ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಅಕ್ಷರ ಜ್ಞಾನದಿಂದ ಮಾತ್ರ ಸಾಮಾಜಿಕ ಕ್ರಾಂತಿ ಸಾಧ್ಯ…

Share Below Link

ಶಿಕಾರಿಪುರ: ದೇವಸ್ಥಾನದಲ್ಲಿನ ಗಂಟೆಗಳಿಗಿಂತ ಹೆಚ್ಚಾಗಿ ಶಾಲೆಯ ಗಂಟೆಗಳು ಮೊಳಗಬೇಕು, ಅಕ್ಷರ eನದಿಂದ ಮಾತ್ರ ಸಾಮಾಜಿಕ ಕ್ರಾಂತಿ ಸಾಧ್ಯ ಎಂದು ಡಾ. ಅಂಬೇಡ್ಕರ್ ಪ್ರತಿಪಾ ದಿಸಿದ್ದು ಅವರ ಮಾತು ಇಂದು ಹೆಚ್ಚು ಪ್ರಸ್ತುತವಾಗಿದೆ ಎಂದು ಕನಕ ಗುರು ಪೀಠ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಹೇಳಿದರು.
ತಾಲೂಕಿನ ಚನ್ನಹಳ್ಳಿ ಗ್ರಾಮ ದಲ್ಲಿ ಶ್ರೀ ಮಾರಿಕಾಂಬ ದೇವಸ್ಥಾನದ ಕಳಸಾರೋಹಣವನ್ನು ನೆರವೇರಿಸಿ ನಂತರದಲ್ಲಿ ನಡೆದ ಧರ್ಮಸಭೆಯಲ್ಲಿ ಅವರು ಭಕ್ತವರ್ಗವನ್ನು ಆಶೀರ್ವದಿಸಿ ಸಂದೇಶ ನೀಡಿದರು.


ಮಾರಿಕಾಂಬ ದೇವಿಯು ಎಂದೂ ಬಲಿ ಕೇಳುವುದಿಲ್ಲ. ಅವಳಿಗೆ ಬಲಿ ಕೊಡಲೇಬೇಕು ಎಂದರೆ ನಮ್ಮೊಳಗಿನ ದುರ್ಗುಣ ಗಳನ್ನು, ದುಶ್ಚಟಗಳನ್ನು ದೇವರಿಗೆ ಬಲಿ ಕೊಡೋಣ ಎಂದರು.
ಗ್ರಾಮಗಳಲ್ಲಿ ಮಾರಿ ಹಬ್ಬಗಳನ್ನು ದುಂದು ವೆಚ್ಚ ಮಾಡಿ ಮಾಡಬೇಡಿ. ಸಾಲಗಾರರಾಗಬೇಡಿ ದೇವಿಯು ಎಂದೂ ಬಲಿ ಕೇಳುವು ದಿಲ್ಲ ಹಿಂದುಳಿದ ಸಮುದಾಯ ಗಳು ಸಾಲಮಾಡಿ, ಮಾರಿ ಹಬ್ಬಗಳನ್ನು, ಬೀಗರೂಟಗಳನ್ನು ಮಾಡಿ ಆರ್ಥಿಕವಾಗಿ ದುರ್ಬಲ ರಾಗುತ್ತಿzರೆ, ಅದರ ಬದಲಿಗೆ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಪ್ರeವಂತರನ್ನಾಗಿ ಮಾಡಿ ಅವರನ್ನೇ ಆಸ್ತಿಯನ್ನಾಗಿ ಮಾಡಿ ಎಂದರು.
ಹೆಣ್ಣು ಮಕ್ಕಳು ಎಂದು ಮೂಗು ಮುರಿಯದೆ ಅವರಿಗೂ ಉತ್ತಮ ಮತ್ತು ಉನ್ನತ ಶಿಕ್ಷಣವನ್ನು ಕೊಡಿಸಿ ಇಂದಿನ ನಾಗರಿಕ ಸಮಾಜ ದಲ್ಲಿ ಹೆಣ್ಣು ಯಾವ ಗಂಡಿಗೂ ಕಡಿಮೆ ಇಲ್ಲ ಎಂಬಂತೆ ಸಾಧನೆ ಮಾಡಿ ತೋರಿಸಿzಳೆ ಎಂದರು.
ಪ್ರತಿಯೊಬ್ಬರಿಗೂ ಮತದಾನವನ್ನು ಕಡ್ಡಾಯಗೊಳಿಸ ಬೇಕು. ಇಲ್ಲದೆ ಹೋದಲ್ಲಿ ಮೂಲಭೂತ ಸೌಲಭ್ಯಗಳನ್ನು ಬಂದ್ ಮಾಡಲಾಗುವುದು ಎಂದು ಚುನಾವಣಾ ಆಯೋಗ ಆದೇಶ ಮಾಡಿದಾಗ ಮಾತ್ರ ಶೇ.೧೦೦ರಷ್ಟು ಮತದಾನ ಆಗಲು ಸಾಧ್ಯ. ಪ್ರeವಂತರೂ, ವಿದ್ಯಾವಂತರಾದ ಬೆಂಗಳೂರಿನ ನಾಗರಿಕರು ಮತದಾನದಿಂದ ದೂರ ಉಳಿಯುತ್ತಿರುವುದು ಶೋಚನೀಯ ಎಂದರು.
ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಆಯುಕ್ತ ದಾನೇಶ್ ಮಾತನಾಡಿ, ನಾನು ಚಿಕ್ಕಂದಿನಲ್ಲಿ ಇzಗ ನಮ್ಮೂರ ದೇವಾಲಯ ಗಳಲ್ಲಿ ಹೇಳುತ್ತಿದ್ದ ರಾಮಾಯಣ, ಮಹಾಭಾರತ, ರೇವಣ ಸಿದ್ದರ ಕಥೆಗಳು ನಮಗೆ ಸ್ಪೂರ್ತಿದಾಯಕ ವಾಗಿದ್ದವು, ದೇವಸ್ಥಾನಗಳನ್ನು ಕಟ್ಟಿ ಅಲ್ಲಿ ಕೇವಲ ಪೂಜೆ ಭಜನೆಗಳನ್ನು ಮಾಡಿದರೆ ಸಾಲದು, ನಮ್ಮ ಕಾಯಕವು ಪೂಜೆ ರೀತಿ ಆಗಬೇಕು, ನಮ್ಮ ಸಂಸ್ಕಾರ ಸಂಸ್ಕೃತಿ ಉಳಿವಿಗಾಗಿ ಭಕ್ತಿ ಧ್ಯಾನಕ್ಕಾಗಿ ದೇವಾಲಯಗಳು ಬೇಕು. ನಿರ್ಮಲವಾದ ಪ್ರೀತಿ ಭಕ್ತಿ ಹೊಂದಿರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ದೇವಸ್ಥಾನ ಸಮಿತಿಯ ಅಧ್ಯಕ್ಷ ಗುತ್ಯಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತೋಶ್ರೀ ಚನ್ನಬಸಮ್ಮನವರು, ರಾಜ್ಯ ಹಾಲುಮತ ಮಹಾಸಭಾ ಉಪಾಧ್ಯಕ್ಷ ಡಾ|ಪ್ರಶಾಂತ್, ಕಸಾಪ ಅಧ್ಯಕ್ಷ ರಘು ಎಚ್ ಎಸ್, ತಾ.ಕಾ. ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಲ್ ರಾಜು, ಗ್ರಾಮದ ಮುಖಂಡರಾದ ಶಿವಲಿಂಗಪ್ಪ, ದೊಡ್ಡಪ್ಪ , ಆನಂದಪ್ಪ, ವರದೂರ್ ಶಿವಪ್ಪ, ಚಂದ್ರಪ್ಪ ತಿಮ್ಲಾಪುರ, ದೇವಸ್ಥಾನ ಸಮಿತಿ ಕಾರ್ಯದರ್ಶಿ ಬಸವರಾಜಪ್ಪ, ಸತೀಶ್ ಗೌಡ್ರ, ಸುರೇಶಪ್ಪ, ಮಾರ್ತಾಂಡಪ್ಪ, ನಟರಾಜ್, ಗುಡ್ಡದಪ್ಪ, ಶಶಿಧರ್ ಉಡಗಣಿ, ಚೌಟಗಿ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.