ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅ.೧ರವರೆಗೆ ಶ್ರೀ ಶರನ್ನವರಾತ್ರಿ ಮಹೋತ್ಸವ…
ಶಿವಮೊಗ್ಗ : ವಿವೇಕಾನಂದ ಬಡಾವಣೆ ಯಲ್ಲಿ ರುವ ನಾಗಸುಬ್ರಹ್ಮಣ್ಯ ದೇವಸ್ಥಾನ ಸೇವಾ ಸಮಿತಿ ಹಾಗೂ ಸ್ವಾಮಿ ವಿವೇಕಾನಂದ ಅಡ್ವೆಂಚರ್ಸ್ ಮತ್ತು ಸ್ಫೋರ್ಟ್ಸ್ಕ್ಲಬ್, ಅರ್ಚಕ ವೃಂದ ಮತ್ತು ಭಜನಾ ಪರಿಷತ್ ವತಿ ಯಿಂದ ಸೆ.೨೨ರಿಂದ ಅ.೧ರ ವರೆಗೆ ದೇವಸ್ಥಾನದಲ್ಲಿ ೧೬ನೇ ವರ್ಷದ ಶ್ರೀ ಶರನ್ನವ ರಾತ್ರೋತ್ಸವ ಹಮ್ಮಿ ಕೊಳ್ಳಲಾಗಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಸಂದೇಶ ಉಪಾಧ್ಯ ಅವರು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾ ಡಿದ ಅವರು, ಪ್ರತಿನಿತ್ಯ ಬೆಳಿಗ್ಗೆ ೯ರಿಂದ ಚಂಡಿಕಾಯಾಗ, ೧೨-೩೦ಕ್ಕೆ ಪೂರ್ಣಾಹುತಿ ನಂತರ ಪ್ರಸಾದ ವಿನಿಯೋಗವಿರುತ್ತದೆ. ಹಾಗೆಯೇ ಪ್ರತಿದಿನ ಸಂಜೆ ೪.೩೦ರಿಂದ ಶಾರದಾ ಶಂಕರ ಭಜನಾ ಮಂಡಳಿ ಯಿಂದ ಲಲಿತ ಸಹಸ್ರನಾಮ ಸೌಂದರ್ಯ ಲಹರಿ ಇತ್ಯಾದಿ ಸ್ತೋತ್ರಗಳ ಸಮರ್ಪಣೆ ಹಾಗೂ ೫.೩೦ರಿಂದ ಭಜನಾ ಮಂಡಳಿ ಯಿಂದ ಭಜನೆ ಹಾಗೂ ಸಂಜೆ ೬.೩೦ರಿಂದ ಸ್ಥಳೀಯ ಕಲಾವಿದ ರಿಂದ ಭರತನಾಟ್ಯ, ಸಂಗೀತ, ಗಾನವೈಭವ, ಯಕ್ಷಗಾನ, ನಾಟಕ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.
ಸೆ.೨೨ರ ಸಂಜೆ ೬ ಗಂಟೆಗೆ ದೇವಸ್ಥಾನದ ಆವರಣದಲ್ಲಿ ಅಶ್ವಯುಜ ಮಾಸದಲ್ಲಿ ನಡೆಯು ತ್ತಿರುವ ಶರನ್ನವ ರಾತ್ರೋತ್ಸವ ವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಎಸ್. ಸಂತೋಷ್ ಉದ್ಘಾಟಿಸಲಿzರೆ.
ದೇವಸ್ಥಾನ ಸಮಿತಿಯ ಅಧ್ಯಕ್ಷ ಹೆಚ್. ರಾಮ ಲಿಂಗಪ್ಪ ಅಧ್ಯಕ್ಷತೆ ವಹಿಸಲಿದ್ದು ಕಾರ್ಯದರ್ಶಿ ಕೆ.ಎ. ರಮೇಶ್ ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್. ರಾಮಲಿಂಗಪ್ಪ, ರಾಜೇಶ್ ಎನ್. ಭಟ್ ಉಪಸ್ಥಿತರಿದ್ದರು.

