ಶ್ರೀ ಅಗ್ನಿಬನ್ನಿರಾಯಸ್ವಾಮಿ ಜಯಂತಿ ಆಚರಣೆ…
ಶಿವಮೊಗ್ಗ : ಜಿಡಳಿತ, ಜಿಪಂ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾ ಶ್ರಯದಲ್ಲಿ ಇಂದು ಶ್ರೀ ಅಗ್ನಿಬನ್ನಿ ರಾಯಸ್ವಾಮಿ ಜಯಂತಿ ಯನ್ನು ನಗರದ ಕುವೆಂಪು ರಂಗ ಮಂದಿರ ದಲ್ಲಿ ಆಚರಿಸಲಾಯಿತು.
ಸಮಾಜದ ಮುಖಂಡರು ಮಾತನಾಡಿ, ಶಿವಮೊಗ್ಗದಲ್ಲಿ ಪ್ರಥಮ ಬಾರಿಗೆ ಶ್ರೀ ಅಗ್ನಿಬನ್ನಿ ರಾಯಸ್ವಾಮಿ ಜಯಂತಿಯನ್ನು ಆಯೋಜಿಸಲಾಗಿದೆ. ೨ ವರ್ಷದ ಹಿಂದೆ ಬೆಂಗಳೂರಿನಲ್ಲಿ ಸಮಾವೇಶ ನಡೆದಿದ್ದು, ಒಂಭತ್ತು ಲಕ್ಷ ಜನ ಸೇರಿ zವು. ಈ ದಿನವನ್ನು ಸಮಾಜದ ಬಂಧುಗಳು ಸುವರ್ಣಾ ಕ್ಷರದಲ್ಲಿ ಬರೆದಿಡುವ ದಿನವಾ ಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಜನರು ಒಟ್ಟುಗೂಡಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಯ ಬೇಕೆಂದು ಆಶಿಸಿದರು.
ಕಾರ್‍ಯಕ್ರಮದಲ್ಲಿ ಸಮಾಜದ ಮುಖಂಡರಾದ ನಾಗರಾಜ್, ಮಹಾದೇವ, ವಿಷಕಂಠ, ಮಹಾ ದೇವಪ್ಪ, ಕರಿಯಪ್ಪ, ಮಹಾ ದೇವಿ, ರೇವಣ್ಣಸಿದ್ಧಪ್ಪ, ಬಸವರಾ ಜಪ್ಪ, ಶ್ರೀನಿವಾಸ ಇದ್ದರು.