ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ : ಶಿಕ್ಷಣ ಸಚಿವರ ಜಿಲ್ಲೆಗೆ 3ನೇ ಸ್ಥಾನ…
ಬೆಂಗಳೂರು : ೨೦೨೩-೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-೧ರ ಫಲಿತಾಂಶ ಪ್ರಕಟಗೊಂಡಿದ್ದು, ಕಳೆದ ವರ್ಷಕ್ಕಿಂತಲೂ ಫಲಿತಾಂಶದಲ್ಲಿ ಸುಮಾರು ಶೇ.೧೦ರಷ್ಟು ಕುಸಿತ ಕಂಡಿದೆ. ಈ ವರ್ಷ ಶೇ.೭೩.೪೦ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಎಂದಿನಂತೆ ಬಾಲಕೀಯರೇ ಮೇಲಗೈ ಸಾಧಿಸಿzರೆ. ವಿಶೇಷವೆಂದರೆ ನಗರಪ್ರದೇಶದವರನ್ನು ಹಿಂದಿಕ್ಕಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಗಳು ಈ ಬಾರಿ ಹೆಚ್ಚು ಫಲಿತಾಂಶ ಪಡೆದಿzರೆ. ಕರಾವಳಿ, ಮಲೆನಾಡಿನ ಶೈಕ್ಷಣಿಕ ಜಿಗಳು ಹಿಂದಿನ ಹಿನ್ನಡೆಯನ್ನು ಸರಿಗಟ್ಟಿ ಮುಂಚೂಣಿಗೆ ಬಂದಿವೆ. ವಿದ್ಯಾರ್ಥಿಗಳ ಶ್ರೇಯಾಂಕದಲ್ಲಿ ಸಾಕಷ್ಟು ಏರುಪೇರು ಕಂಡು ಬಂದಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ವೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷೆ ಮಂಜುಶ್ರೀ ಇಂದು ಪತ್ರಿಕಾ ಗೋಷ್ಠಿಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಪ್ರಕಟಿಸಿದರು.
೨೮ರಿಂದ ೩ನೇ ಸ್ಥಾನಕ್ಕೆ ಜಿಗಿದ ಶಿವಮೊಗ್ಗ ಜಿಲ್ಲೆ
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಿವಮೊಗ್ಗ ಜಿ ದಾಖಲೆ ಫಲಿತಾಂಶ ಪಡೆದಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪ್ರತಿನಿಧಿಸುವ ಶಿವಮೊಗ್ಗ ಜಿಲ್ಲೆಯು ಶೇ.೮೮.೬೭ರಷ್ಟು ಫಲಿತಾಂಶ ದಾಖಲಿಸುವ ಮೂಲಕ ರಾಜ್ಯಮಟ್ಟದಲ್ಲಿ ಮೂರನೇ ಸ್ಥಾನ ಪಡೆದು ಸಾಧನೆ ಮಾಡಿದೆ. ಶಿವಮೊಗ್ಗ ಜಿಯಲ್ಲಿ ೨೩,೦೨೮ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ ೨೦,೪೨೦ ವಿದ್ಯಾರ್ಥಿಗಳು ಉತ್ತೀರ್ಣರಾಗಿzರೆ. ಕಳೆದ ಬಾರಿ ಶಿವಮೊಗ್ಗ ಜಿ ೨೮ನೇ ಸ್ಥಾನದಲ್ಲಿತ್ತು.
೨೦೨೨-೨೩ನೇ ಸಾಲಿನಲ್ಲಿ ಶೇ.೮೩.೮೯ ರಷ್ಟು ಫಲಿತಾಂಶ ಬಂದಿತ್ತು. ಆದರೆ ಈ ಬಾರಿ ೮,೫೯,೯೬೭ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೬,೩೧,೨೦೪ ವಿದ್ಯಾರ್ಥಿ ಗಳು ಉತ್ತೀರ್ಣರಾಗುವ ಮೂಲಕ ಶೇ.೭೩.೪೦ರಷ್ಟು ಫಲಿತಾಂಶ ಬಂದಿದೆ ಎಂದು ವಿವರಿಸಿದರು.
ಅಂಕಿತ ಬಸಪ್ಪರಾಜ್ಯಕ್ಕೆ ಟಾಪರ್…
ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊನ್ನೂರು ೬೨೫ಕ್ಕೆ ೬೨೫ ಅಂಕ ಪಡೆದು ರಾಜ್ಯದ ಪ್ರಥಮ ಸ್ಥಾನದಲ್ಲಿzರೆ. ಈ ಪ್ರತಿಭಾನ್ವಿತೆ ಬಾಗಲಕೋಟೆ ಜಿ ಮುಧೋಳ ತಾಲ್ಲೂಕಿನ ಮೆಳ್ಳಿಗೇರಿ ನಿವಾಸಿಯಾಗಿದ್ದಾರೆ.
೬೨೫ಕ್ಕೆ ೬೨೪ ಅಂಕವನ್ನು ೭ ವಿದ್ಯಾರ್ಥಿಗಳು, ೬೨೩ ಅಂಕಗಳನ್ನು ೧೪ ವಿದ್ಯಾರ್ಥಿಗಳು, ೬೨೨ ಅಂಕವನ್ನು ೨೧ ವಿದ್ಯಾರ್ಥಿಗಳು, ೬೨೧ ಅಂಕವನ್ನು ೪೪ ವಿದ್ಯಾರ್ಥಿಗಳು ಮತ್ತು ೬೨೦ ಅಂಕವನ್ನು ೬೪ ವಿದ್ಯಾರ್ಥಿಗಳು ಪಡೆದಿzರೆ.
ಬೆಂಗಳೂರಿನ ಮೇದಾ ಪಿ ಶೆಟ್ಟಿ , ಮಧುಗೀರಿಯ ಹರ್ಷಿತಾ, ದಕ್ಷಿಣ ಕನ್ನಡದ ಚಿನ್ಮಯ್, ಚಿಕ್ಕೋಡಿಯ ಸಿದ್ದಾಂತ್, ಶಿರಸಿಯ ದರ್ಶನ್, ಚಿನ್ಮಯ್ ಮತ್ತು ಶ್ರೀರಾಮ್ ಅವರುಗಳು ೬೨೫ಕ್ಕೆ ೬೨೪ ಅಂಕ ಪಡೆದು ದ್ವಿತಿಯ ಸ್ಥಾನ ಪಡೆದ್ದಾರೆ.
೨೦೧೮ರಿಂದ ೨೦೨೦ರ ನಡುವೆ ಕೋವಿಡ್ ಅವಧಿಯಲ್ಲಿ ಕಡಿಮೆ ಫಲಿತಾಂಶ ದಾಖಲಾಗಿತ್ತು. ಆ ಬಳಿಕ ಈ ವರ್ಷವೇ ಫಲಿತಾಂಶದಲ್ಲಿ ಕುಸಿತ ಕಂಡಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನಕಾರ್ಯದರ್ಶಿ ರಿತೇಶ್‌ಕುಮಾರ್ ಸಿಂಗ್ ಅವರು ಮಾತನಾಡಿ, ಈ ಬಾರಿ ಬಹುತೇಕ ಶಾಲೆಗಳಲ್ಲಿ ವೆಬ್‌ಕಾಸ್ಟಿಂಗ್ ಮೂಲಕ ಪರೀಕ್ಷಾ ಕೇಂದ್ರದಲ್ಲಿನ ಚಟುವಟಿಕೆಗಳನ್ನು ಸಿಸಿಟಿವಿ ಮೂಲಕ ನೇರ ನಿಗಾವಣೆ ವಹಿಸ ಲಾಗಿತ್ತು. ಫಲಿತಾಂಶ ಕುಸಿಯಲು ಇದು ಕೂಡ ಕಾರಣವಾಗಿರಬಹುದು ಎಂದರು.
ಸದ್ಯಕ್ಕೆ ವಿದ್ಯಾರ್ಥಿಗಳು ಅನುತ್ತೀರ್ಣ ರಾಗಿದ್ದರೂ ಕೂಡ ಆತಂಕಪಡುವ ಅಗತ್ಯ ವಿಲ್ಲ. ಪರೀಕ್ಷೆ ೨ ಮತ್ತು ೩ನೇ ಹಂತದಲ್ಲಿ ಉತ್ತೀರ್ಣರಾಗಲು ಅವಕಾಶವಿದೆ. ವೆಬ್ ಕಾಸ್ಟಿಂಗ್ ತಾತ್ಕಾಲಿಕವಾಗಿ ಪರೀಕ್ಷೆಯನ್ನು ಅತ್ಯಂತ ಶಿಸ್ತುಬದ್ದವಾಗಿ ನಡೆಸಿದೆ ಎನಿಸಿದರೂ ಕೂಡ ಪರೀಕ್ಷೆಯಲ್ಲಿನ ಭವಿಷ್ಯದ ಪಾವಿತ್ರ್ಯತೆ ಮತ್ತು ಸಮಗ್ರತೆ ಪಾಲನೆಗೆ ಸಹಕಾರಿಯಾಗಲಿದೆ ಎಂದರು.
ಕಳೆದ ವರ್ಷ ವಿದ್ಯಾರ್ಥಿಗಳಿಗೆ ಶೇ.೧೦ ರಷ್ಟು ಹೆಚ್ಚುವರಿ ಅಂಕ(ಗ್ರೇಸ್ ಮಾರ್ಕ್ಸ್) ನೀಡಲಾಗಿತ್ತು. ಈ ಬಾರಿ ೨೫ರಿಂದ ೩೫ರಷ್ಟು ಕಡಿಮೆ ಅಂಕ ಪಡೆದವರಿಗೆ ಶೇ.೨೦ರಷ್ಟು ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. ಇಲ್ಲದೆ ಹೋಗಿದ್ದರೆ ಫಲಿತಾಂಶದಲ್ಲಿ ಇನ್ನು ಶೇ.೩೦ ರಷ್ಟು ಕುಸಿವಾಗುವ ಸಾಧ್ಯತೆ ಇತ್ತು ಎಂದು ವಿವರಿಸಿದರು.
ಈ ವರ್ಷಕ್ಕೆ ಮಾತ್ರ ಗ್ರೇಸ ಮಾರ್ಕ್ಸ್ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಮುಂದಿನ ವರ್ಷ ಶೇ.೧೦ರಷ್ಟೇ ಪ್ರಮಾಣವನ್ನು ಮುಂದುವರೆಸಲಾಗುವುದು ಎಂದು ರಿತೇಶ್ ಸಿಂಗ್ ಅವರು ಸ್ಪಷ್ಟಪಡಿಸಿದರು.
ಬಾಲಕಿಯರ ಮೇಲುಗೈ: ಪ್ರಸಕ್ತ ಸಾಲಿನಲ್ಲಿ ೪,೩೬,೧೩೮ ಬಾಲಕರು ಪರೀಕ್ಷೆಗೆ ಹಾಜರಾಗಿದ್ದು, ೨,೮೭,೪೧೬ ಮಂದಿ ಉತ್ತೀರ್ಣರಾಗುವ ಮೂಲಕ ಶೇ.೬೫.೯೦ರಷ್ಟು ಫಲಿತಾಂಶ ಪಡೆದಿzರೆ. ೪,೨೩,೮೨೯ ಬಾಲಕಿಯರು ಹಾಜರಾಗಿ ೩,೪೩,೭೮೮ ಮಂದಿ ಉತ್ತೀರ್ಣರಾಗಿ ಶೇ.೮೧.೧೧ರಷ್ಟು ತೇರ್ಗಡೆಯಾಗುವ ಮೂಲಕ ಎಂದಿನಂತೆ ಬಾಲಕಿಯರೇ ಬೆಸ್ಟ್ ಎನಿಸಿಕೊಂಡಿದ್ದಾರೆ.
ನಗರದಪ್ರದೇಶದಲ್ಲಿ ೪,೯೩,೯೦೦ ವಿದ್ಯಾರ್ಥಿಗಳು ಹಾಜರಾಗಿ ೩,೫೯,೭೦೩ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. ೭೨.೮೩ರಷ್ಟು ಫಲಿತಾಂಶ ಗಳಿಸಿದ್ದರೆ, ಗ್ರಾಮೀಣ ಭಾಗದಲ್ಲಿ ೩,೬೬,೦೬೭ ವಿದ್ಯಾರ್ಥಿಗಳು ಹಾಜರಾಗಿ ೨,೭೧,೫೦೧ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.೭೪.೧೭ ರಷ್ಟು ಫಲಿತಾಂಶ ಪಡೆದಿzರೆ.
ಪ್ರಸಕ್ತ ವರ್ಷದ ಶಾಲಾ ವಿದ್ಯಾರ್ಥಿಗಳ ಪೈಕಿ ಶೇ.೭೬.೯೧ರಷ್ಟು, ಖಾಸಗಿ ಅಭ್ಯರ್ಥಿ ಗಳ ಪೈಕಿ ಶೇ.೧೦.೯೫, ಪುನರಾವರ್ತಿತ ಶಾಲಾ ವಿದ್ಯಾರ್ಥಿಗಳ ಪೈಕಿ ಶೇ.೩೩.೨೬ರಷ್ಟು ಉತ್ತೀರ್ಣರಾಗಿzರೆ.
ಈ ಬಾರಿಯು ಅನುದಾನರಹಿತ ಶಾಲೆಗಳೇ ಫಲಿತಾಂಶದಲ್ಲಿ ಮುಂದಿವೆ. ಶೇ.೮೬.೪೬ರಷ್ಟು ಫಲಿತಾಂಶ ಗಳಿಸಿವೆ. ಸರ್ಕಾರಿ ಶಾಲೆ ಶೇ.೭೨.೪೬ರಷ್ಟು ಫಲಿತಾಂಶ ಗಳಿಸಿವೆ ಅನುದಾನಿತ ಶಾಲೆಗಳಿಂತಲೂ (ಶೇ.೭೨.೨೨) ಒಂದು ಹೆಜ್ಜೆ ಮುಂದೇ ಇದೆ.
ಜಿವಾರು ಫಲಿತಾಂಶ ವಿವರ: ಉಡುಪಿ ಶೇ. ೯೪, ದಕ್ಷಿಣಕನ್ನಡ, ಶೇ. ೯೨.೧೨, ಶಿವಮೊಗ್ಗ ಶೇ. ೮೮.೬೭, ಕೊಡುಗು ಶೇ. ೮೮.೬೭, ಉತ್ತರಕನ್ನಡ ಶೇ. ೮೬.೫೪, ಹಾಸನ ಶೇ.೮೬.೨೮, ಮೈಸೂರು ಶೇ. ೮೫.೦೫, ಶಿರಸಿ ಶೇ. ೮೪.೬೪, ಬೆಂಗಳೂರು ಗ್ರಾಮಾಂತರ ಶೇ. ೮೩.೬೭, ಚಿಕ್ಕಮಗಳೂರು ಶೇ.೮೩.೩೯, ವಿಜಯಪುರ ಶೇ.೭೯.೮೨, ಬೆಂಗಳೂರು ದಕ್ಷಿಣ ಶೇ.೭೯, ಬಾಗಲಕೋಟೆ ಶೇ.೭೭.೯೨, ಬೆಂಗಳೂರು ಉತ್ತರ ಶೇ.೭೭.೦೮, ಹಾವೇರಿ ಶೇ.೭೫.೮೫, ತುಮಕೂರು ಶೇ.೭೫.೧೬, ಗದಗ ಶೇ.೭೪.೭೬, ಚಿಕ್ಕಬಳ್ಳಾಪುರ ಶೇ.೭೩.೫೧, ಮಂಡ್ಯ ಶೇ.೭೩.೫೯, ಕೋಲಾರ ಶೇ. ೭೩.೫೭, ಚಿತ್ರದುರ್ಗ ಶೇ. ೭೨.೮೫, ಧಾರವಾಡ ಶೇ.೭೨.೫೭, ದಾವಣಗೆರೆ ಶೇ. ೭೭.೪೮, ಚಾಮರಾಜನಗರ ಶೇ.೭೧.೫೯, ಚಿಕ್ಕೋಡಿ ಶೇ.೬೯.೮೨, ರಾಮನಗರ ಶೇ.೬೯.೫೩, ವಿಜಯನಗರ ಶೇ.೬೫.೬೧, ಬಳ್ಳಾರಿ ಶೇ.೬೪.೯೦, ಬೆಳಗಾವಿ ಶೇ.೬೪.೯೩, ಮೂಡಗೆರೆ ಶೇ.೬೨.೪೪, ರಾಯಚೂರು ಶೇ. ೬೧.೨, ಕೊಪ್ಪಳ ಶೇ.೬೧.೧೬, ಬೀದರ್ ಶೇ.೫೭.೫೨, ಕಲಬುರುಗಿ ಶೇ.೫೩.೦೪, ಯಾದಗಿರಿ ಶೇ.೫೦.೫೯ ಫಲಿತಾಂಶ ಪಡೆದಿವೆ.