ಜಿಲ್ಲಾ ಸುದ್ದಿತಾಜಾ ಸುದ್ದಿ

ವೆಂಕಟಪುರದ ತಿರುಮಲ ದೇವಳದಲ್ಲಿ ಸುದರ್ಶನ ಹೋಮ – ಕಲ್ಯಾಣೋತ್ಸವ…

Share Below Link

ಶಿವಮೊಗ್ಗ: ತಾಲ್ಲೂಕಿನ ಬಿ.ಬೀರನಹಳ್ಳಿಯ ವೆಂಕಟಪುರದ ಶ್ರೀತಿರುಮಲ ರಂಗನಾಥಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಹಾಗೂ ತಿರುಕಲ್ಯಾಣೋತ್ಸವ ಮತ್ತು ಮಹಾಸುದರ್ಶನ ಹೋಮವನ್ನು ಮೇ ೨೮ ಮತ್ತು ೨೯ರಂದು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಸಮಿತಿ ಪ್ರಮುಖರಾದ ದೇವು ಕುಮಾರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.


ಮೇ ೨೮ರ ಸಂಜೆ ೫ಕ್ಕೆ ಅನುe ಮಹಾಸಂಕಲ್ಪ ವಿಶ್ವಕ್ಷೇನ ಮಹಾ ಗಣಪತಿ ಆರಾಧನೆ ಹಾಗೂ ಸಂಜೆ ೭ಕ್ಕೆ ವಿಶೇಷವಾಗಿ ಶ್ರೀ ತಿರುಮಲ ರಂಗನಾಥ ಸ್ವಾಮಿಯ ಕಲ್ಯಾಣೋ ತ್ಸವ, ದೀಪಾರಾಧನೆ ಮಂತ್ರಪುಷ್ಪ ನಡೆಯಲಿದೆ ಎಂದರು.
ಮೇ ೨೯ರ ಬೆಳಿಗ್ಗೆ ೬ಕ್ಕೆ ವೇದಪಾರಾಯಣ ಕಲಶಾರಾಧನೆ, ಬೆಳಿಗ್ಗೆ ೮ಕ್ಕೆ ಮೂಲಮೂರ್ತಿಗೆ ಪಂಚಾಮೃತ ಅಭಿಷೇಕ ಅಗ್ನಿ ಪ್ರತಿಷ್ಠೆ ವಿಶ್ವಕ್ಸೇನ ಮಹಾಗಣಪತಿ ಹೋಮ, ನವಗ್ರಹ ಹೋಮ, ದುರ್ಗ ಹೋಮ, ಸರ್ಪಸೂಕ್ತಹೋಮ, ಶ್ರೀರಂಗನಾಥ ಸ್ವಾಮಿ ಮೂಲ ಮಂತ್ರ ಹೋಮ, ವಿಶೇಷವಾಗಿ ಶ್ರೀ ಮಹಾ ಸುದರ್ಶನ ಹೋಮ, ನರಸಿಂಹ ಮೂಲ ಮಂತ್ರ ಹೋಮ, ಮಹಾ ಪೂರ್ಣಾಹುತಿ, ಮಹಾಕುಂಭಾಭಿಷೇಕ ನಡೆಯಲಿದೆ ಎಂದರು.
ಬೆಂಗಳೂರಿನ ಕೆಂಗೇರಿಯ ಶ್ರೀ ರಾಮಾನುಜ ಮಠದ ಆಗಮ ಪ್ರವೀಣ ಶ್ರೀ ಚಿರಂಜೀವಿ ರಾಮಚಂದ್ರ ಭಟ್ಟಚಾರ್ಯರ ಪ್ರಧಾನ ಅರ್ಚಕತ್ವದಲ್ಲಿ ಈ ಕಾರ್‍ಯಕ್ರಮ ನಡೆಯಲಿದೆ ಎಂದರು.
ಶಿವಮೊಗ್ಗದಿಂದ ಕೇವಲ ೧೫ ಕಿ.ಮೀ. ದೂರವಿರುವ ಈ ಕ್ಷೇತ್ರ ಭಕ್ತರ ಸಹಕಾರದಿಂದ ಪ್ರಸಿದ್ಧ ಪ್ರವಾಸಿ ತೀರ್ಥಕ್ಷೇತ್ರವಾಗಿ ರೂಪುಗೊಂಡಿದ್ದು, ಭಕ್ತರು ಈ ಕ್ಷೇತ್ರಕ್ಕೆ ಆಗಮಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.
ಗೋಷ್ಠಿಯಲ್ಲಿ ಬಸವರಾಜ್, ಕೆ. ಆರ್.ಅಜಯ್, ದಿನೇಶ್ ಪಾಟೀಲ್, ಮಂಜಪ್ಪ, ಕೃಷ್ಣಮೂರ್ತಿ ಇದ್ದರು.

This image has an empty alt attribute; its file name is Arya-coll.gif