ಜಿಲ್ಲಾ ಸುದ್ದಿತಾಜಾ ಸುದ್ದಿ

ಬಿಎಸ್‌ವೈ- ಬಿಜೆಪಿ ಕುರಿತು ಅಪಪ್ರಚಾರ: ಶಾಸಕ ವಿಜಯೇಂದ್ರ ಆಕ್ರೋಶ

Share Below Link

ಶಿಕಾರಿಪುರ: ರಾಜಕೀಯವಾಗಿ ಯಡಿಯೂರಪ್ಪನವರು ರಾಜ್ಯ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳು ವಲ್ಲಿ ತಾಲೂಕಿನ ಜನತೆ ಮತದಾರರ ಬೆಂಬಲ ಪ್ರೋತ್ಸಾಹ ಬಹು ಮುಖ್ಯ ಕಾರಣವಾಗಿದ್ದು ಈ ದಿಸೆಯಲ್ಲಿ ಮುಖ್ಯಮಂತ್ರಿಯಾದ ಅವಧಿಯಲ್ಲಿ ತಾಲೂಕಿನ ಜನತೆ,ರೈತ ಸಮುದಾಯಕ್ಕೆ ಶಾಶ್ವತ ನೀರಾವರಿ ಸಹಿತ ಎಲ್ಲ ಸೌಲಭ್ಯ ಕಲ್ಪಿಸುವ ಮೂಲಕ ಋಣ ತೀರಿಸುವ ಪ್ರಯತ್ನ ಮಾಡಿzರೆ. ಅಪಪ್ರಚಾರದಲ್ಲಿ ನಿಸ್ಸೀಮರಾದ ವಿರೋಧ ಪಕ್ಷದವರು ಜನತೆಯನ್ನು ಹಾದಿ ತಪ್ಪಿಸುವ ಸತತ ಪ್ರಯತ್ನದಲ್ಲಿzರೆ ಎಂದು ಕ್ಷೇತ್ರದ ಶಾಸಕ ಬಿ.ವೈ ವಿಜಯೇಂದ್ರ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಹಾಗೂ ಮುಂದುವರಿದ ಜನಾಂಗಕ್ಕೆ ಮಾತ್ರ ಬಿಜೆಪಿ ಸೀಮಿತ ಎಂಬ ಹಣೆಪಟ್ಟಿಯನ್ನು ಕಿತ್ತೊಗೆದು ಡಾ. ತಂಗಾ, ಈಶ್ವರಪ್ಪ, ಶಂಕರಮೂರ್ತಿ ಮತ್ತಿತರ ಹಲವು ನಾಯಕರು ಕಾರ್ಯಕರ್ತರ ಜತೆ ರಾಜ್ಯ ಸುತ್ತಿ ಜನಸಾಮಾನ್ಯರ ಪರವಾದ ಹೋರಾಟದಿಂದ ರಾಜ್ಯದಲ್ಲಿ ಪಕ್ಷದ ಮೂಲಕ ಅಧಿಕಾರದ ಗದ್ದುಗೆ ಗೇರಿದ ಯಡಿಯೂರಪ್ಪನವರು ದಕ್ಷಿಣ ಭಾರತದಲ್ಲಿ ಪಕ್ಷಕ್ಕೆ ಕರ್ನಾಟಕ ಹೆಬ್ಬಾಗಿಲು ಎಂಬ ವರ್ಚಸ್ಸನ್ನು ತಂದುಕೊಟ್ಟಿzರೆ ಎಂದರು.
ಚುನಾವಣೆ ಸಂದರ್ಭದಲ್ಲಿ ವಿವಿಧ ವೇದಿಕೆಯಲ್ಲಿ ಅಭಿವೃದ್ದಿ ಪರ ವಿರೋಧ ಚರ್ಚೆ ಸಾಮಾನ್ಯ ವಾಗಿದ್ದು ವಿಪಕ್ಷಗಳಿಂದ ಹೊಗಳಿಕೆ ಯನ್ನು ನಿರೀಕ್ಷಿಸುವುದು ತಪ್ಪು ಎಂದ ಅವರು, ಅಪಪ್ರಚಾರದಲ್ಲಿ ನಿಸ್ಸೀಮರಾಗಿರುವ ವಿರೋಧಿಗಳು ಯಡಿಯೂರಪ್ಪನವರ ಅವಧಿಯಲ್ಲಿ ಯಾವುದೇ ಅಭಿವೃದ್ದಿ ಕಾರ್ಯವಾಗಿಲ್ಲ ಎಂಬಂತೆ ವಾಟ್ಸಾಪ್ ಮತ್ತಿತರ ಸಾಮಾಜಿಕ ಜಲತಾಣದಲ್ಲಿ ಬಿಂಬಿಸುತ್ತಿರು ವುದು ರೋಗಗ್ರಸ್ಥ ಮನಸ್ಥಿತಿಗೆ ಸಾಕ್ಷಿಯಾಗಿದೆ ತಾಲೂಕಿನ ಹೊಸೂರು, ತಾಳಗುಂದ, ಉಡುಗಣಿ ಕಸಬಾ ಹೋಬಳಿಯ ೨೮೨ ಕೆರೆಗಳಿಗೆ ಶಾಶ್ವತ ನೀರಾವರಿ ಯೋಜನೆಯಡಿ ನೀರು ತುಂಬಿಸುವ ಯೋಜನೆ ಶೇ.೫೦ ಪೂರ್ಣಗೊಂಡಿದೆ ಬಾಕಿಯುಳಿದ ೧೫೧ ಕೆರೆಗೆ ವಿದ್ಯುತ್ ಸಮಸ್ಯೆ ಯಿಂದಾಗಿ ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ಹಿರೇಕೇರೂರು ಬಳಿ ಚಟ್ನಳ್ಳಿ ಸಮೀಪ ತುಂಗಭದ್ರಾ ನದಿಗೆ ೩೬೧೦ ಹೆಚ್‌ಪಿಯ ೫ ವಿದ್ಯುತ್ ಮೋಟಾರ್ ಅಳವಡಿಸಿ ೧.೮೪ ಟಿಎಂಸಿ ನೀರನ್ನು ಏತ ನೀರಾವರಿ ಯೋಜನೆ ಮೂಲಕ ಸತತ ೫ ತಿಂಗಳಿಂದ ನೀರು ಹಾಯಿಸಲಾ ಗುತ್ತಿದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ದೊರೆತ ಆಡಳಿತಾತ್ಮಕ ಅನುಮೋದನೆ ಮೂಲಕ ತಾಲೂಕಿನ ಎಲ್ಲ ಹೋಬಳಿಗೆ ಅವರ ಅವಧಿಯಲ್ಲಿಯೇ ರೂ.೮೫೦ ಕೋಟಿ ವೆಚ್ಚದಲ್ಲಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲಾಗಿದೆ ಎಂದು ಅಂಕಿ ಅಂಶ ಸಹಿತ ವಿವರಿಸಿದರು.
ಸುಳ್ಳನ್ನು ನೂರು ಬಾರಿ ಹೇಳಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಗಳಿಸಿದೆ. ತಾಲೂಕಿನಲ್ಲಿ ಸುಳ್ಳು ಹೇಳಿ ಚುನಾವಣೆ ಗೆಲ್ಲುವ ವಿರೋಧಿಗಳ ಕನಸು ಭಗ್ನವಾಗಿದೆ ಸಂಘಟನೆ ಶಕ್ತಿ ಕಾರ್ಯಕರ್ತರ ಶ್ರಮ ಬೇಧಿಸಲು ಸಾದ್ಯವಿಲ್ಲ ಪಕ್ಷ ಸದೃಡವಾಗಿದ್ದು ವಿರೋಧಿಗಳ ಅಪಪ್ರಚಾರಕ್ಕೆ ಕಿವಿಗೊಡದಂತೆ ಅವರು ಜನತೆಯಲ್ಲಿ ಮನವಿ ಮಾಡಿದರು.
ಪ್ರಮುಖರಾದ ವೀರೇಂದ್ರ ಪಾಟೀಲ್, ಟಿ.ಎಸ್ ಮೋಹನ್ ಗುರುಮೂರ್ತಿ, ಎಚ್.ಟಿ ಬಳಿಗಾರ್, ಚನ್ನವೀರಪ್ಪ, ವಸಂತಗೌಡ, ಶಿವಪ್ಪ ಮತ್ತಿತರರು ಉಪಸ್ಥಿತರಿದ್ದರು.