ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಎಸ್‌ಎಸ್‌ಎಲ್‌ಸಿ: ಎನ್‌ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ …

Share Below Link

ಶಿವಮೊಗ್ಗ : ನಗರದ ಪ್ರತಿಷ್ಟಿತ ರಾಷ್ಟ್ರೀಯ ಶಿಕ್ಷಣ ಸಮಿತಿಯ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದು, ಕಸ್ತೂರಬಾ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿ ಆಲಿಯಾ ಮೆಹರೂಶ್ ೬೨೧ (ಶೇ. ೯೯.೩೬) ಅಂಕ ಗಳಿಸಿ ಜಿಲ್ಲೆಗೆ ಎರಡನೇ ಟಾಪರ್ ಆಗಿದ್ದಾರೆ. ಚೀಲೂರು ರಾಷ್ಟ್ರೀಯ ಆಂಗ್ಲ ಮಾಧ್ಯಮ ಶಾಲೆ ಶೇ.೧೦೦ ಫಲಿತಾಂಶ, ಕುಂಸಿ ರಾಷ್ಟ್ರೀಯ ಪ್ರೌಢ ಶಾಲೆ ಶೇ.೧೦೦, ಕೋಣಂದೂರು ರಾಷ್ಟ್ರೀಯ ಪ್ರೌಢಶಾಲೆ ಶೇ.೧೦೦, ಹುಂಚಾದ ಪದ್ಮಾಂಬ ಶಾಲೆ ಶೇ. ೧೦೦, ಕಸ್ತೂರಬಾ ಶಾಲೆ ಶೇ.೯೯, ಚೀಲೂರು ಕನ್ನಡ ಮಾಧ್ಯಮ ರಾಷ್ಟ್ರೀಯ ಪ್ರೌಢಶಾಲೆ ಶೇ.೮೮, ಶಿವಮೊಗ್ಗದ ರಾಷ್ಟ್ರೀಯ ಪ್ರೌಢಶಾಲೆ ಶೇ.೮೮, ಜೆ.ಪಿ.ಎನ್ ಶಾಲೆ ಶೇ.೮೦, ಹರಿಗೆಯ ಶರಾವತಿ ರಾಷ್ಟ್ರೀಯ ಪ್ರೌಢಶಾಲೆ ಶೇ.೭೫, ಬಿಆರ್‌ಪಿ ಶಾಲೆ ಶೇ.೭೫, ಬೆಳಗುತ್ತಿಯ ತೀರ್ಥಲಿಂಗೇಶ್ವರ ಪ್ರೌಢಶಾಲೆ ಶೇ. ೫೫ ಫಲಿತಾಂಶ ಪಡೆದಿದೆ.
ಎಲ್ಲಾ ವಿದ್ಯಾರ್ಥಿಗಳಿಗೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗಕ್ಕೆ ರಾಷ್ಟ್ರೀಯ ಶಿಕ್ಷಣ ಸಮಿತಿ ಆಡಳಿತ ಮಂಡಳಿ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.