ರಾಷ್ಟ್ರ ನಿರ್ಮಾಣಕ್ಕೆ ರಾಜಕೀಯ ವೈಷಮ್ಯವಲ್ಲ ಸಾಮಾಜಿಕ ಏಕತೆಯೇ ಮೂಲ ಸೂತ್ರ…
ಲೇಖನ: ಡಾ. ಮಂಜುನಾಥ ಜಿ. ಪಾಲವ್ವನಹಳ್ಳಿ, ಚಿತ್ರದುರ್ಗ.
ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಪ್ರಜಪ್ರಭುತ್ವವು ಯಶಸ್ವಿಯಾಗಿ ಸಾಗಬೇಕಾದರೆ ರಾಜಕೀಯ ಪಕ್ಷಗಳು ಜವಾಬ್ದಾರಿ ಯುತವಾಗಿ ವರ್ತಿಸಬೇಕು.
ರಾಜಕೀಯ ಪಕ್ಷಗಳು ದೇಶದ ಮತ್ತು ರಾಜ್ಯದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಕೆಲವು ದಶಕಗಳ ಹಿಂದೆ ಪಕ್ಷಗಳ ಆಡಳಿತಾವಧಿಯಲ್ಲಿ ಶಿಕ್ಷಣ, ಆರ್ಥಿಕತೆ, ಸಾಮಾಜಿಕ ನ್ಯಾಯ ಮತ್ತು ಗ್ರಾಮೀಣಾಭಿವೃದ್ಧಿ ಸೇರಿ ದಂತೆ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆಗಳಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯ ಚರ್ಚೆ ಗಳಿಗಿಂತ ರಾಜಕೀಯ ಆರೋಪ- ಪ್ರತ್ಯಾರೋಪ, ವೈಯಕ್ತಿಕ ಟೀಕೆಗಳು ಹಾಗೂ ಅಧಿಕಾರದ ಕಾದಾಟವೇ ಹೆಚ್ಚಾಗಿ ಕಾಣಿಸುತ್ತಿರುವುದು ಸಮಾಜದ ದೃಷ್ಟಿಯಿಂದ ಆತಂಕಕಾರಿ ಬೆಳವಣಿಗೆಯಾಗಿದೆ.
ರಾಜಕೀಯ ಎಂದರೆ ಜನಸೇವೆಯ ಸಾಧನವಾಗಬೇಕೇ ಹೊರತು, ಸ್ವಾರ್ಥಸಾಧನೆಯ ವೇದಿಕೆಯಾಗ ಬಾರದು. ಜನರು ಮತ ನೀಡಿ ಆಯ್ಕೆ ಮಾಡಿದ ಪ್ರತಿನಿಧಿಗಳು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಮರೆತು, ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸ ಬೇಕಾಗಿದೆ. ರಾಜಕೀಯ ಪಕ್ಷಗಳ ನಡುವೆ ನಡೆಯುತ್ತಿರುವ ನಿರಂತರ ರಾಜಕೀಯ ಜಗಳಗಳು ಆಡಳಿತ ಯಂತ್ರದ ಕಾರ್ಯ ಕ್ಷಮತೆ ಕುಗ್ಗಿಸುತ್ತಿವೆ. ಇದರಿಂದ ನೀತಿ ನಿರ್ಣಯಗಳು ವಿಳಂಬವಾಗುತ್ತಿವೆ, ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಳ್ಳುತ್ತಿವೆ ಮತ್ತು ಅದರ ನಷ್ಟ ಅನುಭವಿಸುವವರು ಸಾಮಾನ್ಯ ನಾಗರಿಕರೇ ಆಗಿzರೆ.
ಇಂದಿನ ಸಮಾಜ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ನಿರುದ್ಯೋಗ ಸಮಸ್ಯೆ ಯುವಕರಲ್ಲಿ ಹತಾಶೆ ಮೂಡಿಸುತ್ತಿದೆ; ರೈತರ ಬೆಳೆಗೆ ಸರಿಯಾದ ಬೆಂಬಲ ಬೆಲೆ ದೊರಕದೇ, ರೈತರು ಸಾಲದ ಸುಳಿಯಲ್ಲಿ ಸಿಲುಕಿzರೆ ಮತ್ತು ಹವಾಮಾನ ಬದಲಾವಣೆಯ ಹೊಡೆತಕ್ಕೆ ತತ್ತರಿಸುತ್ತಿzರೆ; ಶಿಕ್ಷಣ ದುಬಾರಿಯಾಗು ತ್ತಿದ್ದು, ಗುಣಮಟ್ಟದ ಆರೋಗ್ಯ ಸೇವೆಗಳು ಎಲ್ಲರಿಗೂ ಲಭ್ಯವಾಗುತ್ತಿಲ್ಲ. ಮಹಿಳೆ ಯರು, ದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು ಇನ್ನೂ ಸಮಾನ ಅವಕಾಶಗಳಿಗಾಗಿ ಹೋರಾಡುತ್ತಿzರೆ. ಇಂತಹ ಗಂಭೀರ ಸಮಸ್ಯೆಗಳ ಸಮಯದಲ್ಲಿ ರಾಜಕೀಯ ಪಕ್ಷಗಳು ಪರಸ್ಪರ ದೋಷಾರೋಪಣೆ ಮಾಡುವುದಕ್ಕೆ ಕಾಲ ವ್ಯರ್ಥ ಮಾಡದೆ, ಒಟ್ಟಾಗಿ ಪರಿಹಾರ ಹುಡುಕಬೇಕಾಗಿದೆ.
ವಿಭಜನೆಯ ರಾಜಕಾರಣ ಸಮಾಜ ವನ್ನು ದುರ್ಬಲ ಗೊಳಿಸುವ ಅತ್ಯಂತ ಅಪಾಯಕಾರಿ ಅಸ್ತ್ರವಾಗಿದೆ. ಜಾತಿ, ಧರ್ಮ, ಭಾಷೆ ಮತ್ತು ಪ್ರಾದೇಶಿಕ ಭಾವನೆ ಗಳನ್ನು ರಾಜಕೀಯ ಲಾಭಕ್ಕಾಗಿ ಬಳಸು ವುದು ತಾತ್ಕಾಲಿಕವಾಗಿ ಮತಗಳನ್ನು ತಂದುಕೊಡಬಹುದು, ಆದರೆ ದೀರ್ಘಾ ವಧಿಯಲ್ಲಿ ಸಮಾಜದ ಅಡಿಪಾಯಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ. ಒಮ್ಮೆ ಬಿತ್ತಿದ ದ್ವೇಷದ ಬೀಜಗಳು ಪೀಳಿಗೆಯಿಂದ ಪೀಳಿಗೆಗೆ ಹರಡುತ್ತವೆ. ಆದ್ದರಿಂದ ಎಲ್ಲ ಪಕ್ಷಗಳೂ ತಮ್ಮ ರಾಜಕೀಯ ಲಾಭಕ್ಕಿಂತ ದೇಶದ ಏಕತೆ ಮತ್ತು ಸಾಮಾಜಿಕ ಸೌಹಾರ್ದಕ್ಕೆ ಆದ್ಯತೆ ನೀಡಬೇಕಾಗಿದೆ.
ಒಗ್ಗಟ್ಟಿನ ಸಮಾಜ ಎಂದರೆ ಎಲ್ಲರೂ ಒಂದೇ ರೀತಿಯಲ್ಲಿ ಯೋಚಿಸಬೇಕು ಎಂಬ ಅರ್ಥ ವಲ್ಲ. ಭಿನ್ನಾಭಿಪ್ರಾಯಗಳು, ವಾದ- ಪ್ರತಿವಾದಗಳು ಪ್ರಜಪ್ರಭುತ್ವದ ಜೀವಾಳವೇ ಆಗಿವೆ, ಆದರೆ ಬೇರೆ ಬೇರೆ ಅಭಿಪ್ರಾಯಗಳನ್ನು ಶಾಂತಿ ಯುತ ಸಂವಾದದಲ್ಲಿ ವ್ಯಕ್ತಪಡಿಸುವುದು ಮುಖ್ಯ. ಗದ್ದಲ ಮತ್ತು ಘೋಷಣೆಗಳ ಬದಲು, ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಅರ್ಥಪೂರ್ಣ ಚರ್ಚೆಗಳು ನಡೆಯ ಬೇಕು. ವಿರೋಧ ಪಕ್ಷಗಳು ಕೇವಲ ಟೀಕೆಗೆ ಸೀಮಿತವಾಗದೆ, ಸಕಾರಾತ್ಮಕ ಸಲಹೆಗಳನ್ನು ನೀಡಬೇಕು; ಆಡಳಿತ ಪಕ್ಷಗಳು ವಿರೋಧ ಪಕ್ಷಗಳ ಅಭಿಪ್ರಾಯಗಳಿಗೆ ಗೌರವ ನೀಡಬೇಕು.
ರಾಜಕೀಯ ನಾಯಕರು ಸಮಾಜಕ್ಕೆ ಮಾದರಿಯಾಗಬೇಕು. ಅವರ ಭಾಷೆ, ವರ್ತನೆ ಮತ್ತು ನಿರ್ಧಾರಗಳು ಸಮಾಜದ ಮೇಲೆ ನೇರ ಪರಿಣಾಮ ಬೀರುತ್ತವೆ. ಜವಾಬ್ದಾರಿಯಿಲ್ಲದ ಮಾತುಗಳು ಸಮಾಜ ದಲ್ಲಿ ಉದ್ವಿಗ್ನತೆ ಹುಟ್ಟಿಸು ತ್ತವೆ. ಆದ್ದರಿಂದ ನಾಯಕರು ಮಾತಿನ ಜವಾಬ್ದಾರಿಯನ್ನು ಅರಿತು, ಶಾಂತಿ, ಸಹಕಾರ ಮತ್ತು ಮಾನವೀಯ ಮಲ್ಯಗಳನ್ನು ಉತ್ತೇಜಿ ಸುವ ರೀತಿಯಲ್ಲಿ ನಡೆದು ಕೊಳ್ಳಬೇಕು. ರಾಜಕೀಯದಲ್ಲಿ ಶತ್ರುತ್ವವಲ್ಲ, ಸ್ಪರ್ಧಾತ್ಮಕ ಸಹಕಾರದ ಮನೋಭಾವ ಬೆಳೆಯಬೇಕಾಗಿದೆ.
ಮಾಧ್ಯಮಗಳಿಗೂ ಇಲ್ಲಿ ಮಹತ್ವದ ಪಾತ್ರವಿದೆ. ರಾಜಕೀಯ ಜಗಳಗಳನ್ನು ಅತಿರಂಜಿತವಾಗಿ ಪ್ರದರ್ಶಿಸುವ ಬದಲು, ಜನಪರ ವಿಚಾರಗಳು, ಅಭಿವೃದ್ಧಿ ಯೋಜನೆಗಳ ವಿಶ್ಲೇಷಣೆ ಮತ್ತು ನೀತಿ ಚರ್ಚೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಜಗೃತ ನಾಗರಿಕರೂ ಸಹ ಪಕ್ಷಾತೀತವಾಗಿ ಯೋಚಿಸಿ, ಪ್ರಶ್ನಿಸುವ ಮನೋಭಾವ ಬೆಳೆಸಬೇಕು.
ಅಂತಿಮವಾಗಿ, ರಾಜಕೀಯ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳು ಪ್ರಜಪ್ರಭುತ್ವದ ವ್ಯಾಪ್ತಿ ಯಲ್ಲಿಯೇ ಇರಬೇಕು; ಅವು ಸಮಾಜವನ್ನು ವಿಭಜಿಸುವ ಮಟ್ಟಕ್ಕೆ ತಲುಪಬಾರದು. ರಾಜಕೀಯ ಪಕ್ಷಗಳು ಪರಸ್ಪರ ವಿರೋಧಿಗಳಾಗಿರಬಹುದು, ಆದರೆ ದೇಶ ಮತ್ತು ಸಮಾಜ ನಿರ್ಮಾಣದಲ್ಲಿ ಸಂಘಟಿತವಾಗಿ ಮುಂದೆ ಸಾಗಬೇಕು. ಒಗ್ಗಟ್ಟಿನ ಚಿಂತನೆ, ಪರಸ್ಪರ ಗೌರವ ಮತ್ತು ಜನಪರ ಕಾರ್ಯಗಳಿಂದ ಮಾತ್ರ ಶಾಂತಿ, ಸಮಾನತೆ ಮತ್ತು ಸಮೃದ್ಧ ಸಮಾಜವನ್ನು ನಿರ್ಮಿಸಲು ಸಾಧ್ಯ. ರಾಜಕೀಯದ ಅಂತಿಮ ಗುರಿ ಅಧಿಕಾರವಲ್ಲ, ಅಧಿಕಾರಕ್ಕಿಂತ ಮಾನವೀಯ ಮಲ್ಯಗಳಿಗೆ ಆದ್ಯತೆ ನೀಡುವ ರಾಜಕೀಯ ಸಂಸ್ಕೃತಿಯೇ ಬಲಿಷ್ಠ ಮತ್ತು ಒಗ್ಗಟ್ಟಿನ ಭಾರತವನ್ನು ರೂಪಿಸಬಲ್ಲದು.
