ಜಿಲ್ಲಾ ಸುದ್ದಿತಾಜಾ ಸುದ್ದಿ

ಶ್ರೀ ಕಾಲಭೈರವೇಶ್ವರ ದೇವಳದಲ್ಲಿ ವಿಶೇಷ ಪೂಜೆ…

Share Below Link

ಶಿವಮೊಗ್ಗ : ಶರಾವತಿ ನಗರದ ಶ್ರೀ ಆದಿಚುಂಚ ನಗಿರಿ ಮಹಾ ಸಂಸ್ಥಾನ ಮಠದಲ್ಲಿ ಫೆ. ೨೬ರಂದು ಪೂಜ್ಯಶ್ರೀ ಪ್ರಸನ್ನ ನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಭಜನಾ ಪರಿಷತ್ ಮತ್ತು ನಗರದ ಎಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಸಹ ಯೋಗದಲ್ಲಿ ಅಖಂಡ ಭಜನೆ ಯನ್ನು ಏರ್ಪಡಿಸಲಾಗಿದೆ.
ಫೆ.೨೬ರ ಬೆಳಿಗ್ಗೆ ಶರಾವತಿ ನಗರದ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ ಮತ್ತು ಅಂದು ಸಂಜೆ ೬ಕ್ಕೆ ಜಲಾಭಿಷೇಕ, ಕ್ಷೀರಾಭಿಷೇಕ. ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಜರುಗಲಿದ್ದು, ರಾತ್ರಿ ೧೦ರಿಂದ ರುದ್ರಾಭಿಷೇಕ, ರಾತ್ರಿ ೧೧:೩೦ಕ್ಕೆ ಮಹಾಮಂಗಳಾರತಿ ಹಾಗೂ ರಾತ್ರಿ ೧ ಗಂಟೆಗೆ ರುದ್ರಾಭಿ ಷೇಕ, ರಾತ್ರಿ ೨.೩೦ ಗಂಟೆಗೆ ಮಹಾ ಮಂಗಳಾರತಿ ಇರುತ್ತದೆ.
ಅಂದು ಮಧ್ಯರಾತ್ರಿ ೩ಗಂಟೆಗೆ ರುದ್ರಾಭಿಷೇಕ, ಬೆಳಿಗ್ಗೆ ೪:೩೦ ಗಂಟೆಗೆ ಮಹಾಮಂಗಳಾರತಿ ಹಾಗೂ ಫೆ. ೨೭ರ ಗುರುವಾರ ಬೆಳಿಗ್ಗೆ ೫ ಗಂಟೆಗೆ ರುದ್ರಾಭಿಷೇಕ, ಬೆಳಗೆ ೬ ಗಂಟೆಗೆ ಅಖಂಡ ಭಜನೆ ಸಮಾರೋಪ, ೬:೧೫ಕ್ಕೆ ಮಹಾ ಮಂಗಳಾರತಿ ನಡೆಯುವುದು. ದೇವರಿಗೆ ರುದ್ರಾಭಿಷೇಕ, ಬಿಲ್ವಪತ್ರೆ, ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗುವುದು.
ಈ ಪೂಜಾ ಕಾರ್ಯಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ದೇವರ ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ.