ಜಿಲ್ಲಾ ಸುದ್ದಿತಾಜಾ ಸುದ್ದಿ

ರಾಜ್ಯಮಟ್ಟದ ಶ್ರೀನಾರಾಯಣ ಗುರು ಮಹಿಳಾ ಸಮಾವೇಶ…

Share Below Link

ಶಿವಮೊಗ್ಗ,: ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘದಿಂದ ಶ್ರೀನಾರಾಯಣ ಗುರು ಜಯಂತ್ಯೋತ್ಸವ ನಿಮಿತ್ತ ಪರಿವರ್ತನಶ್ರೀ ಪ್ರಶಸ್ತಿ ಪ್ರದಾನ ಹಾಗೂ ರಾಜ್ಯಮಟ್ಟದ ಶ್ರೀ ನಾರಾಯಣ ಗುರು ಮಹಿಳಾ ಸಮಾವೇಶವನ್ನು ಸೆ.೨೯ರ ಬೆಳಿಗ್ಗೆ ೧೦.೩೦ಕ್ಕೆ ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಲೇಖನ ನಾಯ್ಕಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ರಾಜ್ಯ ಮಟ್ಟದ ಈಡಿಗ, ಬಿಲ್ಲವ, ನಾಮಧಾರಿ, ದೀವರು, ತೀಯಾ ಸಮಾಜದ ೨೫ ಒಳಪಂಗಡಗಳ ಮಹಿಳಾ ಸ್ವಸಹಾಯ ಸಂಘಗಳಿಗೆ ಬಡ್ಡಿ ರಹಿತ ಸಾಲ ನೀಡಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಮಾವೇಶದಲ್ಲಿ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.
ಸಮಾರಂಭದ ಸಾನಿಧ್ಯವನ್ನು ಆರ್‍ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಗೌರಿಗದ್ದೆಯ ಅವಧೂತ ಆಶ್ರಮದ ಶ್ರೀ ವಿಜಯ ಗುರೂಜಿ, ಶ್ರೀಕ್ಷೇತ್ರ ಸಿಗಂಧೂರಿನ ಧರ್ಮಾಧಿಕಾರಿ ಶ್ರೀ ಡಾ.ರಾಮಪ್ಪ ವಹಿಸಲಿದ್ದು, ಶಾಸಕ ವಿ. ಸುನಿಲ್‌ಕುಮಾರ್ ಉದ್ಘಾಟಿಸುವರು. ಹಲವು ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಅಧ್ಯಕ್ಷತೆಯನ್ನು ಸಂಘದ ರಾಜಧ್ಯಕ್ಷ ಸೈದಪ್ಪ ಕೆ. ಗುತ್ತೇದಾರ್ ವಹಿಸಲಿದ್ದಾರೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಎಸ್.ಡಿ.ನಾಯ್ಕ ಮಾತನಾಡಿ, ಸಮಾವೇಶಕ್ಕೆ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ರೇಣುಕಾ, ಜಯಲಕ್ಷ್ಮಿ, ಪ್ರತಿಮಾ, ಸವಿತಾ, ವಿಶ್ವನಾಥ್, ಲೋಕೇಶ್, ಬಸವರಾಜ್ ಇನ್ನಿತರರು ಉಪಸ್ಥಿತರಿದ್ದರು.