ಜಿಲ್ಲಾ ಸುದ್ದಿತಾಜಾ ಸುದ್ದಿ

ವಿದ್ಯಾರ್ಥಿಗಳು ನಾಡು-ನುಡಿ-ನೆಲ-ಜಲದ ಬಗ್ಗೆ ತಿಳಿದುಕೊಳ್ಳಬೇಕು…

Share Below Link

ಹೊನ್ನಾಳಿ: ಕನ್ನಡ ಭಾಷೆ, ಸಂಸ್ಕತಿ ಮತ್ತು ನೆಲ ಜಲ ರಕ್ಷಣೆಗೆ ಎಲ್ಲರೂ ಶ್ರಮಿಸಬೇಕು ಎಂದು ಪೋದಾರ್ ಲರ್ನ್ ಶಾಲೆಯ ಪ್ರಾಂಶುಪಾಲರಾದ ತಿಪ್ಪೇಸ್ವಾಮಿ ನಾಯಕ್ ಅವರು ಕರೆ ನೀಡಿದರು.
ತಾಲ್ಲೂಕಿನ ಕಮ್ಮಾರಘಟ್ಟೆಯ ಪೋದಾರ್ ಲರ್ನ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್‍ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ದಲ್ಲಿ ಕನ್ನಡ ವಚನಕಾರರಿಂದ ಸ್ವಾತಂತ್ರ್ಯ ಹೋರಾಟಗಾರರ ವರೆ ಗೆ, ಸಾಹಿತ್ಯ ಕ್ಷೇತ್ರದಿಂದ ತಂತ್ರ eನದವರೆಗೆ ಕರ್ನಾಟಕವು ಜಗತ್ತಿನ ಗಮನ ಸೆಳೆದಿದೆ ಎಂದು ಬಣ್ಣಿಸಿದರು.
ಕನ್ನಡದಿಂದ ಸಂಸ್ಕಾರ ನೀಡುವ ಕೆಲಸವಾಗಬೇಕು. ನಾಡಪ್ರೇಮ ನಮಗಿರಬೇಕು. ವಿದ್ಯಾರ್ಥಿದೆಸೆ ಯಿಂದಲೇ ತಮ್ಮ ವಿದ್ಯಾರ್ಜನೆಯ ಜೊತೆ ಜೊತೆಗೆ ನಮ್ಮ ನಾಡು ನುಡಿ ಮತ್ತು ಗಡಿಯ ಬಗ್ಗೆ ತಿಳಿದು ಕೊಳ್ಳ ಬೇಕು. ಈ ಬಗ್ಗೆ ಹೋರಾಟ ಮಾಡಿದ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ತಿಳಿದುಕೊ ಳ್ಳಬೇಕು. ಅವರ ತ್ಯಾಗ ಬಲಿದಾನ ಮತ್ತು ಹೋರಾಟಗಳನ್ನು ಮೈ ಗೂಡಿಸಿಕೊಳ್ಳಬೇಕು ಎಂದು ಕನ್ನಡ ನಾಡು ನುಡಿಗಾಗಿ ಹೋರಾಟ ಮಾಡಿದ ನಾಯಕರುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನ ಮುಟ್ಟು ವಂತೆ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಶಾಲೆ ಯನ್ನು ವಿಶೇಷವಾಗಿ ಅಲಂಕರಿಸ ಲಾಗಿತ್ತು. ವಿದ್ಯಾರ್ಥಿಗಳು eನ ಪೀಠ ಪ್ರಶಸ್ತಿ ಪಡೆದವರ ವೇಷ- ಭೂಷಣ ಧರಿಸಿ ಅವರ ಭಾವ ಚಿತ್ರಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳು ಸಾಂಸ್ಕತಿಕ ಕಾರ್ಯ ಕ್ರಮಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಾಲೆಯ ಮಾರ್ಕೇಟಿಂಗ್ ಮ್ಯಾನೇಜರ್ ಕೀರ್ತಿ, ಅಡ್ಮಿನ್ ಮಾನೇಜರ್ ಯಶ್ವಂತ್, ಶಿಕ್ಷಕಿಯರಾದ ರಶ್ಮಿ, ಜ್ಯೋತಿ, ನೇತ್ರಾವತಿ, ನೇತ್ರಾ, ಪೂಜ, ಸುಹಾನಾ ಜಂಬಿ, ಶಾಂತಾ ದೇವಿ ಹಿರೇಮಠ್, ಶಿಕ್ಷಕರಾದ ಅಭಿಷೇಕ್, ಧನಂಜಯ್, ಮಾರುತಿ, ರಾಜೇಶ್, ಹಾಸಿಮ್ ಖಾನ್ ಮತ್ತಿತರರಿದ್ದರು.