ರಾಜ್ಯಮಟ್ಟದ ಬಾಕ್ಸಿಂಗ್ ಪಂದ್ಯಾವಳಿ; ಶಿವಮೊಗ್ಗ ನಾಲ್ಕು ಪದಕ
ಶಿವಮೊಗ್ಗ: ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ಜಿಗೆ ನಾಲ್ಕು ಪದಕ ದೊರಕಿದೆ
ಇತ್ತೀಚೆಗೆ ಬೆಳಗಾವಿಯ ಕ್ರೀಡಾ ವಸತಿ ನಿಲಯ ನೆಹರು ನಗರದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜು ಗಳ ೧೯ ವಷ ವಯೋಮಿತಿಯ ಬಾಲಕ ಬಾಲಕಿಯರ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ಜಿಯ ಕ್ರೀಡಾಪಟುಗಳಾದ ಪೃಥ್ವಿಲ್, ವಿeನ ಪಿಯು ಕಾಲೇಜ್ ಸಾಗರ ೬೨-೬೪ ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನ, ಯೋಗಾನಂದ ರಾಷ್ಟ್ರೀಯ ಪದವಿಪೂರ್ವ ಕಾಲೇಜು ೮೯-೯೫ ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನ, ತುಷರ್ ಮಂದಾರ ಪದವಿ ಪೂರ್ವ ಕಾಲೇಜು -೪೮ ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನ, ಶಶಾಂಕ್ ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜು -೭೫ ಕೆಜಿ ವಿಭಾ ಗದಲ್ಲಿ ತೃತೀಯ ಸ್ಥಾನ ಪಡೆದಿದ್ದು, ಶಿವಮೊಗ್ಗ ಜಿಯಿಂದ ಪದವಿ ಪೂರ್ವ ಕಾಲೇಜುಗಳ ಬಾಕ್ಸಿಂಗ್ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಪದಕಗಳನ್ನು ಪಡೆದಿದ್ದು ವಿಶೇಷವಾಗಿದ್ದು ಈ ವರ್ಷ ಜಿ ಮಟ್ಟದಲ್ಲಿ ಬಾಕ್ಸಿಂಗ್ ಆಯ್ಕೆ ಪ್ರಕ್ರಿ ಯೆಯನ್ನು ಶಿವಮೊಗ್ಗ ಪದವಿ ಪೂರ್ವಶಿಕ್ಷಣ ಇಲಾಖೆ ಮೊದಲ ಬಾರಿಗೆ ನಡೆಸಿ ಜಿಯ ಕ್ರೀಡಾ ಪಟುಗಳನ್ನು ರಾಜ್ಯಮಟ್ಟಕ್ಕೆ ಕಳುಹಿ ಸಿತ್ತು.ಇದಕ್ಕೆ ಕಾರಣೀಕರ್ತರಾದ ಶ್ರೀ ಕೃಷಪ್ಪ ಉಪ ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ, ನಾಗೇಂದ್ರ ಪ್ರಸಾದ್ ಕ್ರೀಡಾ ಸಂಚಾಲಕರು ಪದವಿ ಪೂರ್ವ ಶಿಕ್ಷಣ ಇಲಾಖೆರವರಿಗೆ ಹಾಗೂ ವಿಜೇತ ಕ್ರೀಡಾಪಟುಗಳ ಕೋಚ್ ಶ್ರೇಯಸ್ ಹಾಗೂ ಹರ್ಷಿತ್‌ರ ವರಿಗೆ ಶಿವಮೊಗ್ಗ ಜಿ ಅಮೆ ಚೂರ್ ಬಾಕ್ಸಿಂಗ್ ಅಸೋಸಿ ಯೇಷನ್ ಅಧ್ಯಕ್ಷ ಶಿವಮೊಗ್ಗ ವಿನೋದ್ ಅಭಿನಂದಿಸಿzರೆ.