ತಾಜಾ ಸುದ್ದಿಲೇಖನಗಳು

ಭಕ್ತಿ ಸಂಚಲನವನನು ಉಂಟುಮಾಡುವ ಕಂದಿ ಕುಪ್ಪಂನ ಶ್ರೀ ಕಾಲಭೈರವ ಸ್ವಾಮಿ ದೇವಾಲಯ…

Share Below Link

ಮಾರ್ಪಳ್ಳಿ ಆರ್ ಮಂಜುನಾಥ್
ನಮ್ಮ ಭಾರತ ದೇಶವೇ ಸನಾತನ ಧರ್ಮದ ದೇವಾಲಯದ ತೊಟ್ಟಿಲು. ಎಲ್ಲಿ ನೋಡಿದರಲ್ಲಿ ಪ್ರಾಚೀನ ದೇವಾಲಯಗಳಿಂದ ಹಿಡಿದು ಇಂದಿನ ನವ ನಾವೀನ್ಯತೆ ಯಿಂದ ಕಂಗೊಳಿಸುವ ದೇವಾಲಯಗಳು ಭಕ್ತಿಯ ಸಂಚಲನವನ್ನು ಉಂಟು ಮಾಡಿ ಸದಾ ಜನರಲ್ಲಿ ಧಾರ್ಮಿಕ ಜಗೃತಿ ಉಂಟುಮಾಡುತ್ತಿವೆ .
ತಮಿಳುನಾಡಿನ ಕೃಷ್ಣಗಿರಿಯ ಹತ್ತಿರವಿರುವ ಕಂದಿಕುಪ್ಪಂ ನಲ್ಲಿರುವ ಶ್ರೀ ಕಾಲಭೈರವಸ್ವಾಮಿ ದೇವಾಲಯವು ಜನಸಾಮಾನ್ಯ ರಲ್ಲಿ ಭಕ್ತಿಯನ್ನು ಜಾಗೃತಗೊಳಿಸುವ ಕಾರ್ಯವನ್ನು ಭೈರವ ನಿಲಯಂ ಆಶ್ರಮವು ಮಾಡುತ್ತಾ ಬಂದಿದೆ.ಶ್ರೀ ಕಾಲಭೈರವ ಸ್ವಾಮಿ ದೇವಾಲಯವು ನವ ನವೀನ್ಯದಿಂದ ನಿರ್ಮಾಣ ಗೊಂಡು ಗುಡ್ಡ ಬೆಟ್ಟಗಳ ನಡುವೆ ಇರುವ ಸುಂದರ ದೇವಾಲಯವಾಗಿದೆ .
ಬೆಂಗಳೂರಿನಿಂದ ಹೊಸೂರು ಮಾರ್ಗವಾಗಿ ಕೃಷ್ಣಗಿರಿಯ ಹತ್ತಿರ ವಿರುವ ಪಲೆಪಲ್ಲಿಯ ಕಂದಿ ಕುಪ್ಪಂ ಗೆ ೧೨೦ ಕಿಲೋಮೀಟರ್ ದೂರ ವಿದೆ. ಪ್ರಕೃತಿಯ ಸೌಂದರ್ಯವೇ ನೆಲೆಯೂರಿದ ಈ ಸಾನಿಧ್ಯದಲ್ಲಿ ಸೆಂಥಿಲ್ ಸ್ವಾಮಿ ಯವರ ನೇತೃತ್ವ ದಲ್ಲಿ ಶ್ರೀ ಕಾಲಭೈರವ ಸ್ವಾಮಿ ದೇವಳ ನಿರ್ಮಾಣಗೊಂಡಿದೆ.


ಕಾಲಭೈರವ ಸ್ವಾಮಿಯು ಪ್ರಧಾನ ಹೆಸರಿನ ದೇವಾಲದ ಸ್ಥಳವಾಗಿದ್ದರೂ ಇಲ್ಲಿಗೆ ಬಂದಾಗ ಮೊದಲು ಕಾಣುವುದೇ ಎತ್ತರ ವಾದ ಧ್ವಜಸ್ಥಂಭ, ನಂದಿಯ ವಿಗ್ರಹ ಅದರ ಮುಂದೆ ಎತ್ತರವಾದ ದೇವಾಲಯದ ಪ್ರಾಂಗಣ ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಇದರ ಕೆಳಗೆ ಎದುರಿನಲ್ಲಿ ಪ್ರಾಂಗಣದಲ್ಲಿ ಅಮೃತಶಿಲೆಯ ಶಿವಲಿಂಗವಿದೆ. ಗರ್ಭಗುಡಿಯ ಎಡಭಾಗದಲ್ಲಿ ದೇವಿಯ ಸಾನಿಧ್ಯ ವಿದೆ. ಇಲ್ಲಿನ ವಿಶೇಷವೆಂದರೆ ತಮಿಳಿನಲ್ಲಿ ಶಿವನಿಗೆ ಮತ್ತು ಶಿವನ ಪತ್ನಿ ಪಾರ್ವತಿಗೆ ಭಕ್ತಿಯ ಗೀತೆಗಳ ಮೂಲಕ ಹಾಡಿ ಭಜಿಸಿ ಪೂಜಿಸುವ ಕ್ರಮವಿದೆ. ಭಕ್ತಿ ಗೀತೆಗಳನ್ನು ಇಲ್ಲಿ ಕೇಳುತ್ತಲಿದ್ದರೆ ಬಂದಂತಹ ಭಕ್ತಾದಿಗಳ ಮೈಮನಗಳು ರೋಮಾಂಚನಗೊಳ್ಳುತ್ತದೆ. ಭಕ್ತಿ ಸಂಚಲನವಾಗುತ್ತದೆ.
ಪ್ರಮುಖ ದೇವಾಲಯದ ಪಕ್ಕದಲ್ಲಿಯೇ ಕಾಲಭೈರವ ಸ್ವಾಮಿಯ ದೇವಾಲಯವಿದೆ. ಸುಂದರವಾದ ಕೆತ್ತನೆಯ ಕಲ್ಲಿನ ಕಂಬಗಳು ಹಾಗೂ ವಾಸ್ತುಶಿಲ್ಪವು ಶಿಲ್ಪಕಲೆಗೆ ಸಾಕ್ಷಿಯಾಗಿದೆ. ಗರ್ಭ ಗುಡಿಯಲ್ಲಿ ಕಾಲಭೈರವ ಸ್ವಾಮಿಯ ಮೂರ್ತಿಯು ಅತ್ಯಂತ ಮನಮೋಹಕ ಹಾಗೂ ಸುಂದರ ವಾಗಿದ್ದು ಭಕ್ತರ ಮನಸ್ಸನ್ನು ಸೆಳೆಯುವಂತಿದೆ. ಕಾಲಭೈರವನ ವಾಹನ ಶ್ವಾನ ಅಂದರೇ ನಾಯಿಯಾಗಿದ್ದು ಇಲ್ಲಿ ನಾಯಿಯ ವಿಗ್ರಹಗಳು ಮನಸೆಳೆಯುತ್ತದೆ. ನಾಯಿಗಳು ಇಲ್ಲಿ ಸ್ವಚ್ಛಂದವಾಗಿ ಎಡೆ ಓಡಾಡುವ ಸ್ವಾತಂತ್ರ್ಯ ಪಡೆದಿದೆ .
ದೇವಾಲಯದ ಆವರಣದಲ್ಲಿ ಗಣಪತಿಯ ಗುಡಿ ಇದೆ. ಗಣಪತಿ ಯ ಮೂರ್ತಿಯು ಭಕ್ತಾದಿಗಳ ಮನವನ್ನು ಸೆಳೆಯುತ್ತದೆ. ಸನಿಹದಲ್ಲಿ ಸುಬ್ರಮಣ್ಯ ಸ್ವಾಮಿಯ ಗುಡಿ ಇದೆ. ಸುಬ್ರಹ್ಮಣ್ಯ ಸ್ವಾಮಿಯನ್ನು ಮುರುಗ ಎಂದು ಕರೆಯಲಾಗಿದ್ದು ಇಲ್ಲಿ ನಿಂತು ಹೊರನೋಡಿದರೆ ದೂರ ದಲ್ಲಿ ಕಾಣುವ ಶಿವಗಿರಿಯ ಬೆಟ್ಟ, ಮತ್ತು ಸುತ್ತಲೂ ಇರುವ ಇತರೆ ಬೆಟ್ಟಗಳು ಆವರಣದಲ್ಲಿನ ಅರಳೀ ವೃಕ್ಷ ಅದರ ಕೆಳಗೆ ಶಿವಲಿಂಗಕ್ಕೆ ಮಾಡುವ ಅಭೀಷೇಕ ದಕ್ಷಿಣೇಶ್ವರ ವಿಗ್ರಹ ಹಾಗೂ ನಾಗರದೇವರ ಸುಂದರ ಕಲ್ಲುಗಳು ಇಡೀ ಪ್ರದೇಶವೇ ದೈವ ಸಾನಿಧ್ಯದ ಪರವಶತೆಯನ್ನು ಸೃಷ್ಟಿ ಮಾಡುತ್ತದೆ.
ಇಲ್ಲಿನ ಮತ್ತೊಂದು ವಿಶೇಷ ವೆಂದರೆ ವರಾಹ ದೇವಿಯ ಸುಂದರವಾದ ಪುಟ್ಟ ಗುಡಿಯಿದೆ. ಸಾಮಾನ್ಯವಾಗಿ ವರಹ ಸ್ವಾಮಿಯ ಮೂರ್ತಿಯನ್ನುನಾವು ಎಡೆ ನೋಡುತಲಿದ್ದರೆ ಇಲ್ಲಿ ಸ್ತ್ರೀ ರೂಪದ ವರಾಹ ದೇವಿಯ ಮೂರ್ತಿಯನ್ನು ಕಾಣಬಹುದಾಗಿದೆ.
ಈ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಅನೇಕಾನೇಕ ದೇವತೆಗಳ ಸಾಧುಸಂತರ ವಿಗ್ರಗಳ ದರ್ಶನ ಮಾಡಬಹುದಾಗಿದೆ. ವರ್ಷವಿಡೀ ಇಲ್ಲಿ ಬಂದಂತಹ ಭಕ್ತರುಗಳಿಗೆ ಅನ್ನದಾಸೋಹ ಮತ್ತು ಸ್ವಚ್ಛತೆಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ.
ಶ್ರೀ ಕಾಲಭೈರವ ಸ್ವಾಮಿ ದೇವಾಲಯವನ್ನು ಸರ್ವತೋಮುಖವಾಗಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಆಶ್ರಮದ ಭೈರವ ಸ್ವಾಮಿ ಎಂದೇ ಖ್ಯಾತಿ ಪಡೆದ ಸೆಂಥಿಲ್ ಸ್ವಾಮಿ ಇವರ ಅವಿರತ ಸೇವೆ ಮಾರ್ಗದರ್ಶನ ಹಾಗೂ ಇವರು ತಮಿಳು ಭಾಷೆಯ ಭಕ್ತಿ ಕೀರ್ತನೆ ಹಾಡುಗಳ ಮೂಲಕ ಹಾಡುವ ರೀತಿಯು ಇಡೀ ಭಕ್ತ ವೃಂದದ ಮನಸ್ಸುನ್ನು ಭಕ್ತಿ ಪಥಕ್ಕೆ ಸೆಳೆಯುತ್ತಾರೆ ಎಂಬುದು ಭಕ್ತರ ಅಭಿಪ್ರಾಯ. ಅಲ್ಲದೇ ಸಾಮಾಜಿಕ ಹಾಗೂಜನಹಿತ ಕಾರ್ಯಕ್ಕಾಗಿ ಈ ಸ್ವಾಮೀಜಿಯವರ ಸೇವಾಕಾರ್ಯ ನಿರಂತವಾಗಿ ಸಾಗುತ್ತಿದೆ.
ಅಮಾವಾಸ್ಯೆ, ಭಾನುವಾರ, ದಿನಳಲ್ಲಿ ಜತ್ರೆಯಲ್ಲಿ ಇಲ್ಲಿಗೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಪ್ರಕೃತಿಯ ಸಾನಿಧ್ಯದಲ್ಲಿ ದೇವರ ದರ್ಶನ ಪಡೆದು ಕೃತಾರ್ಥ ರಾಗುತ್ತಾರೆ. ಜೊತೆಗೆ ಶಾಂತಿ ನೆಮ್ಮದಿಯನ್ನು ಪಡೆಯುತ್ತಾರೆ.