ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಲ್ಯಾಂಡ್ ಜಿಹಾದ್ ಮಾಡಲು ಹೊರಟ ರಾಜ್ಯ ಸರ್ಕಾರ: ಬಿವೈಆರ್ ಗಂಭೀರ ಆರೋಪ

Share Below Link

ಶಿವಮೊಗ್ಗ : ರಾಜ್ಯ ಸರ್ಕಾರ ಲ್ಯಾಂಡ್ ಜಿಹಾದ್ ಮಾಡಲು ಹೊರಟಿದೆ. ಜಿಯಲ್ಲಿ ರೈತರಿಗೆ ಭೂಮಿ ಕೊಡುವಲ್ಲಿ ಇಂಡೀಕರಣ ಮಾಡುವುದನ್ನು ಬಿಟ್ಟು ವಕ್ಫ್ ಆಸ್ತಿ ವಿಚಾರದಲ್ಲಿ ಆಸಕ್ತಿ ತೋರುತ್ತಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಸುದ್ದಿಗೋಷ್ಟಿಯಲ್ಲಿ ಆರೋಪಿಸಿದರು.
ಶಿವಮೊಗ್ಗದಲ್ಲಿ ಸರ್ಕಾರಿ ಭೂಮಿಯನ್ನು ಇಂಡೀಕರಣ ಮಾಡಿ ಜನರಿಗೆ ಭೂಮಿ ಕೊಡಲು ಆಗುತ್ತಿಲ್ಲ. ರೈತರು, ಮಠ, ಮಂದಿರಗಳ ಆಸ್ತಿಯನ್ನು ವಕ್ಫ್‌ಗೆ ಸೇರಿಸುವ ಆಸಕ್ತಿ ಯಾಕೆ?, ಒಂದು ಸಮುದಾಯವನ್ನು ಓಲೈಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ಲ್ಯಾಂಡ್ ಜಿಹಾದ್ ನಡೆಸುತ್ತಿದೆ. ಬೇಕಾಬಿಟ್ಡಿ ಆಸ್ತಿಗಳ ಸ್ವಾಧೀನ ಪಡಿಸಿಕೊಳ್ಳು ಯತ್ನಿಸುತ್ತಿರುವ ರಾಜ್ಯ ಸರ್ಕಾರ ಹಿಂದೂಗಳ ಭೂಮಿಯನ್ನಷ್ಟೆ ಅಲ್ಲದೆ ಮುಸ್ಲಿಂ ಸಮುದಾಯದವರ ಭೂಮಿ ಯನ್ನು ವಶಪಡಿಸಿಕೊಳ್ಳುತ್ತಿದ್ದು, ಧರ್ಮ -ಧರ್ಮಗಳ ನಡುವಿನ ವಿವಾದವನ್ನಾಗಿ ಸೃಷ್ಟಿಸಲು ಯತ್ನಿಸು ತ್ತಿದೆ ಎಂದು ಗಂಭೀರ ಆರೋಪ ಮಾಡಿದರು.


ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿಗೆ ಚಿಂತನೆ ನಡೆಸಿ, ಜಂಟೀ ಸಂಸದೀಯ ಮಂಡಳಿ ರಚನೆ ಮಾಡಿದ್ದರಿಂದ ಗಾಬರಿಯಾಗಿರುವ ವಿಪಕ್ಷಗಳು ಮನಬಂದಂತೆ ವರ್ತಿ ಸುತ್ತಿವೆ. ಜಂಟೀ ಸಂಸದೀಯ ಮಂಡಳಿ ಸಭೆಗೆ ಹಾಜರಾಗದೆ ಯಾವ್ಯಾವ ರೀತಿ ಘಟನಾವಳಿಗಳು ನಡೆಯುತ್ತಿವೆ ಎಂಬುದು ಗೊತ್ತಾಗುತ್ತಿದೆ. ಯಾರನ್ನೋ ಓಲೈಸಲು ಈ ವರ್ತನೆ ರಾಜ್ಯ ಸರ್ಕಾರಕ್ಕೆ ಸರಿಯಲ್ಲ ಎಂದರು.
ರಾಜ್ಯದಲ್ಲಿ ವಕ್ಫ್ ನ್ಯಾಯಾಲಯದಲ್ಲಿ ವಕ್ಫ್ ಆಸ್ತಿಯ ಅನಧಿಕೃತ ಒತ್ತುವರಿಯ ೩೭೨೦ ಪ್ರಕರಣಗಳ ೩೧೯ ಎಕರೆ ಭೂಮಿಯ ಪ್ರಕರಣಗಳು ದಾಖಲಾಗಿವೆ. ೧೪೦೦ಕ್ಕಿಂತ ಹೆಚ್ಚಿನ ಪ್ರಕರಣಗಳು ತೀರ್ಪಿಗೆ ಕಾದಿವೆ. ವ್ಯವಸ್ಥಿತವಾಗಿ ರಾಜ್ಯದಲ್ಲಿ ತರಾತುರಿಯಲ್ಲಿ ಉzಶಪೂರ್ವಕ ವಾಗಿ ವಕ್ಫ್ ಆಸ್ತಿ ಖಾತೆ ಏರಿಸಲು ಅಧಿಕೃತವಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದ ಸಂಸರು, ಬಿಜೆಪಿ ಇದರ ವಿರುದ್ದ ಹೋರಾಟ ಮುಂದುವರೆಸಲಿದೆ. ತಕ್ಷಣವೇ ರೈತರ, ಮಠಮಂದಿರಗಳ ಭೂಮಿ ಯನ್ನು ವಕ್ಫ್ ಖಾತೆಗೆ ಸೇರಿಸುವ ಕೆಲಸವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಾ|ಧನಂಜಯ ಸರ್ಜಿ, ಬಿಜೆಪಿ ಜಿಧ್ಯಕ್ಷ ಮೇಘರಾಜ್, ಜಿ ಪ್ರಧಾನಕಾರ್ಯದರ್ಶಿ ಶಿವರಾಜು, ಪದಾಧಿಕಾರಿಗಳಾದ ಹರಿಕೃಷ್ಣ, ವಿನ್ಸೆಂಟ್ ರೋಡ್ರಿಗಸ್, ಗಣೇಶ್ ಬಿಳಕಿ, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.