ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಓದಿನ ಜೊತೆಗೆ ಕ್ರೀಡೆಗೂ ಹೆಚ್ಚು ಒತ್ತು ಕೊಟ್ಟಾಗ ಕ್ರೀಡೆ ಬೆಳೆಯಲು ಸಾಧ್ಯ…

Share Below Link

ಶಿವಮೊಗ್ಗ: ಕ್ರೀಡೆಯಿಂದ ಶಿಸ್ತು, ಏಕಾಗ್ರತೆ ಬೆಳೆಯುವುದು ಎಂದು ಮಂಟ್ ಕಾರ್ಮೆಲ್ ಎಜುಕೇಶನ್ ಸೊಸೈಟಿ, ಕಾರ್ಯದರ್ಶಿ ಕ್ಲಿಫರ್ಡ್ ರೋಷನ್ ಪಿಂಟೊ ಕ್ರೀಡಾಪಟುಗಳಿಗೆ ತಿಳಿಸಿದರು.
ಅವರು ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾ ಧಿಕಾರಿಗಳ ಕಚೇರಿ, ಶಿವಮೊಗ್ಗ ಹಾಗೂ ಇನ್ ಫೆಂಟ್ ಜೀಸಸ್ ಶಾಲೆ, ಶರಾವತಿ ನಗರ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಎರಡು ದಿನ ಆಯೋ ಜಿಸಿದ್ದ ೧೪ ವರ್ಷ ವಯೋಮಿತಿ ಯೊಳಗಿನ ಸಿ ಮತ್ತು ಡಿ ಬಾಲಕ ಮತ್ತು ಬಾಲಕಿಯರ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಓದಿನ ಜೊತೆಗೆ ಕ್ರೀಡೆಗೂ ಹೆಚ್ಚು ಒತ್ತು ಕೊಟ್ಟಾಗ ಕ್ರೀಡೆ ಬೆಳೆಯಲು ಸಾಧ್ಯವಾಗುತ್ತದೆ.


ಕ್ರೀಡೆಯಲ್ಲಿ ಕ್ರೀಡಾ ಮನೋ ಭಾವದಿಂದ ಭಾಗವಹಿಸಿ, ಸೋಲು – ಗೆಲುವನ್ನು ಸಮಾನವಾಗಿ ಸ್ವೀಕರಿಸಿ,ನಿರಂತರ ಅಭ್ಯಾಸದಿಂದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕ್ರೀಡಾಪಟುಗಳಿಗೆ ಕರೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆಯ ತಾಲೂಕು ದೈಹಿಕ ಶಿಕ್ಷಣ ಅಧಿಕಾರಿಗಳಾದ ಚಂದ್ರಕಾಂತ್ . ಧ್ವಜ ರೋಹಣ ನೆರವೇರಿಸಿ ಮಾತನಾ ಡಿದ ಅವರು,ಮನಸ್ಸು ಮತ್ತು ದೇಹದ ಬೆಳವಣಿಗೆಯು ಸಮಾನ ವಾಗಿ ಬೆಳೆಯಲು ಕ್ರೀಡೆ ಸಹಕಾರಿ ಎಂಬುದು ನಮಗೆಲ್ಲರಿಗೂ ತಿಳಿ ದಿದೆ.
ಆಟಗಳು ಮತ್ತು ಕ್ರೀಡೆಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ, ಅದಕ್ಕಾಗಿಯೇ ದೈಹಿಕ ತರಬೇತಿ, ವ್ಯಾಯಾಮ ಮತ್ತು ಆಟಗಳಿಲ್ಲದೆ – ಶಿಕ್ಷಣವು ಅಪೂರ್ಣವಾಗಿರುತ್ತದೆ. ಅಲ್ಲದೆ, ಶಿಕ್ಷಣದ ಜೊತೆಗೆ, ಆಟಗಳು ಸಹ ನಮ್ಮೆಲ್ಲರನ್ನೂ ಎದ್ದು ನಿಲ್ಲಲು ಮತ್ತು ಜೀವನದ ಎ ಕಠಿಣ ಸವಾಲುಗಳನ್ನು ಎದುರಿಸಲು ಸಿದ್ಧಗೊಳಿಸುತ್ತವೆ. ಆಟಗಳನ್ನು ಆಡುವಾಗ, ವಿದ್ಯಾರ್ಥಿಗಳು ಆಮ್ಲ ಜನಕದ ಉತ್ತಮ ಸೇವನೆಯನ್ನು ತೆಗೆದುಕೊಳ್ಳುತ್ತಾರೆ, ಅವರ ರಕ್ತ ಪರಿಚಲನೆ ಹೆಚ್ಚಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಜಿ ದೈಹಿಕ ಶಿಕ್ಷಣ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಾ. ಹ.ತಿಮ್ಮೇನಹಳ್ಳಿ ಮಾತನಾಡಿ,ಕ್ರೀಡಾಪಟುಗಳಲ್ಲಿ ಗೆz ಗೆಲ್ಲುತ್ತೇವೆ ಎಂಬ ಸಂಕಲ್ಪ ಇರಬೇಕು. ಸತತ ಪ್ರಯತ್ನದಿಂದ ಜೀವನವನ್ನು ಹಾಗೂ ಕ್ರೀಡೆಗಳಲ್ಲಿ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂದರು.
ಕಾರ್‍ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿಯಾದ ಸಿಸ್ಟರ್ ಫಿಲೋಮಿನಾ, ಜಿ ಸಂಘದ ಕಾರ್‍ಯದರ್ಶಿ ಕೆ.ಜಿ.ಮಠಪತಿ, ತಾಲೂಕು ಸಂಘದ ಕಾರ್‍ಯದರ್ಶಿ , ತೇಜಸ್ ಕುಮಾರ್,ಕ್ರೀಡಾ ಕಾರ್‍ಯ ದರ್ಶಿ ಸುರೇಸ್ ಉಪಸ್ಥಿತರಿದ್ದರು.