ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ವ್ಯವಹಾರದ ಜ್ಞಾನ ಅಗತ್ಯ: ಪ್ರೊ. ರಾಜೇಶ್ವರಿ
ಶಿವಮೊಗ್ಗ : ವಿದ್ಯಾರ್ಥಿಗಳು ಬ್ಯಾಂಕಿಂಗ್ ವ್ಯವಹಾರದ ಲೋಕeನ ಪಡೆದು ಕೊಳ್ಳಬೇಕು ಎಂದು ಸಹ್ಯಾದ್ರಿ ವಿeನ ಕಾಲೇಜಿನ ಪ್ರಾಂಶುಪಾಲೆ ಪ್ರೊ. ರಾಜೇಶ್ವರಿ ಹೇಳಿದರು.
ಅವರು ಇಂದು ಸಹ್ಯಾದ್ರಿ ವಿeನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ೧ ಮತ್ತು ೨ ಹಾಗೂ ಮೇರ ಯುವ ಭಾರತ, ಶಿವಮೊಗ್ಗ ಮತ್ತು ಇನ್ನೋವೇಟರ್ ಯೂತ್ ಕ್ಲಬ್ ಶಿವಮೊಗ್ಗ ಇವರ ಆಶ್ರಯದಲ್ಲಿ ಫ್ಲ್ಯಾಗ್ ಶಿಪ್ ಸ್ಕೀಂ ಕಾರ್ಯಾಗಾರ ಕುರಿತ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಅಗತ್ಯ ವಿರುವ ಸ್ಕಾಲರ್ಶಿಪ್ ಹಾಗೂ ದೈನಂದಿನ ಚಟುವಟಿಕೆಗಳಿಗೆ ಸಂಬಂಧಿಸಿದ ಬ್ಯಾಂಕಿಂಗ್ ವ್ಯವಹಾರ ಲೋಕeನವನ್ನು ಪಡೆದುಕೊಳ್ಳಲು ಸರ್ಕಾರದ ಯೋಜನೆಗಳ ಹತ್ತಾರು ರೀತಿ ಯಲ್ಲಿವೆ ಈ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ಮುಖ್ಯವಾಗುತ್ತವೆ ಎಂದರು.
ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಕೆನರಾ ಬ್ಯಾಂಕಿನ ಜಿ ಮಾರ್ಗದರ್ಶಿ ಜಿ ವ್ಯವಸ್ಥಾಪಕ ಹನುಮಂತಪ್ಪ ಮಾತನಾಡಿ, ಬ್ಯಾಂಕಿನಲ್ಲಿರುವ ಪಿಎಂ ವಿಶ್ವಕರ್ಮ ಯೋಜನೆ ಯಲ್ಲಿ ಕುಶಲಕರ್ಮಿ ಗಳಿಗೆ ನೆರವು ನೀಡಲಾಗುವುದು. ೨೦೨೩ ರಲ್ಲಿ ಜರಿಗೆ ಬಂದ ಈ ಸ್ಕೀಮ್ನಲ್ಲಿ ಚರ್ಮ ಕೆಲಸದ ವರು, ಮಗ್ಗ ನೆಯುವವರು ಇದರಲ್ಲಿ ಪ್ರಯೋಜನ ಪಡೆಯುತ್ತಾರೆ ಎಂದರು.
ಅಮೂಲ್ಯ ಸಾಕ್ಷರತಾ ಕೇಂದ್ರದ ಹಣಕಾಸು ಆರ್ಥಿಕ ಸಲಹೆಗಾರ ಬಿ.ಆರ್. ಶಂಕರಪ್ಪ ಅವರು ಪ್ರಧಾನ ಮಂತ್ರಿ ಜನ್ ಧನ್, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಸುರಕ್ಷಾ, ಅಟಲ್ ಪೆನ್ಶನ್ ಕುರಿತು ಮಾಹಿತಿ ನೀಡಿದರು.
ಸಹ್ಯಾದ್ರಿ ವಿeನ ಕಾಲೆಜಿನ ಪರಿಸರ ವಿಭಾಗದ ಮುಖ್ಯಸ್ಥ ಡಾ ಪರಿಸರ ನಾಗರಾಜ್ ಅವರು ಪರಿಸರದ ಕಾಳಜಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯ. ಈ ಕಾರ್ಯಾಗಾರವು ಬಹು ಆಯಾಮಗಳಲ್ಲಿ ಮೂಡಿಬಂದಿದೆ ಎಂದರು.
ಶಿವಮೊಗ್ಗದ ಕೌಶಲ್ಯಾಭಿವೃದ್ದಿ ವಿಭಾಗದ ಜಿ ವ್ಯವಸ್ಥಾಪಕರಾದ ಸಮನ್ವಯ ಕಾಶಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ನೆಹರು ಯುವ ಕೇಂದ್ರದ ಸಹಾಯಕ ಅಧಿಕಾರಿ ರಮೇಶ್, ಸ್ವಯಂಸೇವಕ ಶೇಖ್ ಹಸೇನ್, ಹೇಮಂತ್ ಸ್ವಯಂಸೇವಕರಾ ಗಿದ್ದರು ಈ ಕಾರ್ಯಕ್ರಮದ ಸಂಚಾಲಕ ಪ್ರೊ. ನಾಗಾರ್ಜುನ ಇದ್ದರು. ೮೦ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಪ್ರಮಾಣ ಪತ್ರವನ್ನು ಪಡೆದರು. ಸೋನು, ಶಾಂಭವಿ, ಧನ್ಯ ವೈಷ್ಣವಿ ಕಾರ್ಯಕ್ರಮವನ್ನು ನಿರ್ವಹಿಸಿ ನಿರೂಪಿಸಿದರು.

