ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ರಾಷ್ಟ್ರಪತಿಗಳಿಂದ ಫ್ಲಾರೆನ್ಸ್ ನೈಟಿಂಗೇಲ್‌ಅವಾರ್ಡ್ ಸ್ವೀಕರಿಸಿದ ಸಿಸ್ಟರ್ ಟಿ. ನಾಗರತ್ನ

Share Below Link

ಶಿವಮೊಗ್ಗ: ಆರೋಗ್ಯ ಕ್ಷೇತ್ರದಲ್ಲಿ ೨೦ ವರ್ಷಗಳ ಕಾಲ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ರಾಜಧಾನಿ ನವ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ೨೦೨೩ನೇ ಸಾಲಿನ ನ್ಯಾಷನಲ್ ಫ್ಲಾರೆನ್ಸ್ ನೈಟಿಂಗೇಲ್ ಅವಾರ್ಡ್‌ನನ್ನು ರಾಷ್ಟ್ರಪತಿ ದ್ರೌಪದಿ ಮುರ್ಮುರವರಿಂದ ಸಿಸ್ಟರ್ ಟಿ.ನಾಗರತ್ನ ಸ್ವೀಕರಿಸಿದರು.
ಈ ರಾಷ್ಟ್ರಮಟ್ಟದ ಪ್ರಶಸ್ತಿ ಗೌರವವನ್ನು ಕರೋನ ವಾರಿಯರ್‍ಸ್‌ಗೆ ಗ್ರಾಮೀಣ ಪ್ರದೇಶದ ಆರೋಗ್ಯ ಕಾರ್ಯಕರ್ತರಿಗೆ, ಆರೋಗ್ಯಇಲಾಖೆಯ ಸಿಬ್ಬಂದಿಗಳಿಗೆ ಸಮಾಜ ಸೇವಕರಿಗೆ ಅರ್ಪಿಸುತ್ತೇನೆ ಎಂದು ಸಿಸ್ಟರ್ ನಾಗರತ್ನ.ಟಿ. ಕೃತಜ್ಞತೆಯನ್ನು ಅರ್ಪಿಸಿ ಮಾತನಾಡಿದರು.
ನವದೆಹಲಿಯಲ್ಲಿ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುರವರು ರಾಷ್ಟ್ರಮಟ್ಟದ ನ್ಯಾಷನಲ್ ಫ್ಲಾರೆನ್ಸ್ ನೈಟಿಂಗೇಲ್ ಅವಾರ್ಡ್ ಪ್ರಧಾನ ಮಾಡಿ ದರು. ಭಾರತ ಸರ್ಕಾರದ ಆರೋಗ್ಯ ಇಲಾಖೆಯ ಇಂಡಿಯನ್ ನರ್ಸಿಂಗ್ ಕೌನ್ಸಿ ಲ್‌ನಿಂದ ಪ್ರಧಾನ ಮಾಡುವ ರಾಷ್ಟ್ರಮಟ್ಟದ ೨೦೨೩ನೇ ಸಾಲಿನ ನ್ಯಾಷನಲ್ ಫ್ಲಾರೆನ್ಸ್ ನೈಟಿಂಗೇಲ್‌ಅವಾರ್ಡ್‌ಗೆ ದೇಶಾದ್ಯಂತ ನೂರಾರು ಪ್ರಾಸ್ತಾವನೆಗಳು ಸಲ್ಲಿಕೆಯಾಗಿ ದ್ದು, ಅದರಲ್ಲಿ ಕರ್ನಾಟಕದಿಂದ ಆಯ್ಕೆ ಯಾದ ಶಿವಮೊಗ್ಗ ಮೂಲದವರಾಗಿzರೆ.
ಪತಂಜಲಿ ಗೌ.ಅಧ್ಯಕ್ಷಎಂ.ಈಶ್ವರಪ್ಪ ನವುಲೆ ಮಾತನಾಡಿ ಸಿಸ್ಟರ್ ನಾಗರತ್ನರವರು ಹೊನ್ನಾಳಿ ಪಟ್ಟಣದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿzರೆ. ಸುಮಾರು೨೦ ವರ್ಷಗಳ ಕಾಲ ಆರೋಗ್ಯಇಲಾಖೆಯಲ್ಲಿ ನಗುಮುಖ ದೊಂದಿಗೆ ಪ್ರೀತಿ ವಿಶ್ವಾಸದಿಂದ ರೋಗಿಗಳ ನ್ನು ಸಾರ್ವಜನಿಕರನ್ನು ಮಾತನಾಡಿಸುತ್ತಾ ಎಲ್ಲರ ಪ್ರೀತಿಗೌರವಕ್ಕೆ ಭಾಜನರಾಗಿzರೆ ಎಂದರು.
ಡಾ.ಪಿ.ಬಾಲಪ್ಪ ಮಾತನಾಡಿ ನಾಗರತ್ನ ರವರು ಕರೋನ ಸಂದರ್ಭದಲ್ಲಿಯೂ ಜೀವದ ಹಂಗನ್ನುತೊರೆದು ಮಾನವೀಯತೆ ಯಿಂದ ಸೇವೆ ಸಲ್ಲಿಸಿರುವುದನ್ನು ಸ್ಮರಿಸಬ ಹುದೆಂದರು. ಎಂ.ಬಾಬು ಮಾತನಾಡಿ ನಾಗರತ್ನರವರು ಹೊನ್ನಾಳ್ಳಿ ತಾಲ್ಲೂಕ್ ಕತ್ತಿಗೆಯ ಪ್ರಾಥಮಿಕಆರೋಗ್ಯಕೇಂದ್ರ, ಹೊಳೆ ಅರಳಹಳ್ಳಿ ಉಪ ಕೇಂದ್ರ, ಸೊರಟೂರು ಉಪ ಕೇಂದ್ರ ಸೇರಿದಂತೆ ಹತ್ತು ಹಲವು ಕಡೆ ಸೇವೆ ಸಲ್ಲಿಸಿzರೆ. ಮೊದಲು ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಯಾಗಿ ಈಗ ಮುಂಬಡ್ತಿ ಪಡೆದು ಪ್ರಾಥ ಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಯಾಗಿ zರೆ ಎಂದರು.
ಸ್ವಾಮಿ ವಿವೇಕಾನಂದರಾಜ್ಯಯುವ ಪ್ರಶಸ್ತಿ ಪುರಸ್ಕೃತಯೋಗಾಚಾರ್ಯ ಪತಂ ಜಲಿ ಜೆ.ನಾಗರಾಜ್ ಮಾತನಾಡಿ ನಾಗರತ್ನ ರವರು ನೆಹರು ಯುವ ಕೇಂದ್ರದಲ್ಲಿ ಸಮಾ ಜ ಸೇವಾ ಕಾರ್ಯಕರ್ತೆಯಾಗಿ ಸೇವೆಸಲ್ಲಿಸಿ zರೆ. ಇವರ ಸೇವೆಯನ್ನು ಗುರುತಿಸಿ ರಾಜ್ಯ ಮಟ್ಟದ ಪ್ಲಾರೆನ್ಸ್ ನೈಟಿಂಗೇಲ್‌ಅವಾರ್ಡ್, ಸುವರ್ಣರಾಜ್ಯ ಪ್ರಶಸ್ತಿ, ಕನಕಶ್ರೀಚೇತನ ಪತಂಜಲಿ ರತ್ನರಾಜ್ಯ ಪ್ರಶಸ್ತಿ, ಅತ್ತ್ಯುತ್ತಮ ಕರೋನ ವಾರಿಯರ್‍ಸ್ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿ ಗೌರವಗಳಿಗೆ ಭಾಜನ ರಾಗಿzರೆ ಇವರ ಸಮಾಜಸೇವಾ ಕಾಳಜಿ ಇತರರಿಗೆ ಮಾದರಿಯಾಗಿದೆಎಂದರು.
ಸಿಸ್ಟರ್ ಚೇತನಾ ಮಾತನಾಡಿ ನಾಗರತ್ನ ರವರು ನವದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮರವರಿಂದ ಈ ಪ್ರತಿಷ್ಠಿತ ರಾಷ್ಟ್ರಮಟ್ಟದ ನ್ಯಾಷನಲ್ ಫ್ಲಾರೆನ್ಸ್ ನೈಟಿಂಗೇಲ್ ಅವಾರ್ಡ್‌ನನ್ನು ಸ್ವೀಕರಿಸಿರು ವುದು ನಮ್ಮೇಲ್ಲರಿಗೂ ಸಂತೋಷ ತಂದಿದೆ. ಪತಂಜಲಿ ಹೊನ್ನಾಳಿ ಶಾಖೆಯ ಸಂಘಟನಾ ಕಾರ್ಯದರ್ಶಿಯಾಗಿಯೂ ಸಮಾಜ ಸೇವೆ ಯನ್ನು ಸಲ್ಲಿಸುತ್ತಿzರೆಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್. ಸುಂದರರಾಜ್, ಪತಂಜಲಿ ಸಿ.ಇ.ಓ. ಪರಿಸರ ಸಿ.ರಮೇಶ್, ಅಂತರ ರಾಷ್ಟ್ರೀಯ ಯೋಗಪಟು ಬೆಂಕಿಶೇಖರಪ್ಪ, ಆಡಳಿತಾಧಿಕಾರಿ ಎಂ.ಪೂವಯ್ಯ, ಕಲಾವಿದರಾದ ಭವಾನಿ ಶಂಕರ್‌ರಾವ್, ಸುಶೀಲ ಭವಾನಿ ಶಂಕರ್‌ರಾವ್, ರಾಷ್ಟ್ರಪತಿ ಪದಕ ವಿಜೇತ ಜಿ.ಈ.ಶಿವಾನಂದಪ್ಪ ಅಭಿನಂದಿಸಿ ಶುಭ ಹಾರೈಸಿದರು.