ಇತರೆಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿ…

Share Below Link

ಶಿವಮೊಗ್ಗ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸಲು ಪಕ್ಷಕ್ಕೆ ಸೇರಿರುವ ಎಲ್ಲರೂ ಪ್ರಾಮಾಣಿಕ ವಾಗಿ ಪ್ರಯತ್ನಿಸಬೇಕು ಎಂದು ಜಿ ಕಾಂಗ್ರೆಸ್ ಅಧ್ಯಕ್ಷ ಹೆಚ್. ಎಸ್. ಸುಂದರೇಶ್ ಹೇಳಿದರು.
ಅವರು ಆಮ್ ಆದ್ಮಿ ಪಾರ್ಟಿ ಯ ಪ್ರಮುಖರನ್ನು ಕಾಂಗ್ರೆಸ್ ಗೆ ಬರಮಾಡಿಕೊಂಡು ಸದಸ್ಯತ್ವ ನೀಡಿ ನಂತರ ಮಾತನಾಡಿದರು.


ಅಲ್ಪಸಂಖ್ಯಾತರು ಕಾಂಗ್ರೆಸ್ ನಲ್ಲಿಯೇ ಇದ್ದವರು. ಕೆಲವು ಕಾರಣಕ್ಕಾಗಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಈಗ ಮತ್ತೆ ವಾಪಸ್ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿzರೆ. ಕೇವಲ ಪಕ್ಷಕ್ಕೆ ಬಂದರೆ ಸಾಲದು, ಲೋಕಸಭೆ ಚುನಾವಣೆ ಸೇರಿದಂತೆ ಮುಂದಿನ ಎ ಚುನಾವಣೆಗಳಲ್ಲಿ ಪಕ್ಷ ಗೆಲ್ಲಿಸಲು ಸಂಘಟಿತರಾಗಿ ಹೋ ರಾಡಬೇಕು. ಪಕ್ಷದ ಸಿದ್ಧಾಂತ ಮೈ ಗೂಡಿಸಿಕೊಳ್ಳಬೇಕು ಎಂದರು.
ಕೇಂದ್ರದ ಬಿಜೆಪಿ ಸರ್ಕಾರ ಬಡವರ ಪರ ಇಲ್ಲ. ಭ್ರಷ್ಟಾಚಾರ ದಲ್ಲಿ ತೊಡಗಿದೆ. ಕಾರ್ಪೊರೇಟ್ ಕಂಪನಿಗಳಿಗೆ ಮಣೆ ಹಾಕುತ್ತಿದೆ. ಮುಂದಿನ ಲೋಕಸಭಾ ಚುನಾ ವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ. ರಾಹುಲ್ ಪ್ರಧಾನಿಯಾಗುತ್ತಾರೆ ಎಂದರು.
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿ, ರಾಹುಲ್ ಪ್ರಧಾನಿಯಾಗಲು ನಮ್ಮ ಜಿಯಿಂದಲೂ ಕೊಡುಗೆ ನೀಡಬೇಕು. ಶಿವಮೊಗ್ಗ ಕ್ಷೇತ್ರ ದಿಂದ ಕಾಂಗ್ರೆಸ್ ಪರವಾಗಿ ಯಾರಿಗೆ ಟಿಕೆಟ್ ಸಿಕ್ಕರೂ ಕೂಡ ಅವರನ್ನು ಗೆಲ್ಲಿಸಬೇಕು ಎಂದರು.
ಮುಸ್ಲಿಮರ ಓಟು ಬೇಡ ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ದರು. ಅವರಿಗೆ ಶಿವಮೊಗ್ಗ ನೆಮ್ಮದಿಯಿಂದ ಇರಲು ಇಷ್ಟವಿರಲಿಲ್ಲ. ಅಂತಹ ಪಕ್ಷಕ್ಕೆ ನಾವು ಪಾಠ ಕಲಿಸಬೇಕು. ಬದಲಾವಣೆ ಆಗಬೇಕು. ಆಮ್ ಆದ್ಮಿ ಪಕ್ಷದಿಂದ ಬಂದ ಎಲ್ಲರಿಗೂ ಅಭಿನಂದನೆಗಳು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆ ಸ್ ಬಲಿಷ್ಠವಾಗಿದೆ. ಕೇಂದ್ರದಲ್ಲೂ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ ನುಡಿದಂತೆ ನಡೆಯುತ್ತಿದೆ. ಎ ಭಾಗ್ಯಗಳು ಯಶಸ್ವಿಯಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಸೇರುವವರ ಸಂಖ್ಯೆ ಹೆಚ್ಚಾಗಿದೆ. ಎಲ್ಲರೂ ಸೇರೋಣ. ಸಂಘಟಿತರಾಗಿ ಬಿಜೆಪಿ ಓಡಿ ಸೋಣ ಎಂದರು.
ಈ ಸಂದರ್ಭದಲ್ಲಿ ಸೋಮಿನ ಕೊಪ್ಪ ವಾರ್ಡ್ ನ ಬಹುತೇಕ ಆಪ್ ಸದಸ್ಯರು ಮಕ್ಬುಲ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ಪ್ರಮುಖ ರಾದ ಕಲಗೋಡು ರತ್ನಾಕರ್, ವೈ.ಹೆಚ್. ನಾಗರಾಜ್, ಚಂದ್ರ ಭೂಪಾಲ್, ಎಸ್.ಟಿ. ಚಂದ್ರ ಶೇಖರ್, ಕಲೀಂ ಪಾಶ, ಸ್ಟೆಲಾ ಮಾರ್ಟಿನ್, ಎನ್.ಡಿ. ಪ್ರವೀಣ್ ಕುಮಾರ್, ಚಂದನ್ ಮೊದಲಾದವರಿದ್ದರು.