ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಶ್ರದ್ಧಾ ಭಕ್ತಿಯಿಂದ ನಡೆಯುವ ಭಕ್ತರ ಆಶಯಗಳನ್ನು ಈಡೇರಿಸುವ ಶ್ರೀ ಮುನೇಶ್ವರ ಸ್ವಾಮಿ…

Share Below Link

ಶಿವಮೊಗ್ಗ : ಶ್ರೀ ಮುನೇಶ್ವರ ಸ್ವಾಮಿ ಶ್ರೀ ಅಮ್ಮಸಾರ್ ಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವೇ.ಬ್ರ.ಶ್ರೀ ಸುಮುಖ ಭಟ್ ರವರ ನೇತೃತ್ವದಲ್ಲಿ ಅ.೧೨ರ ನಾಳೆ (ಭಾನುವಾರ) ಬೆಳಿಗ್ಗೆ ೯ ರಿಂದ ಶ್ರೀ ಗಣಪತಿ ಪೂಜೆ, ಪುಣ್ಯಾಹ, ಮಹಾ ಸಂಕಲ್ಪ ಹಾಗೂ ಸುಮಂಗಲಿ ಪೂಜೆ, ಕಳಸ ಪೂಜೆ, ಕಲಾ ಸಾನಿಧ್ಯ ಹೋಮ, ಶ್ರೀ ದುರ್ಗಾ ಹೋಮ, ರುದ್ರ ಹೋಮ, ಸಪ್ತ ಮುನಿಗಳ ಹೋಮ ನಡೆಯಲಿದ್ದು, ಮಧ್ಯಾಹ್ನ ೧೨ ಗಂಟೆಗೆ ಪೂರ್ಣಾಹುತಿ, ಮಹಾ ನೈವೇದ್ಯ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ಭಕ್ತಾದಿಗಳು ಈ ಎ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಸ್ವಾಮಿ ಕೃಪೆಗೆ ಪಾತ್ರರಾಗಬೇಕಾಗಿ ದೇವಳ ಸಮಿತಿ ಕೋರಿದೆ.
ದೇವಸ್ಥಾನದ ಹಿನ್ನೆಲೆ : ನಗರದ ತಮಿಳು ಸಮಾಜದ ಒಂದು ಕುಟುಂಬ, ಸುಮಾರು ೫೦ ವರ್ಷಗಳ ತಮ್ಮ ಮನೆಯ ಒಬ್ಬ ಹುಡುಗ ಎ ಕಳೆದು ಹೋಗಿದ್ದ ಹಿನ್ನೆಲೆಯಲ್ಲಿ ತಮ್ಮ ಆರಾಧ್ಯದೈವ ಶ್ರೀ ಮುನೇಶ್ವರ ಸ್ವಾಮಿಯ ಮೊರೆ ಹೋಗಿ ಪುತ್ರನನ್ನು ಹುಡುಕಿ ಕೊಡುವಂತೆ ಅವರ ಮನೆಯಲ್ಲಿಯೇ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದರು.
ಇದಾದ ಕೆಲವೇ ದಿನಗಳಲ್ಲಿ ಆಶ್ಚರ್ಯಕರ ರೀತಿಯಲ್ಲಿ ಶ್ರೀ ಮುನೇಶ್ವರ ಸ್ವಾಮಿ ಅನುಗ್ರಹದಿಂದ ಆ ಹುಡುಗ ಪ್ರತ್ಯಕ್ಷನಾಗಿದ್ದ. ನಂತರದಲ್ಲಿ ಆ ಮನೆಯ ಯಜಮಾನನ ಕನಸಿನಲ್ಲಿ ಶ್ರೀ ಮುನೇಶ್ವರ ಸ್ವಾಮಿಯು, ತನಗೆ ತಮ್ಮ ಕುಟುಂಬದಿಂದ ಒಂದು ಸೂರು ಬೇಕೆಂದು ಕೇಳಿದ ಹಾಗಾಯಿತು ಎಂಬ ನಂಬಿಕೆಯಿದೆ.
ತನ್ನ ಆರಾಧ್ಯ ದೈವನಿಗೆ ಎಲ್ಲಿ ದೇವಸ್ಥಾನ ನಿರ್ಮಾಣ ಮಾಡಬೇಕೆಂದು ಪ್ರಶ್ನೆ ಹಾಕಿಸಿ ಕೇಳಿದಾಗ, ನಗರದ ತುಂಗಾ ಚಾನಲ್ ದಂಡೆಯ ಮೇಲೆ ದೇವಸ್ಥಾನ ನಿರ್ಮಿಸಬೇಕು ಎಂದು ಉತ್ತರ ಬಂದಿತು. ಕೂಡಲೇ ಸಂಬಂಧಿಸಿದವರನ್ನು ಹಾಗೂ ತಮಿಳು ಸಮಾಜದ ಮುಖಂಡ ರನ್ನು ಸಂಪರ್ಕಿಸಿ ದೇವಸ್ಥಾನದ ನಿರ್ಮಾಣಕ್ಕೆ ಸಹಕರಿಸುವಂತೆ ಕೋರಿದರು.
ಸಂಬಂಧಿಸಿದವರಿಂದ ಅನುಮತಿ ಪಡೆದ ಆ ಕುಟುಂಬ, ಒಂದು ಸಣ್ಣ ದೇವಸ್ಥಾನ ನಿರ್ಮಾಣ ಮಾಡಿ ಪ್ರತೀ ಭಾನುವಾರ ಪೂಜೆ ಸಲ್ಲಿಸುತ್ತಿತ್ತು. ಆದರೆ, ಸುತ್ತಲೂ ಕಸದ ರಾಶಿ ಹಾಗೂ ಹಂದಿಗಳ ಸಾಮ್ರಾಜ್ಯ ದಿಂದ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮುಜುಗರ ಉಂಟು ಮಾಡುತ್ತಿತ್ತು. ಈ ಹಂತದಲ್ಲಿ ಆ ಕುಟುಂಬದ ಹಿರಿಯರಿಗೆ ವಯೋಸಹಜದ ಕಾರಣದಿಂದ ದೇವಸ್ಥಾನದ ನಿರ್ವಹಣೆ ಮಾಡಲು ಅಸಾಧ್ಯವಾದುದ್ದರಿಂದ, ಅವರು, ತಮ್ಮ ಸಮುದಾಯದ ಎಂ. ಉಮೇಶ್ ಎಂಬುವರಿಗೆ ಸದರಿ ದೇವಸ್ಥಾನದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿದರು.
ಎಂ. ಉಮೇಶ್ ರವರು ಸದರಿ ದೇವಸ್ಥಾನದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಈಗಾಗಲೇ ಸುಮಾರು ೪೦ ವರ್ಷಗಳಾಗಿವೆ. ವೃತ್ತಿಯಲ್ಲಿ ಕಟ್ಟಡ ಗುತ್ತಿಗೆದಾರರಾಗಿರುವ ಉಮೇಶ್ ಅವರಿಗೆ ಶ್ರೀ ಮುನೇಶ್ವರ ಸ್ವಾಮಿಯೇ ಆರಾಧ್ಯ ದೈವವಾಗಿzನೆ. ತಮಿಳು ಸಮಾಜದ ಸುಮಾರು ೧೫ ಕುಟುಂಬದ ಸದಸ್ಯರು ಈ ದೇವಸ್ಥಾನಕ್ಕೆ ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುತ್ತಾರೆ. ತಮ್ಮ ಕುಟುಂಬದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರಾದರೂ ಅದನ್ನು ಶ್ರೀ ಮುನೇಶ್ವರ ಸ್ವಾಮಿಯಲ್ಲಿ ನಿವೇದಿಸಿ ದೇವರು ಕೊಡುವ ಹೂವಿನ ಪ್ರಸಾದ ಸ್ವೀಕರಿಸುವ ಮೂಲಕ ಪರಿಹಾರ ಕಂಡುಕೊಳ್ಳುತ್ತಾರೆ.
ಶ್ರೀ ಮುನೇಶ್ವರ ಸ್ವಾಮಿಯು ಕೆಲವು ಭಕ್ತರ ಕ್ಲಿಷ್ಟಕರ ಸಮಸ್ಯೆಗಳನ್ನು ಭೂತರಾಜನ ಮೂಲಕವೂ ಪರಿಹರಿಸುವ ನಂಬಿಕೆಯಿದೆ. ಆದರೆ, ಕೆಲಸವಾದ ಕೂಡಲೇ ಒಂದು ಬಲಿಯನ್ನು ಭೂತರಾಜನಿಗೆ ಸಮರ್ಪಿಸಬೇಕು ಎಂಬ ವಾಡಿಕಿ ಇದೆ.
೧೫ ಅಡಿ ಎತ್ತರದ ಶ್ರೀ ಮುನೇಶ್ವರ ಸ್ವಾಮಿ ಹಾಗೂ ಸಪ್ತಮುನಿಗಳ ವಿಗ್ರಹ ಲೋಕಾರ್ಪಣೆ: ಇಂತಹ ಐತಿಹಾಸಿಕ ಹಿನ್ನೆಲೆಯ ಶ್ರೀ ಮುನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ೧೫ ಅಡಿ ಎತ್ತರದ ಶ್ರೀ ಮುನೇಶ್ವರ ಸ್ವಾಮಿ ಹಾಗೂ ಸಪ್ತಮುನಿಗಳ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ೨೦೨೪ರ ಅ.೨೭ರ ಭಾನುವಾರ ಸುಮಾರು ೨,೦೦೦ ಭಕ್ತರ ಸಮ್ಮುಖದಲ್ಲಿ ನಗರದ ವೇ|ಬ್ರ|ಶ್ರೀ ಸುಮುಖ ಭಟ್ ನೇತೃತ್ವದ ಪುರೋಹಿತರ ವೃಂದ ಲೋಕಾರ್ಪಣೆ ಮಾಡಿತು.
ನೀರಿನ ಮೇಲೆ ಶ್ರೀ ಮುನೇಶ್ವರ ಸ್ವಾಮಿ: ಇಲ್ಲಿನ ಇನ್ನೊಂದು ವಿಶೇಷವೆಂದರೆ, ಸುಮಾರು ೭ ವರೆ ಅಡಿ ನೀರಿನ ಜೊತೆಗೆ ಶ್ರೀ ಮುನೇಶ್ವರ ಸ್ವಾಮಿಯು ಕುಳಿತಿ ರುವುದು. ದೇವಸ್ಥಾನದ ಪ್ರಧಾನ ಅರ್ಚಕರಾಗಿಯೂ ಸೇವೆ ಸಲ್ಲಿಸುತ್ತಿರುವ ಎಂ. ಉಮೇಶ್ ರವರ ಸ್ವಪ್ನದಲ್ಲಿ ಕಾಣಿಸಿಕೊಂಡ ಶ್ರೀ ಮುನೇಶ್ವರ ಸ್ವಾಮಿಯು, ತನ್ನನ್ನು ನೀರಿನ ಜೊತೆಗೆ ಪ್ರತಿಷ್ಠಾಪಿಸುವಂತೆ ಸೂಚಿಸಿದ್ದನ್ನು ಅವರು ತಮ್ಮದೇ ಆದ ತಮಿಳು – ಕನ್ನಡ ಭಾಷೆಯಲ್ಲಿ ಹೇಳುತ್ತಾರೆ.
ಕಾಶೀಪುರದ ಶಿಲ್ಪಿ ಮುನಿಸ್ವಾಮಿ : ೧೫ ಅಡಿ ಎತ್ತರ, ೯ ಅಡಿ ಅಗಲದ ವಿಶಾಲವಾದ ಬೃಹತ್ ಗಾತ್ರದ ಶ್ರೀ ಮುನೇಶ್ವರ ಸ್ವಾಮಿಯ ವಿಗ್ರಹವನ್ನು ಶಿವಮೊಗ್ಗ ನಗರದ ಕಾಶೀಪುರದ ಶಿಲ್ಪಿ ಮುನಿಸ್ವಾಮಿ ಯವರು, ಕೇವಲ ಒಬ್ಬ ಸಹಾಯಕ ನೊಂದಿಗೆ ಒಂದು ವರ್ಷ ನಿರಂತರವಾಗಿ ಅತ್ಯಂತ ಸುಂದರವಾಗಿ ರೂಪಣೆ ಮಾಡಿzರೆ. ಪ್ರತಿದಿನ ಬೆಳಿಗ್ಗೆ ೮ ಗೆ ಶ್ವೇತವಸ್ತ್ರಾಧಾರಿಯಾಗಿ ವಿಗ್ರಹ ರೂಪಣೆಗೆ ನಿಂತರೆ, ಶ್ರೀ ಮುನೇಶ್ವರ ಸ್ವಾಮಿಯ ದಿವ್ಯಾನುಗ್ರಹ ಯಾವ ರೀತಿ ಆಗುತ್ತದೆಯೋ ಅದೇ ರೀತಿಯಲ್ಲಿ ಬೃಹತ್ ವಿಗ್ರಹವು ನಿರ್ಮಾಣವಾಗಿದೆ.
ಭಾನುವಾರ ಶ್ರೀ ಮುನೇಶ್ವರ ಸ್ವಾಮಿಯ ವಾರ :
ಪ್ರತಿ ಭಾನುವಾರ ಶ್ರೀ ಮುನೇಶ್ವರ ಸ್ವಾಮಿಗೆ ಹಾಗೂ ಪರಿವಾರ ದೇವತೆಗಳಿಗೆ ಕ್ಷೀರಾಭಿಷೇಕ, ಆಭರಣಾಲಂಕಾರ, ನೈವೇದ್ಯ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗದ ನಂತರ, ನೆರೆದಿದ್ದ ಭಕ್ತರಿಗೆ ಸಾಮೂಹಿಕ ಅನ್ನ ಸಂತರ್ಪಣೆ ನಡೆಯುತ್ತದೆ.
ಶ್ರೀ ಮುನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಅಮ್ಮಸಾರ್ ದೇವಿ, ಶ್ರೀ ಅಂಗಾಳ ಪರಮೇಶ್ವರಿ ದೇವಿ ಹಾಗೂ ದ್ರೌಪದಿಯಮ್ಮ ದೇವಿ ವಿಗ್ರಹಗಳನ್ನು ಕಳೆದ ೧೦ ವರ್ಷಗಳ ಹಿಂದೆ ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸಲಾಗುತ್ತಿದೆ.
ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆಗಳು : ಸುಮಂಗಲಿ ಪೂಜೆ, ಕಳಸ ಪೂಜೆ, ಕಲಶಾಭಿಷೇಕ, ಬ್ರಹ್ಮ ಕಲಶಾಭಿಷೇಕ, ಶ್ರೀ ದುರ್ಗಾ ಹೋಮ, ಶ್ರೀ ರುದ್ರ ಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ, ತೀರ್ಥ-ಪ್ರಸಾದ, ಮಹಾ ಪ್ರಸಾದ ವಿನಿಯೋಗ ನಡೆಯುತ್ತದೆ.
ದೇವಸ್ಥಾನದ ಪದಾಧಿಕಾರಿಗಳು : ಎಂ. ಉಮೇಶ್ (ಅಧ್ಯಕ್ಷ), ಜ್ಯೋತಿ ಅರಳಪ್ಪ (ಉಪಾಧ್ಯಕ್ಷೆ), ಆರ್. ಶಿವಕುಮಾರ್ (ಕಾರ್ಯದರ್ಶಿ), ದಿಲೀಪ್ ಕುಮಾರ್ (ಸಹ ಕಾರ್ಯದರ್ಶಿ), ಆರ್. ಚಿತ್ರ (ಖಜಂಚಿ), ಆರ್. ಕುಮಾರ್, ಪ್ರವೀಣ್, ಎಸ್. ರಾಜೇಶ್, ಜ್ಯೋತಿ (ಸದಸ್ಯರು) ದೇವಸ್ಥಾನದ ಪದಾಧಿಕಾರಿಗಳಾಗಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿzರೆ.
ದೇವಸ್ಥಾನದ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳು : ಐತಿಹಾಸಿಕ ಪ್ರಸಿದ್ದಿ ಪಡೆದಿರುವ ಶ್ರೀ ಮುನೇಶ್ವರ ಸ್ವಾಮಿ ಹಾಗೂ ಶ್ರೀ ಅಮ್ಮಸಾರ್ ದೇವಿ ದೇವಸ್ಥಾನ, ಹೊಸಮನೆ ಬಡಾವಣೆ, (ಚಾನಲ್ ದಂಡೆ), ಶಿವಮೊಗ್ಗ – ೫೭೭೨೦೧. ಮೊ: ೯೯೭೨೩ ೮೦೦೧೮, ೯೬೬೩೫ ೧೨೩೨೪.
ವಿಶೇಷ ಲೇಖನ:ಮುರುಳೀಧರ್ ಹೆಚ್ ಸಿ ಪತ್ರಕರ್ತರು, ಶಿವಮೊಗ್ಗ..