ಸರ್.ಎಂ.ವಿ ಇಂಜಿನಿಯರ್‌ಗಳಿಗೆ ಮಾದರಿ
ಶಿವಮೊಗ್ಗ, : ಶಿಸ್ತು, ಬದ್ದತೆ, ಪ್ರಾಮಾಣಿಕತೆ, ಕೌಶಲ್ಯ, ಬುದ್ದಿ ಮತ್ತೆ, ದೂರದೃಷ್ಟಿ ಹೀಗೆ ಸಕಲ ಗುಣ ಸಂಪನ್ನರಾದ ಸರ್.ಎಂ. ವಿಶ್ವೇಶ್ವರಯ್ಯ ಎಲ್ಲ ಇಂಜಿನಿಯರ್ ಗಳಿಗೆ ಮಾದರಿ ಯಾಗಿದ್ದಾರೆ ಎಂದು ಲೋಕೋಪಯೋಗಿ ಇಲಾ ಖೆಯ ನಿವೃತ್ತ ಮುಖ್ಯ ಇಂಜಿನಿ ಯರ್ ಬಿ.ಟಿ. ಕಾಂತರಾಜ್ ಅಭಿಪ್ರಾಯಪಟ್ಟರು.
ನಗರದ ಸಮಸ್ತ ಇಂಜಿನಿಯ ರಿಂಗ್ ಇಲಾಖೆಗಳ ಆಶ್ರಯದಲ್ಲಿ ಇಂದು ಸರ್ಕಾರಿ ನೌಕರರ ಭವನ ದಲ್ಲಿ ಆಯೋಜಿಸಲಾಗಿದ್ದ ಭಾರತ ರತ್ನ ಸರ್.ಎಂ.ವಿಶ್ವೇಶ್ವರಾಯ ರವರ ೧೬೩ನೇ ಜನ್ಮದಿನೋತ್ಸವ ಹಾಗೂ ಇಂಜಿನಿಯರುಗಳ ದಿನಾ ಚರಣೆಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾ ಡಿದರು. ಸರ್.ಎಂ.ವಿಶ್ವೇಶ್ವರಾಯರಲ್ಲಿ ಪರಿಶ್ರಮ, ನೇರನುಡಿ, ದಿಟ್ಟತನ, ವಿಧೇಯತೆ, ಸಮಯ ನಿರ್ವಹಣೆ ಹೀಗೆ ಪರಿಪೂರ್ಣ ವ್ಯಕ್ತಿತ್ವಕ್ಕೆ ಇರಬೇಕಾದ ಎಲ್ಲ ಗುಣಗಳು ಅಂತರ್ಗತವಾಗಿದ್ದವು. ಅವರಲ್ಲಿನ ದೂರದೃಷ್ಟಿ ಗುಣ ಅತ್ಯಂತ ವಿಶೇಷ ವಾಗಿದ್ದು ಅವರು ನಿರ್ಮಿಸಿರುವ ಕನ್ನಂಬಾಡಿಕಟ್ಟೆ ಇವತ್ತಿಗೂ ಚೆನ್ನಾಗಿದೆ. ಅವರು ನಿರ್ಮಿಸಿದ ಹಲವಾರು ಕಾರ್ಖಾನೆಗಳು, ಇತರೆ ಯೋಜನೆಗಳು ಇಂದಿಗೂ ಪ್ರಸ್ತುತ ಮತ್ತು ಮಾದರಿಯಾಗಿವೆ ಎಂದರು.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಒಂದು ಸ್ಪರ್ಧಾತ್ಮಕ ಕೆಲಸವಾಗಿತ್ತು, ಒಂದು ಸಾವಿರಕ್ಕೂ ಅಧಿಕ ಕೆಲಸಗಾರರು ತಮ್ಮ ಕೊಡುಗೆಯನ್ನಿತ್ತಾರೆ. ಕೌಶ ಲ್ಯ ಮತ್ತು ಜನದಿಂದಾಗಿ ಶಿವ ಮೊಗ್ಗದಲ್ಲಿ ಉತ್ತಮ ವಿಮಾನ ನಿಲ್ದಾಣ ನಿರ್ಮಾಣವಾಗಿದೆ ಎಂದರು.
ಕಳೆದ ೨೫ ವರ್ಷಗಳಿಂದ ದೇಶ ದಲ್ಲಿ ಅಭಿವೃದ್ದಿ ಕೆಲಸಗಳು ವೇಗ ಪಡೆದಿವೆ. ಜಗತಿಕ ಅರ್ಥವ್ಯವಸ್ಥೆ ಯಲ್ಲಿ ೫ ನೇ ಸ್ಥಾನದಲ್ಲಿರುವ ನಮ್ಮ ದೇಶ ೩ನೇ ಸ್ಥಾನಕ್ಕೆ ಬರಲು ಪ್ರಯ ತ್ನಿಸುತ್ತಿದೆ. ಬೇರೆ ದೇಶಗಳಿಗಿಂತ ಹೆಚ್ಚಿನ ಅಂದರೆ ವರ್ಷಕ್ಕೆ ಸುಮಾ ರು ೧೫ ಲಕ್ಷದಷ್ಟು ಇಂಜಿನಿಯರ್ ಗಳನ್ನು ನಮ್ಮ ದೇಶ ಸೃಷ್ಟಿಸುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಲೋಕೊ ಪಯೋಗಿ ಇಲಾಖೆ ಕೇಂದ್ರ ವಲಯದ ಮುಖ್ಯ ಇಂಜಿನಿಯರ್ ಬಿ.ವಿ.ಜಗದೀಶ್ ಮಾತನಾಡಿ ದರು.
ಇದೇ ವೇಳೆ ವಿಮಾನ ನಿಲ್ದಾಣ ನಿರ್ಮಾಣದಲ್ಲಿ ಪಾಲ್ಗೊಂಡ ಇಂಜಿನಿಯರ್‌ಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಭಾರತೀಯ ಜೀವ ವಿಮಾ ನಿಗಮದ ಅಭಿವೃದ್ದಿ ಅಧಿಕಾರಿ ಹೆಚ್.ಎಸ್.ನವೀನ್ ಕುಮಾರ್, ದೊಡ್ಡಬಾತಿಯ ತಪೋವನ ಆಯುರ್ವೇದ ಆಸ್ಪತ್ರೆಯ ವೈದ್ಯ ಕೀಯ ಅಧಿಕ್ಷಕ ಡಾ.ಶಿವರಾಜ ವಿ ಪಾಟೀಲ್, ನಂಜಪ್ಪ ಆಸ್ಪತ್ರೆಯ ಮೆಡಿಕಲ್ ಆಂಕಾಲಜಿಸ್ಟ್ ಡಾ. ನಮ್ರತ ಉಡುಪ ಉಪನ್ಯಾಸ ನೀಡಿದರು.
ಅಧೀಕ್ಷಕ ಇಂಜಿನಿಯರ್ ಗಳಾದ ಎಸ್ ಗಣೇಶ್, ಕವಿತ, ಕಾರ್ಯಪಾಲಕ ಇಂಜಿನಿಯರ್ ಗಳಾದ ಸಂಪತ್ ಕುಮಾರ್ ಪಿಂಗಳೆ, ನಾಗೇಶ್, ಇಂಜಿನಿಯ ರ್‌ಗಳಾದ ಚಂದ್ರಶೇಖರ್, ದಿವಾ ಕರ್, ಸುರೇಶ್, ರಾಜೇಂದ್ರ ಪ್ರಸಾದ್ ಇತರರು ಹಾಜರಿದ್ದರು.