ ಅಡಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದು, ಕೇಂದ್ರ ಸರ್ಕಾರ ಕೂಡಲೇ ನೆರವಿಗೆ ಬರಬೇಕು ಎಂದು ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯ ಸಂಚಾಲಕ ಹಾಗೂ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಅವರು ಸುದ್ದಿಗೋಷ್ಟಿಯಲ್ಲಿ ಆಗ್ರಹಿಸಿದರು.
ಮಳೆ ಪ್ರಮಾಣ ಕಡಿಮೆಯಾಗಿ ರುವುದರಿಂದ ಕಳೆದ ೧ ವಾರದಿಂದ ಮಲೆನಾಡು ಜಿಲ್ಲೆಗಳಲ್ಲಿ ಅಡಿಕೆ ಬೆಳೆಗೆ ಹಳದಿ ಚುಕ್ಕಿ ರೋಗ ವ್ಯಾಪಕವಾಗಿ ಹರಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ತೀರ್ಥಹಳ್ಳಿಯ ಲ್ಲಿರುವ ಅಡಿಕೆ ಸಂಶೋಧನಾ ಕೇಂದ್ರದ ವಿಜನಿಗಳು ಹಳದಿ ಚುಕ್ಕಿ ರೋಗಕ್ಕೆ ಮೈಲುತುತ್ತ ಸುಣ್ಣ ಬಳಸಿ ಎಂದು ಹೇಳುತ್ತಿದ್ದಾರೆಯೇ ಹೊರತು ಪರ್ಯಾಯ ಹಾಗೂ ಶಾಶ್ವತವಾದ ಔಷಧಿಯನ್ನು ಇದುವರೆಗೆ ಕಂಡು ಹಿಡಿದಿಲ್ಲ. ಕೇಂದ್ರ ಸರ್ಕಾರ ರೈತರ ಬಗ್ಗೆ ಮೊಸಳೆ ಕಣ್ಣೀರು ಹಾಕುವು ದನ್ನು ಬಿಟ್ಟು ಕೂಡಲೇ ಮಧ್ಯ ಪ್ರವೇಶ ಮಾಡಿ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಸಂಶೋಧನೆಗೆ ಹೆಚ್ಚು ಒತ್ತು ಕೊಡಬೇಕು ಎಂದ ಅವರು, ಅಡಿಕೆ ಬೆಳೆಯೊಂದ ರಿಂದಲೇ ಕೇಂದ್ರ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ಜಿಎಸ್‌ಟಿ ಸಿಗುತ್ತಿದ್ದರೂ ಕೂಡ ನೂರು ಕೋಟಿ ರೂ.ನಲ್ಲಿ ಸಂಶೋಧನಾ ಕೇಂದ್ರವನ್ನು ಅಭಿವೃದ್ಧಿಪಡಿಸಲು ಆಗುತ್ತಿಲ್ಲ ಎಂದರು.
ಅದೇರೀತಿ ಅಡಿಕೆ ಧಾರಣೆಯೂ ಸಹ ಇಳಿಮುಖವಾಗುತ್ತಿದೆ. ಒಂದು ವಾರದ ಹಿಂದೆ ಕ್ವಿಂಟಾಲಿಗೆ ೫೭ ಸಾವಿರ ರೂ. ಇದ್ದದ್ದು ಈಗ ೫೪ ಸಾವಿರ ರೂ.ಗಳಿಗೆ ಇಳಿದಿದೆ. ಇದಕ್ಕೆ ಗುಟ್ಕಾ ಕಂಪೆನಿಗಳ ಲಾಬಿ ಕಾರಣವಾಗಿದೆ. ಹಾಗೆಯೇ ಬೇಡಿಕೆಗೆ ತಕ್ಕಂತೆ ಅಡಿಕೆ ಇಲ್ಲದಿದ್ದರೂ ಕೂಡ ಬೆಲೆಯಲ್ಲಿ ಏರಿಕೆ ಆಗಿಲ್ಲ. ಜಿಲ್ಲೆಯಲ್ಲಿ ತಿಂಗಳಿಗೆ ೬ ಲಕ್ಷ ಮೂಟೆ ಇರಬೇಕಾಗಿತ್ತು. ಈಗ ಅದು ೩ರಿಂದ ಮೂರೂವರೆ ಕ್ವಿಂಟಾಲ್ ಮಾತ್ರ ಇದೆ ಹಾಗೂ ಮುಂದಿನ ಮೂರು ತಿಂಗಳಿಗೆ ೧೦ ಲಕ್ಷ ಮೂಟೆ ಬೇಕಾಗುತ್ತದೆ. ಹಳದಿ ರೋಗ ಹಾಗೂ ಬಿಸಿಲಿನಿಂದ ಅಡಿಕೆ ಹಿಂಗಾರು ಬೆಳೆ ಕಡಿಮೆಯಾಗಿದೆ ಎಂದರು.
ಬೆಲೆ ಕುಸಿತದಿಂದ ಅಡಿಕೆ ಬೆಳೆಗಾರರು ಆತಂಕಕ್ಕೊಳಗಾಗ ಬಾರದು. ಖರೀದಿದಾರರು ಖರೀದಿಯನ್ನು ನಿಲ್ಲಿಸಬಾರದು. ಕ್ಯಾಂಪ್ಕೊ ಮತ್ತು ಮ್ಯಾಮ್ಕೋಸ್ ಸಂಸ್ಥೆಗಳು ರೈತರ ನೆರವಿಗೆ ಬರಬೇಕು ಎಂದ ಅವರು, ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದಿರುವುದಕ್ಕೆ ರಾಜ್ಯಸರ್ಕಾರಕ್ಕೆ ಅಭಿನಂದಿಸಿದರು.
ಸುದ್ದಿಗೋಷ್ಟಿಯಲ್ಲಿ ಪ್ರಮುಖರಾದ ಷಡಾಕ್ಷರಿ, ರಮೇಶ್ ಶೆಟ್ಟಿ , ಕೆ.ಎಲ್. ಜಗದೀಶ್, ಪಿ.ಒ. ಶಿವಕುಮಾರ್, ದುಗ್ಗಪ್ಪ ಗೌಡ, ವೈ.ಬಿ. ಚಂದ್ರಕಾಂತ್, ದಶರಥ್ ಗಿರಿ, ಜಿ.ಡಿ. ಮಂಜುನಾಥ್, ಮಂಜಪ್ಪ, ಮೋಹನ್, ಎಂ.ಎಸ್. ಸಿದ್ದಪ್ಪ, ಎಂ.ಕೆ. ವಿಜೇಶ್ ಇನ್ನಿತರರಿದ್ದರು.