ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಸಚಿವೆ ಶೋಭಾ ಕರಂದ್ಲಾಜೆಗೆ ರಾಜ್ಯಾಧ್ಯಕ್ಷ ಸ್ಥಾನ – ಸಂಸದ ಬಿವೈಆರ್‌ಗೆ ಮಂತ್ರಿಗಿರಿ ಸಾಧ್ಯತೆ…?!

Share Below Link

ನವದೆಹಲಿ: ಲೋಕಸಭೆ ಚುನಾವಣೆಗೂ ಮುನ್ನ ನರೇಂದ್ರ ಮೋದಿ ಸಂಪುಟದಲ್ಲಿ ಕೆಲ ಬದ ಲಾವಣೆಯ ಲೆಕ್ಕಾಚಾರ ಶುರುವಾ ಗಿದೆ. ಸಂಪುಟ ಪುನಾರಚನೆಗೆ ಸಿದ್ದತೆಗಳು ಗರಿಗೆದರಿವೆ. ನಿನ್ನೆ ಪ್ರಧಾನಿ ಮೋದಿ ಯವರ ನೇತೃತ್ವ ದಲ್ಲಿ ನಡೆದಿದ್ದ ಮಹತ್ವದ ಮಂತ್ರಿ ಪರಿಷತ್ ಸಭೆಯಲ್ಲಿ ಲೋಕಸಭಾ ಚುನಾವಣೆಗೆ ಹೇಗೆ ತಯಾರಿ ಇರ ಬೇಕು ಎಂಬ ಬಗ್ಗೆ ಸಲಹೆ ನೀಡಿ ದ್ದಾರೆ.
ಸಂಸತ್ ಅಧಿವೇಶನಕ್ಕೂ ಮುನ್ನ ಸಂಪುಟ ಪುನರ್‌ರಚನೆ ಯಾಗುವ ಸಾಧ್ಯತೆ ಇದ್ದು, ಮುಂ ಬರುವ ರಾಜ್ಯಗಳ ವಿಧಾನಸಭೆ ಚುನಾವಣೆಗಳತ್ತ ಗಮನಹರಿಸಿ ಮೋದಿ ಸಂಪುಟ ಪುನಾರಚನೆ ಮಾಡಲಿದ್ದಾರೆ ಎನ್ನಲಾಗಿದೆ.
ಈ ವರ್ಷಾಂತ್ಯದ ವೇಳೆ ರಾಜ ಸ್ಥಾನ, ಛತ್ತೀಸ್‌ಗಢ, ಮಧ್ಯ ಪ್ರದೇಶ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ಚುನಾವಣೆ ನಡೆಯಲಿದ್ದು ಪುನರ್‌ರಚನೆ ವೇಳೆ ಈ ರಾಜ್ಯಗಳಿಗೆ ಮಹತ್ವ ನೀಡ ಲಿದ್ದಾರೆ. ಅಷ್ಟೇ ಅಲ್ಲದೆ ಲೋಕ ಸಭಾ ಚುನಾವಣೆ ಹಿನ್ನಲೆಯಲ್ಲಿ ಹಳೆ ದೋಸ್ತಿಗಳ ಮನವೊಲಿಸಲು ಬಿಜೆಪಿ ತಂತ್ರ ಮಾಡುತ್ತಿದೆ. ಬಿಜೆಪಿ ತನ್ನ ಮಿತ್ರ ಬಳಗ ವನ್ನು ಹೆಚ್ಚಿಸಲು ಮಿತ್ರಪಕ್ಷಗಳಿಗೂ ಮಂತ್ರಿ ಸ್ಥಾನ ನೀಡಲುವ ಸಾಧ್ಯತೆ ಇದೆ. ಎನ್ ಸಿಪಿ ಬಂಡಾಯಗಾರಿಗೂ ಕೇಂದ್ರ ದಲ್ಲಿ ಮಂತ್ರಿ ಸ್ಥಾನ ಸಿಲಿದ್ದು ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್‌ಗೆ ಕೇಂದ್ರ ಮಂತ್ರಿ ಪಟ್ಟ ಸಿಗುವ ಸಾಧ್ಯತೆ ದಟ್ಟವಾಗಿದೆ.
ಇನ್ನು ಅಜಿತ್ ಪವಾರ್ ಡಿಸಿಎಂ ಆದ ಹಿನ್ನೆಲೆ ದೇವೇಂದ್ರ ಫಡ್ನವಿಸ್‌ಗೆ ಕೇಂದ್ರ ಮಂತ್ರಿ ಸ್ಥಾನ ನೀಡಿ ರಾಷ್ಟ್ರರಾಜಕಾರಣಕ್ಕೆ ಕರೆತ ರುವ ಚಿಂತನೆಗಳು ನಡೆದಿವೆ. ಪ್ರಸ್ತುತ ಮೋದಿ ಸಂಪುಟದಲ್ಲಿ ಮಹಾರಾಷ್ಟ್ರದ ಎಂಟು ಮಂದಿ ಸಚಿವರಿದ್ದಾರೆ. ನಿತಿನ್ ಗಡ್ಕರಿ, ಪಿಯೂಷ್ ಗೋಯಲ್, ನಾರಾ ಯಣ ರಾಣೆ ಮತ್ತು ರಾಮದಾಸ್ ಅಠಾವಳೆ ಮಂತ್ರಿಗಳಾಗಿ ದ್ದಾರೆ. ಮಹಾರಾಷ್ಟ್ರದ ಶಿಂಧೆ ಬಣ ಮೂವರನ್ನು ಸಚಿವರನ್ನು ಸಂಪು ಟಕ್ಕೆ ಸೇರಿಸಿಕೊಳ್ಳಲು ಮುಂದಾ ಗಿದ್ದು, ಅವರನ್ನು ಸೇರಿಸಿಕೊಳ್ಳಲು ಬಿಜೆಪಿ ತನ್ನ ಕೋಟಾದಿಂದ ಕೆಲವು ಸಚಿವರನ್ನು ಕೈಬಿಡಲಿದೆ ಎಂದು ತಿಳಿದುಬಂದಿದೆ.
ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆ ಮುಗಿರುವುದರಿಂದ ಸಂಪುಟ ಪುನರ್‌ರಚನೆ ವೇಳೆ ಗುಜ ರಾತ್ ಕೋಟಾದ ಮಂತ್ರಿಗಳನ್ನು ತೆಗೆದುಹಾಕುವ ಸಾಧ್ಯತೆ ಇದೆ. ಪ್ರಸ್ತುತ ಸಂಪುಟದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ಮನ್ಸುಖ್ ಮಾಂಡವಿಯಾ, ಪುರುಷೋತ್ತಮ ರೂಪಾಲ, ದರ್ಶನ ಜರ್ದೋಶ್, ದೇವುಸಿಂಗ್ ಚೌಹಾಣ್ ಮತ್ತು ಮಹೇಂದ್ರ ಮುಂಜ್ಪಾರಾ ಸಚಿವ ರಾಗಿದ್ದಾರೆ. ಮನ್ಸುಖ್ ಮಾಂಡ ವಿಯಾ, ಪರುಷೋತ್ತಮ ರೂಪಲಾ ಮತ್ತು ದರ್ಶನಾ ಜರ್ದೋಶ್ ಅವರಿಗೆ ಕೋಕ್ ನೀಡುವ ಸಾಧ್ಯತೆ ಇದೆ.
ಇನ್ನು ಧರ್ಮೇಂದ್ರ ಪ್ರಧಾನ್ ಅವರನ್ನು ಸಂಪುಟದಿಂದ ಬಿಡುಗಡೆ ಮಾಡಿ. ಉತ್ತರಪ್ರದೇಶ ಬಿಜೆಪಿಯ ಉಸ್ತುವಾರಿ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಮೋದಿ ಸಂಪುಟ ಪುನರ್‌ರಚನೆಯಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶ ಸಚಿವರನ್ನು ಕೈಬಿಡುವ ಸಾಧ್ಯತೆ ಹೆಚ್ಚಿದೆ. ಈ ಎರಡು ರಾಜ್ಯ ಗಳಿಂದ ೨೦ ಸಚಿವರಿದ್ದಾರೆ. ಬಿಹಾರ ದಿಂದ ಅಶ್ವಿನಿ ಚೌಬೆ, ಪಶುಪತಿ ಪಾರಸ್ ಮತ್ತು ಆರ್. ಕೆ.ಸಿಂಗ್ ಅವರನ್ನು ಸಂಪುಟದಿಂದ ಕೈಬಿಡುವ ಚರ್ಚೆ ನಡೆದಿದೆ. ಉತ್ತರ ಪ್ರದೇಶದ ಮಹೇಂದ್ರ ನಾಥ್ ಪಾಂಡೆ, ಅಜಯ್ ಮಿಶ್ರಾ ಟೆನಿ ಅವರ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ ಇದೆ. ಪಾಂಡೆ ಮತ್ತು ಅಜಯ್ ಮಿಶ್ರಾ ಅವರನ್ನು ತೆಗೆದು ಹಾಕಿದರೆ, ಬ್ರಾಹ್ಮಣರನ್ನು ಸಮಾಧಾನ ಪಡಿಸಲು ಲಕ್ಷ್ಮೀ ಕಾಂತ್ ವಾಜಪೇಯಿ ಅಥವಾ ಹರಿ ಶ್ ದ್ವಿವೇದಿ ಸಂಪುಟ ದಲ್ಲಿ ಸ್ಥಾನ ಪಡೆಯಬಹುದು ಎನ್ನಲಾಗಿದೆ.
ಕರ್ನಾಟಕದವರು
ಯಾರು ಔಟ್? ಯಾರು ಇನ್?
ಕರ್ನಾಟಕದಿಂದ ೬ ಸಚಿವರು ಮೋದಿ ಸಂಪುಟದಲ್ಲಿದ್ದಾರೆ. ಹಣ ಕಾಸು ಸಚಿವೆ ನಿರ್ಮಲಾ ಸೀತಾ ರಾಮನ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ರಾಜೀವ್ ಚಂದ್ರಶೇಖರ್ ಕ್ಯಾಬಿನೆಟ್ ಸಚಿವರಾಗಿದ್ದಾರೆ. ಇನ್ನು ಕೇಂದ್ರ ಸಚಿವೆ ಸಚಿವೆ ಶೋಭಾ ಕರಂದ್ಲಾಜೆ ಕರ್ನಾಟಕ ಬಿಜೆಪಿ ರಾಜಧ್ಯಕ್ಷರಾಗುವ ಚರ್ಚೆ ನಡೆಯುತ್ತಿದೆ. ಇವರ ಬದಲಿಗೆ ಸಂಸದ ಬಿ.ವೈ ರಾಘವೇಂದ್ರ ಕೇಂದ್ರ ಮಂತ್ರಿಯಾಗುವ ಸಾಧ್ಯತೆ ಇದೆ. ಇನ್ನು ಕೇಂದ್ರ ಸಚಿವ ನಾರಾ ಯಣ ಸ್ವಾಮಿ ಯವರನ್ನು ಬದಲಾ ಯಿಸಿ ಬಂಜಾರ ಸಮುದಾಯದ ಉಮೇಶ್ ಜಾಧವ್‌ಗೆ ಸಂಪುಟ ದಲ್ಲಿ ಅವಕಾಶ ನೀಡುವ ಬಗ್ಗೆ ಚಿಂತನೆಗಳು ನಡೆದಿವೆ.
ತೆಲಂಗಾಣದಿಂದ ಒಬ್ಬರು ಮತ್ತು ತಮಿಳುನಾಡಿನಿಂದ ಇಬ್ಬರು ಸಚಿವ ರಾಗುವ ಸಾಧ್ಯತೆ ಇದೆ. ತಮಿಳುನಾಡಿ ನಲ್ಲಿ ಮಿತ್ರ ಪಕ್ಷ ಎಐಎಡಿಎಂಕೆಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ನಿಯಮದ ಪ್ರಕಾರ ಕೇಂದ್ರ ಸರ್ಕಾರ ದಲ್ಲಿ ಪ್ರಧಾನಿ ಸೇರಿದಂತೆ ಒಟ್ಟು ೮೧ ಮಂದಿ ಸಚಿವರಾಗಬಹುದು. ಸದ್ಯ ೭೮ ಸಚಿವರು ಸಂಪುಟಕ್ಕೆ ಸೇರ್ಪಡೆ ಗೊಂಡಿದ್ದು, ೩ ಸ್ಥಾನಗಳು ಮಾತ್ರ ಖಾಲಿ ಇವೆ. ಕಳೆದ ಬಾರಿ ಸಂಪುಟ ವಿಸ್ತರಣೆ ವೇಳೆ ೧೨ ಸಚಿವರು ರಾಜೀನಾಮೆ ನೀಡಿದ್ದರು.
ಬಿಜೆಪಿಯೇತರ ನಾಯಕರಾದ ಎನ್‌ಸಿಪಿ ಬಂಡಾಯ ನಾಯಕ ಪ್ರಫುಲ್ ಪಟೇಲ್, ಲೋಕ ಜನಶಕ್ತಿ ಪಕ್ಷದ ರಾಮ್ ವಿಲಾಸ್ ಬಣದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಹೆಸರುಗಳು ಕ್ಯಾಬಿನೆಟ್‌ಗೆ ಸೇರ್ಪ ಡೆ ಯಾಗುವ ಸಾಧ್ಯತೆ ಇದೆ. ಲೋ ಕಸಭಾ ಚುನಾವಣೆ ಎದುರಿಸಲು ಮೋದಿ ಜಬರ್ದಸ್ತ್ ಟೀಂ ರೆಡಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ತೆಲಂಗಾಣದಿಂದ ಸಂಜಯ್ ಬಂಡಿ, ಜನಾರ್ದನ್ ಸಿಂಗ್ ಸಿಗ್ರಿವಾಲ್, ವಿವೇಕ್ ಠಾಕೂರ್, ಸಿ.ಆರ್ ಪಾಟೀಲ್, ರಾಜ್ಯವರ್ಧ ನ್‌ಸಿಂಗ್ ರಾಥೋಡ್, ಕೇರಳದಿ ಂದ ನಟ ಸುರೇಶ್ ಗೋಪಿ ಸಂಪು ಟಕ್ಕೆ ಸೇರ್ಪಡೆಗೊಳ್ಳುವ ನಿರೀಕ್ಷೆ ಯಿದೆ. ೨೦೨೪ರ ಲೋಕಸಭೆ ಚುನಾವಣೆಗೆ ಮುನ್ನ ೧೫ ಕೇಂದ್ರ ಸಚಿವರನ್ನು ಕೈಬಿಟ್ಟು, ಪಕ್ಷದ ಕೆಲಸ ಮಾಡುವಂತೆ ಸೂಚನೆ ಸಿಗುವ ಸಾಧ್ಯತೆ ಇದೆ.