ಶೂಟಿಂಗ್: ಶ್ರೀಕರ ಸಬ್ನೀಸ್‌ಗೆ ರಜತ
ಧಾರವಾಡ: ನಗರದ ಮಾಳಮಡ್ಡಿ ಕರ್ನಾಟಕ ಎಜ್ಯುಕೇಶನ್ ಬೋರ್ಡ್ ಸೆಂಟ್ರಲ್ ಸ್ಕೂಲಿನ ಹತ್ತನೇ ತರಗತಿಯ ವಿದ್ಯಾರ್ಥಿ ಶ್ರೀಕರ ಸಬ್ನೀಸ್ ಇತ್ತಿಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ೧೧ನೇ ಶೂಟಿಂಗ್ ಸ್ಪರ್ಧೆಗಳಲ್ಲಿ ಬೆಳ್ಳಿಯ ಪದಕ ಬಾಚಿಕೊಂಡಿzರೆ.
ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಶನ್ ಆಶ್ರಯದಲ್ಲಿ, ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್)ದಲ್ಲಿ ನಡೆದ ಈ ಸ್ಪರ್ಧೆಗಳ ೧೬ಕ್ಕಿಂತ ಕಿರಿಯರ (ಸಬ್ ಯುಥ್) ವಯೋವರ್ಗದ ೧೦ ಮೀಟರ್ ಏರ್ ರೈಫಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಬೆಳ್ಳಿ ಪದಕಕ್ಕೆ ಗುರಿಯಿಟ್ಟ ಶ್ರೀಕರ, ಬೆಳ್ಳಿಯ ಪದಕ ಜಯಿಸಿದ ೨೧ಕ್ಕಿಂತ ಕಿರಿಯರ(ಜ್ಯೂನಿಯರ್) ೧೦ ಮೀಟರ್ ಏರ್ ರೈಫಲ್ ಹಾಗೂ ಕಂಚಿನ ಪದಕ ಗೆದ್ದ ೧೬ಕ್ಕಿಂತ ಕಿರಿಯರ ೧೦ ಮೀಟರ್ ಏರ್ ರೈಫಲ್ ತಂಡಗಳ ಸದಸ್ಯರೂ ಆಗಿದ್ದರು.
ಈ ಸಾಧನೆಗಾಗಿ ಕೆ.ಇ. ಬೋರ್ಡಿನ ಕಾಯಾಧ್ಯಕ್ಷ ಶ್ರೀಕಾಂತ ಪಾಟೀಲ, ಕಾರ್ಯದರ್ಶಿ ಡಿ.ಎಸ್. ರಾಜಪುರೋಹಿತ, ಖಜಂಚಿ ಶ್ರೀನಿವಾಸ ಪರಾಂಡೆ, ಕ್ರೀಡಾಭಿವೃದ್ಧಿ ಅಧಿಕಾರಿ ವಸಂತ ಮುರ್ಡೇಶ್ವರ, ಪ್ರಾಂಶುಪಾಲ ಅಶ್ವನಿಕುಮಾರ, ದೈಹಿಕ ಶಿಕ್ಷಕರಾದ ಮಹಾಂತೇಶ ದೇಸಾಯಿ ಹಾಗೂ ರೇಶ್ಮಾ ತಾಸೆವಾಲೆ ಶ್ರೀಕರ ಅವರನ್ನು ಅಭಿನಂದಿಸಿzರೆ.