ಜಿಲ್ಲಾ ಸುದ್ದಿತಾಜಾ ಸುದ್ದಿ

ಎನ್‌ಯು ಆಸ್ಪತ್ರೆಯಲ್ಲಿ ಯಶಸ್ವಿ ಕಿಡ್ನಿ ಟ್ರಾನ್ಸ್‌ಪ್ಲ್ಯಾಂಟ್…

Share Below Link

ಶಿವಮೊಗ್ಗ: ಎನ್‌ಯು ಆಸ್ಪತ್ರೆ ಯ ವೈದ್ಯರು ಮೂವರಿಗೆ ನೂತನ ತಂತ್ರಜನದ ಮೂಲಕ ಕಿಡ್ನಿ ಟ್ರಾನ್ಸ್‌ಪ್ಲ್ಯಾಂಟ್ (ಮೂತ್ರಪಿಂಡ ಕಸಿ)ನ ಯಶಸ್ವೀ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಈ ಕುರಿತು ಸುದ್ದಿಗೋಷ್ಟಿ ಯಲ್ಲಿ ವಿವರಿಸಿದ ಡಾ. ಪ್ರವೀಣ್ ಮಾಳವದೆ ಈ ಮೂರು ವಿಶೇಷ ಪ್ರಕರಣದಲ್ಲಿ ತಾಯಂದಿರೇ ತಮ್ಮ ಮಕ್ಕಳಿಗೆ ಕಿಡ್ನಿಯನ್ನು ದಾನ ಮಾ ಡಿದ್ದಾರೆ.ವಿವಿಧ ಕಾರಣಗಳಿಂದ ಕಿಡ್ನಿ ತೊಂದರೆಗೆ ಒಳಗಾಗಿದ್ದ ಮೂವರಿಗೆ ಯಶಸ್ವೀ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ರೋಗಿ ಮತ್ತು ಕಿಡ್ನಿ ದಾನ ಮಾಡಿದ ತಾಯಂದಿರು ಸಂಪೂರ್ಣವಾಗಿ ಗುಣಮುಖರಾ ಗಿದ್ದಾರೆ ಎಂದರು.
ತಮ್ಮ ೧೬ನೇ ವಯಸ್ಸಿನಲ್ಲಿ ಯೇ ಟೈಪ್ ೧ ಡಯಾಬಿಟಿ ಸ್‌ನಿಂದ ಬಳಲುತ್ತಿದ್ದ ೨೨ ವರ್ಷದ ಯುವಕನಿಗೆ ಕಿಡ್ನಿ ಕಾಯಿಲೆ ಕಾಣಿಸಿ ಕೊಂಡಿತ್ತು. ಇವರಿಗೆ ಅವರ ತಾಯಿ ಯೇ ಕಿಡ್ನಿ ದಾನ ಮಾಡಿದ್ದರು. ಈಗ ಯಶಸ್ವೀ ಶಸ್ತ್ರ ಚಿಕಿತ್ಸೆ ನಡೆಸಿದ್ದು ಯುವಕನ ಬದುಕಿಗೆ ಹೊಸ ಭರವಸೆ ಮೂಡಿಸಲಾಗಿದೆ. ಹಾಗೆ ಯೇ ಇನ್ನೊಂದು ಪ್ರಕರಣದಲ್ಲಿ ಹುಟ್ಟಿನಿಂದಲೇ ಒಂದೇ ಕಿಡ್ನಿ ಹೊಂ ದಿದ್ದ ಬಾಲಕನಿಗೆ ೧೧ ವರ್ಷವಿ ದ್ದಾಗ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಆದರೆ ಆ ರೋಗಿಯ ಕಿಡ್ನಿ ಆರೊ ಗ್ಯ ಹದಗೆಟ್ಟಿದ್ದರಿಂದ ಅನಿವಾ ರ್ಯವಾಗಿ ಕಿಡ್ನಿ ಕಸಿ ಮಾಡಬೇ ಕಾಯಿತು. ಈ ಪ್ರಕರಣದಲ್ಲಿ ಕೂಡ ಅವರ ತಾಯಿಯೇ ಕಿಡ್ನಿ ನೀಡಲು ಮುಂದಾಗಿದ್ದರು.
ಇದೀಗ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ತಾಯಿ ಮತ್ತು ಮಗ ಇಬ್ಬರೂ ತೃಪ್ತಿದಾ ಯಕ ಜೀವನ ನಡೆಸುತ್ತಿದ್ದಾರೆ ಎಂದರು.
ಡಾ. ಪ್ರದೀಪ್ ಎಂ.ಜಿ. ಮಾತ ನಾಡಿ, ಮತ್ತೊಂದು ಪ್ರಕರಣವು ತುಂಬಾ ಅಪರೂಪದ ಪ್ರಕರಣವಾ ಗಿತ್ತು. ಈ ಪ್ರಕರಣದಲ್ಲಿ ಮೂರು ರಕ್ತನಾಳಗಳುಳ್ಳ ಕಿಡ್ನಿ ಹೊಂದಿ ದ್ದರಿಂದ ಕಿಡ್ನಿ ಟ್ರಾನ್ಸ್‌ಪ್ಲ್ಯಾಂಟ್ ಶಸ್ತ್ರಚಿಕಿತ್ಸೆ ಸವಾಲಿನದ್ದಾಗಿತ್ತು. ಆದರೆ ಆಧುನಿಕ ತಂತ್ರಜನ ಉಪಯೋಗಿಸಿ ನಮ್ಮ ಆಸ್ಪತ್ರೆ ಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಕೂಡ ಅವರ ತಾಯಿಯೇ ಕಿಡ್ನಿ ದಾನ ಮಾಡಿದ್ದರು ಎಂದರು.
ಹೀಗೆ ಮೇಲ್ಕಂಡ ಮೂರೂ ಪ್ರಕರಣಗಳು ವೈದ್ಯಕೀಯ ಕ್ಷೇತ್ರ ದಲ್ಲಿ ಒಂದು ರೀತಿಯ ಸವಾಲಾ ಗಿತ್ತು. ಆದರೆ ಎನ್‌ಯು ಆಸ್ಪತ್ರೆ ಯ ಉನ್ನತ ಶ್ರೇಣಿಯ ವೈದ್ಯ ಕೀಯ ಆರೈಕೆ, ಸುಧಾರಿತ ಚಿಕಿತ್ಸಾ ಕ್ರಮ, ತಜ್ಞವೈದ್ಯರ ತಂಡ, ಅತ್ಯಾ ಧುನಿಕ ಸೌಲಭ್ಯ ಇರುವುದರಿಂದ ಇಂತಹ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿವೆ ಎಂದರು.
ಇಂತಹ ಶಸ್ತ್ರಚಿಕಿತ್ಸೆಗಳಿಗೆ ತಗಲುವ ವೆಚ್ಚ ಹೆಚ್ಚಾಗಿರುತ್ತದೆ. ಆದರೆ ಸರ್ಕಾರದ ಕೆಲವು ಯೋಜನೆಗಳು ಮತ್ತು ಕಿಡ್ನಿ ದಾನ ಮಾಡುವವರ ಸಹಾಯದಿಂದ ಕೆಲವು ಚಾರಿಟೆಬಲ್ ಟ್ರಸ್ಟ್‌ಗಳ ನೆರವಿನಿಂದ ಖರ್ಚನ್ನು ಕಡಿಮೆ ಮಾಡಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡದ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿರುವುದು ವಿಪರ್ಯಾಸವಾಗಿದೆ. ಬಹಳಷ್ಟು ಸಂಖ್ಯೆಗಳು ಮಧುಮೇಹ ದಿಂದಲೇ ಉಂಟಾಗುತ್ತದೆ.
ಉತ್ತಮ ಜೀವನ ಶೈಲಿಯಿಂದ ಇದ್ನು ತಡಯಬಹುದಾಗಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಡಾ. ಕಾರ್ತಿಕ್ ಎಸ್.ಎಲ್, ಆಡಳಿತಾಧಿಕಾರಿ ಮಹಮ್ಮದ್ ರಫಿಕ್ ಇದ್ದರು.