ಬೊಗಳೆ ಬಿಡುವುದನ್ನು ನಿಲ್ಲಿಸಿ; ಅಭಿವೃದ್ಧಿ ಕುರಿತ ಶ್ವೇತಪತ್ರ ಹೊರಡಿಸಿ…
ಶಿವಮೊಗ್ಗ : ಬೊಗಳೆಬಿಡಿ ಅಭಿವೃದ್ಧಿ ಕುರಿತಂತೆ ಶ್ವೇತಪತ್ರ ಹೊರಡಿಸಿ ಎಂದು ಸಚಿವ ಮಧು ಬಂಗಾರಪ್ಪ ಅವರಿಗೆ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಸವಾಲು ಹಾಕಿzರೆ.
ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಶಿಕ್ಷಣ ಸಚಿವರಿಗೆ ತಾವೇ ಏನು ಮಾತನಾಡುತ್ತಿzವೆ ಎಂಬುದೇ ಅರಿವಿಲ್ಲ. ಅವರು ಕನ್ನಡದ ಶಬ್ಧಕೋಶವನ್ನೇ ಅರಿತಿಲ್ಲ. ಸಂಸ್ಕತಿಯೂ ಗೊತ್ತಿಲ್ಲ. ಲೂಸು, ಅಪ್ಪನ ಮನೆಯಿಂದ ತರುತ್ತಾನಾ… ಎಂದೆ ಕೀಳು ಮಟ್ಟದ ಭಾಷೆ ಯನ್ನು ಬಳಸುತ್ತಾರೆ. ಒಬ್ಬ ಶಿಕ್ಷಣ ಸಚಿವರಾಗಿ ಹೇಗೆ ಮಾತನಾಡ ಬೇಕೆಂಬ ಅರಿವೇ ಇವರಿಗಿಲ್ಲ. ಇಂತಹ ಶಿಕ್ಷಣ ಸಚಿವರಿಂದ ಮಕ್ಕಳು ಏನು ಕಲಿಯುತ್ತಾರೋ ಎಂದು ಛೇಡಿಸಿದರು.
ವಿರೋಧ ಪಕ್ಷಗಳು ಆರೋಪ ಮಾಡುವುದು ಸಹಜ. ಆ ಆರೋಪ ಗಳಿಗೆ ತಕ್ಕ ಉತ್ತರ ಕೊಡ ಬೇಕು. ಒಬ್ಬ ಜಿ ಉಸ್ತುವಾರಿ ಸಚಿವರಾಗಿ ಇವರೇನು ಜಿಯ ಅಭಿವೃದ್ಧಿ ಮಾಡಿzರೆ? ಸಂಸದ ರಾಘವೇಂದ್ರ ಅವರು ಅಭಿವೃದ್ದಿ ಮಾಡಿದ್ದು ಬೇಕಾದಷ್ಟು ಇದೆ. ಶಿವಮೊಗ್ಗ ಅಭಿವೃದ್ಧಿಯ ಬಗ್ಗೆ ಬೇಕಾದರೆ ನಮ್ಮೊಂದಿಗೆ ಚರ್ಚೆಗೆ ಬರಲಿ. ಯಾರ ಕಾಲದಲ್ಲಿ ಹೆಚ್ಚು ಅಭಿವೃದ್ಧಿಯಾಗಿದೆ ಎಂಬುದನ್ನು ನಾವು ಅವರಿಗೆ ಹೇಳುತ್ತೇವೆ. ಇವರು ಸಚಿವರಾದ ಮೇಲೆ ಜಿಯಲ್ಲಿ ಒಂದು ರಸ್ತೆಯೂ ಆಗಿಲ್ಲ. ಬೇಕಾದರೆ ಏನು ಅಭಿವೃದ್ಧಿ ಯಾಗಿದೆ ಎಂದು ಶ್ವೇತಪತ್ರ ಹೊರಡಿಸಲಿ ಎಂದರು.

ಸಿಎಂ ಸಿದ್ಧರಾಮಯ್ಯ, ಸಚಿವರಾದ ಪ್ರಿಯಾಂಕಖರ್ಗೆ, ಸಂತೋಷ್ ಲಾಡ್, ಮಧು ಬಂಗಾರಪ್ಪ ಇವರಿಗೆ ಆರ್ಎಸ್ ಎಸ್ ಬಗ್ಗೆ, ಪ್ರಧಾನಿ ಮೋದಿಯ ಬಗ್ಗೆ ಮಾತನಾಡುವುದು ಮಾತ್ರ ಗೊತ್ತು. ಅದರಲ್ಲೂ ಏಕವಚನದ ಮಾತುಗಳು. ಕೇಂದ್ರಕ್ಕೆ ಬೈಯ್ದರೆ ಇವರಿಗೆ ಹೇಗೆ ಅನುದಾನ ಸಿಕ್ಕುತ್ತದೆ. ಪ್ರಾಮಾಣಿಕವಾಗಿ ಕೇಳಿದರೆ ಕೇಂದ್ರ ಸರ್ಕಾರ ಹಣ ಕೊಟ್ಟೇ ಕೊಡುತ್ತದೆ. ಆದರೆ ಅದನ್ನು ಬಿಟ್ಟು ಹೀಯಾಳಿ ಸುವುದು, ಗೇಲಿಮಾಡುವುದು, ಪ್ರಧಾನಿ ಹಾಗೂ ಗೃಹಮಂತ್ರಿ ಎಂಬ ಅರಿವಿಲ್ಲದೆ ಮಾತನಾಡುವುದು ಮಾಡಿದರೆ ಕೇಂದ್ರ ಸರ್ಕಾರಕ್ಕೆ ರಾಜ್ಯಕ್ಕೆ ಹಣಕೊಡಲು ಮನಸ್ಸಾ ದರೂ ಹೇಗೆ ಬಂದೀತು ? ಅದಕ್ಕಾಗಿ ಯೇ ಹೇಳುವುದು ಡಬಲ್ ಇಂಜಿನ್ ಸರ್ಕಾರ ಬೇಕು ಎಂದು ಎಂದರು.
ಜಿಎಸ್ಟಿ ಬಗ್ಗೆ ಇವರು ಮಾತನಾಡುತ್ತಾರೆ. ಇವರಿಗೆ ಜಿಎಸ್ಟಿ ಕಡಿಮೆಯಾಗಿದ್ದು, ಅರಿವಿಗೆ ಬಂದಿರಲಿಕ್ಕಿಲ್ಲ. ಅದರಲ್ಲು ಮಧುಬಂಗಾರಪ್ಪ ಅವರಿಗೆ ಜಿಎಸ್ಟಿ ಬಗ್ಗೆ ಗೊತ್ತೇ ಇಲ್ಲ, ಒಬ್ಬ ಬಿ.ಕಾಂ. ವಿದ್ಯಾರ್ಥಿಯ ಜೊತೆ ಮಾತನಾಡಿ ತಿಳಿದುಕೊಳ್ಳಲಿ ಎಂದು ವ್ಯಂಗ್ಯವಾಡಿದ ಅವರು, ಜಿಎಸ್ಟಿ, ಫುಡ್ ಸೆಕ್ಯುರಿಟಿ ಆಕ್ಟ್, ಆಧಾರ್ ಕಾರ್ಡ್ ಇವೆಲ್ಲವೂ ಕಾಂಗ್ರೆಸ್ನವೇ ಅವರೇ ಇವುಗಳನ್ನು ಜರಿಗೆ ತರಲು ಹೇಳಿದ್ದು. ಆದರೆ ಅವರು ಮಾಡ ಲಿಲ್ಲ. ಅವರ ಕೈಯಲ್ಲಿ ಆಗದಿದ್ದದ್ದನ್ನು ನಾವು ಮಾಡಿ ತೋರಿಸಿzವೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ ಕುರಿತಂತೆ ನೇರವಾಗಿ ಸಂಸದರಾದ ಆಯ್ಕೆಯಾಗಿzರೆ ಎಂಬ ಟೀಕೆ ಯನ್ನು ಮಧುಬಂಗಾರಪ್ಪ ಮಾಡುತ್ತಾರೆ. ಆದರೆ ಅವರಿಗೆ ನೆನಪಿರಲಿ ರಾಘವೇಂದ್ರ ಅವರು ಒಬ್ಬ ಪುರಸಭೆಯ ಮೆಂಬರ್ ಆಗಿ ಈ ಮಟ್ಟಕ್ಕೆ ಬಂದಿzರೆ. ಬಿಜೆಪಿಯ ಮತ್ತೊಬ್ಬ ಮುಖಂಡ ಕೋಟಾ ಶ್ರೀನಿವಾಸ ಪೂಜರಿಯವರು ಗ್ರಾ.ಪಂ.ಯಿಂದ ಬಂದವರು. ಪ್ರಜಪ್ರಭುತ್ವದಲ್ಲಿ ಇದಕ್ಕೆ ಅವಕಾಶ ವಿದೆ ಎಂಬ ಸರಳ ಸತ್ಯವೂ ಮಧು ಬಂಗಾರಪ್ಪನವರಿಗೆ ಗೊತ್ತಿಲ್ಲ ಎಂದರು.
ಚುನಾವಣೆಯ ಸಂದರ್ಭದಲ್ಲಿ ಪೊಲೀಸ್ ಜೀಪಿನಲ್ಲಿ ಆಂಬುಲೆನ್ಸ್ ನಲ್ಲಿ ಹಣ ಸಾಗಿಸಿzರೆ ಎಂದು ಆ ರೋಪ ಮಾಡುವ ಮುನ್ನ ಇವರು ಸರಿಯಾಗಿ ತಿಳಿದುಕೊಳ್ಳಲಿ. ಅವರು ಗೆzಗ ಇವರದೇ ಆಡಳಿತ ಇತ್ತಲ್ಲ ವೇ ? ಆಗ ಏಕೆ ಸುಮ್ಮನಿ ದ್ದರು. ಈಗ ಬಾಯಿಗೆ ಬಂದಂತೆ ಮಾತ ನಾಡುತ್ತಾರೆ. ಇಂತಹ ಮಾತುಗಳ ನ್ನೆ ಬಿಡಬೇಕು. ಎಲ್ಲರೂ ಒಟ್ಟಾಗಿ ಅಭಿವೃದ್ಧಿಯತ್ತ ಸಾಗಬೇಕು ಎಂದ ರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ವಿ. ಅಣ್ಣಪ್ಪ, ಚಂದ್ರಶೇಖರ್, ಮಾಲತೇಶ್, ಪ್ರಶಾಂತ್ ಪಂಡಿತ್ ಇದ್ದರು.
