ತಾಜಾ ಸುದ್ದಿ

ಕೈಗಾರಿಕಾ ಕ್ಷೇತ್ರಕ್ಕೆ ಸರ್ ಎಂವಿ ಕೊಡುಗೆ ಅಪಾರ ….

Share Below Link

ಶಿವಮೊಗ್ಗ: ಕೈಗಾರಿಕಾ ಕ್ಷೇತ್ರಕ್ಕೆ ಸರ್ ಎಂ.ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರ ಎಂದು ಎಸ್.ಎಸ್. ವಾಗೇಶ್ ಹೇಳಿದರು.
ಗಂಗೋತ್ರಿ ಪಿಯು ಕಾಲೇಜಿನಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ಯಿಂದ ಆಯೋಜಿಸಿದ್ದ ಇಂಜಿನಿ ಯರ್ಸ್ ಡೇ ಉದ್ಘಾಟಿಸಿ ಮಾತ ನಾಡಿದ ಅವರು, ಸ್ವಾತಂತ್ರ ಭಾರತದಲ್ಲಿ ದೇಶ ಏಳಿಗೆಯಾಗಲು ಕೈಗಾರಿಕೆಯು ತುಂಬಾ ಅವಶ್ಯಕ ಎಂದು ತಿಳಿಸಿದರು.
ಸರ್ ಎಂ.ವಿ. ಅವರು ಮೈಸೂರು ದಿವಾನರಾಗಿದ್ದಾಗ ಶಿವಮೊಗ್ಗದಲ್ಲಿ ಗಂಧದೆಣ್ಣೆ, ಭದ್ರಾವತಿಯಲ್ಲಿ ಕಬ್ಬಿಣ, ಸಿಮೆಂಟ್ ಕಾರ್ಖಾನೆ ಸ್ಥಾಪಿಸಿದರು. ಇದರಿಂದ ಹಲವರಿಗೆ ಕೆಲಸ ದೊರೆತರೆ ಸಮಾಜದ ಬಹಳಷ್ಟು ಜನರ ಪ್ರಗತಿಗೆ ದಾರಿ ಯಾಯಿತು. ಭಾರತ ಸರ್ಕಾರ ಇವರ ಕಾರ್ಯವೈಖರಿ ಕಂಡು ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಇಂತಹ ಮಹಾನ್ ವ್ಯಕ್ತಿ ಕರ್ನಾಟಕದವರು ಎಂಬುದು ಹೆಮ್ಮೆಯ ಸಂಗತಿ ಎಂದರು. ಇದೇ ಸಂದರ್ಭದಲ್ಲಿ ಲಕ್ಷ್ಮೀ ನಾರಾಯಣ್, ಭಾರದ್ವಾಜ್, ರಾಜಶೇಖರ್, ರಮೇಶ್, ವೆಂಕಟೇಶ್, ಸಂಪತ್ ಕುಮಾರ್ ಅವರನ್ನು ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ರೂಪಾ ಪುಣ್ಯಕೊಟಿ ಅವರು ಮಾತನಾಡಿ, ನಮ್ಮ ರಾಷ್ಟ್ರದ ಮಹಾನ್ ವ್ಯಕ್ತಿಗಳ ಪರಿಚಯವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಲು ಇಂತಹ ಕಾರ್ಯಕ್ರಮ ಅತ್ಯವಶ್ಯಕ ಎಂದರು.
ಕಾರ್ಯದರ್ಶಿ ಡಾ. ಪ್ರಕೃತಿ ಮಂಚಾಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಣುಕಾರಾಧ್ಯ ನಿರೂಪಿಸಿದರು. ಸತ್ಯನಾರಾಯಣ್ ವಂದಿಸಿದರು.