ಶ್ರೀ ಕೃಷ್ಣನ ಭಗವದ್ಗೀತೆ ಸಾರ ಸರ್ವಕಾಲಿಕ ಶ್ರೇಷ್ಠ: ಕಬ್ಬೂರ
ಸವದತ್ತಿ: ಶ್ರೀ ಕೃಷ್ಣನ ಬಾಲ ಲೀಲೆಗಳು, ರಾಧೆಯೊಂದಿನ ಅವನ ಪ್ರೀತಿ ಪ್ರಸಂಗಗಳು, ದುಷ್ಟ ಸಂಹಾರಕ್ಕಾಗಿ ತಾಳಿದ ಅವತಾರ ಗಳು ಹಾಗೂ ಮಹಾಭಾರತ ಕುರುಕ್ಷೇತ್ರ ಯುದ್ದದಲ್ಲಿ ಧರ್ಮದ ಪರವಾಗಿ ನಿಂತ ಅವನ ನಿಲುವು ಇವೆಲ್ಲವೂ ಸಹ ಶ್ರೀ ಕೃಷ್ಣನನ್ನು ಪೂಜಿಸುವವರಿಗೆ ಆದರ್ಶಗಳಾಗಿವೆ,. ಅಷ್ಟೇ ಅಲ್ಲದೆ ಭಗವದ್ಗೀತೆಯ ಸಾರ ಸರ್ವಕಾಲಿಕ ಶ್ರೇಷ್ಠವಾದದ್ದು ಎಂಬುವ ಅಭಿಪ್ರಾಯವಿದೆ ಎಂದು ಶಿಕ್ಷಕ ಎನ್.ಎನ್. ಕಬ್ಬೂರ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಪಟ್ಟಣದ ಸ.ಕಿ.ಪ್ರಾ ಕನ್ನಡ ಶಾಲೆ ನಂ-೬ ಸವದತ್ತಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಶಾಲೆಯ ಮಕ್ಕಳು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಕ್ಕಳನ್ನು ಉದ್ದೇಶಿಸಿ ಅವರು ಮಾತನಾಡಿ ದರು. ಮಕ್ಕಳ ನಿಷ್ಕಲ್ಮಶವಾದ ಪ್ರೀತಿ ಹಾಗೂ ಅವರು ಬಳಸುವ ಭಾಷೆ ಎಲ್ಲವೂ ಸಹ ಶ್ರೀ ಕೃಷ್ಣನ ರೂಪದಲ್ಲಿ ನೋಡಲು ಪಾಲಕ ಪೋಷಕರು ಇಷ್ಟಪಡುತ್ತಾರೆ ಎಂದರು.
ನಂತರ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾ ದರು. ಕೆಲವು ಮಕ್ಕಳು ರಾಧೆಯ ವೇಷದಲ್ಲಿ ಸಂಭಾಷಣೆ ಮಾಡಿದರೆ, ಇನ್ನೂ ಕೆಲವು ಮಕ್ಕಳು ಕೃಷ್ಣನ ವೇಷಧಾರಿಯಾಗಿ ಕುಣಿದು ಕುಪ್ಪಳಿಸಿ ಉತ್ಸುಕತೆಯಿಂದ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಎಮ್.ಆರ್.ಫಂಡಿ, ಶಾಲೆಯ ಅಡುಗೆ ಸಿಬ್ಬಂದಿಯವರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪಾಲಕರು ಇದ್ದರು.