ಜಿಲ್ಲಾ ಸುದ್ದಿತಾಜಾ ಸುದ್ದಿ

ಶಿವಯೋಗಿ ಸಿದ್ಧರಾಮೇಶ್ವರ ದೇವರ ರಥೋತ್ಸವ – ಲಿ.ಸಿದ್ದರಾಮೇಶ್ವರ ಮಹಾಸ್ವಾಮೀಜಿಯವರ ಸಂಸ್ಮರಣೋತ್ಸವ

Share Below Link

ದಾವಣಗೆರೆ: ಯಾವುದೇ ಒಂದು ಸಮಾಜ ಸದೃಢವಾಗಬೇಕಾದರೆ ಅದಕ್ಕೊಂದು ಗುರಿ ಇರಬೇಕು, ಅದರ ಮಾರ್ಗದರ್ಶಕರಾಗಿ ಗುರು ಇರಬೇಕು. ಸಮಾಜದ ಏಳಿಗೆಗಾಗಿ ಸಂವಿಧಾನ ಶಿಲ್ಪಿ ಡಾ| ಅಂಬೇಡ್ಕರ್ ಅವರ ಧ್ಯೇಯದಂತೆ ಶಿಕ್ಷಣ- ಸಂಘಟನೆ ಮತ್ತು ಹೋರಾಟ ರೂಪಿಸಬೇಕು. ಸಶಕ್ತ ಸಮರ್ಥ ಸದೃಡ ಭೋವಿ ಸಮಾಜ ನಿರ್ಮಾಣದಲ್ಲಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ಕೊಡುಗೆ ಅಮೊಘ ಅನನ್ಯವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್ ತಂಗಡಗಿ ಹೇಳಿದರು.
ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದಿಂದ ನಗರದ ವೆಂಕಭೋವಿ ಕಾಲೋನಿಯಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ದೇವರ ೬೧ನೇ ರಥೋತ್ಸವ ಹಾಗೂ ಲಿ.ಸಿದ್ದರಾಮೇಶ್ವರ ಮಹಾಸ್ವಾಮೀಜಿಯವರ ೨೧ನೇ ಸಂಸ್ಮರಣೋತ್ಸವ ಸಮಾರಂಭದ ಉದ್ಘಾಟಿಸಿ ಮಾತನಾಡಿದ ಅವರು, ಭೋವಿ ಸಮಾಜಕ್ಕೆ ಗುರು ಹಾಗೂ ಗುರಿ ಎರಡೂ ಇದೆ. ಇದೆರಡರ ಸಹಕಾರದಿಂದ ಸಮಾಜ ಮುನ್ನೆಡೆಸ ಬೇಕಿದೆ ಎಂದ ಅವರು, ಈ ಮೊದಲೆ ಸಮಾಜದ ಭೋವಿ ರಥೋತ್ಸವದಲ್ಲಿ ಕೆಲವರು ಮಾತ್ರ ಭಾಗವಹಿಸುತ್ತಿದ್ದರು. ಆದರೀಗ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರ ಸಂಘಟನೆಯ ಶಕ್ತಿಯಿಂದ ಭೋವಿ ಸಮಾಜ ಮುನ್ನೆಲೆಗೆ ಬರುತ್ತಿದೆ ಎಂದರು.
ಶ್ರೀಗಳ ಸಂಘಟನಾ ಶಕ್ತಿಯಿಂದ ಹಾಗೂ ಎ ಸಮಾಜದೊಂದಿಗೆ ವಿಶ್ವಾಸದಿಂದ ಇರುವ ಕಾರಣ ಸಮಾಜ ಸಂಘಟನೆಯಾಗುತ್ತಿದೆ. ಅದಕ್ಕಾಗಿ ದಾವಣಗೆರೆ, ಚಿತ್ರದುರ್ಗ ಹಾಗೂ ಬಾಗಲಕೋಟೆ ಪೀಠಗಳಿಗೆ ಇಮ್ಮಡಿ ಶ್ರೀಗಳನ್ನೇ ಪೀಠಾಧಿಪತಿ ಗಳನ್ನಾಗಿ ಮಾಡಲಾಗಿದೆ ಇದರಿಂದ ಸಮಾಜ ರಾಜ್ಯಮಟ್ಟದಲ್ಲಿ ಸಂಘಟನೆಯಾಗಲು ಅನುಕೂಲ ವಾಗಿದೆ ಎಂದರು.
ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು ಮಾತನಾಡಿ, ೧೨ನೇ ಶತಮಾನದ ಸಿದ್ಧರಾಮೇಶ್ವರರು ಮೂಲತಃ ಪರಮಶ್ರೇಷ್ಠ ಧಾರ್ಮಿಕ ವ್ಯಕ್ತಿಗಳಾದರೂ ಮಾನವನಿಗೆ ಸಂಬಂಧಿಸಿದ ಎಲ್ಲ ವಿಷಯಗಳ ಮೇಲೂ ತಮ್ಮದೇ ಆದ ವಿಚಾರದ ಬೆಳಕನ್ನು ವಚನಗಳ ಮೂಲಕ ಚೆಲ್ಲಿರುವರು. ಕೇವಲ ಧಾರ್ಮಿಕ ವಿಷಯಗಳಿಗೆ ಮಾತ್ರ ತಮ್ಮ ಅಂತದೃಷ್ಟಿಪೂರ್ಣ ವಿಚಾರಮತಿ ಯನ್ನು ಸೀಮಿತಗೊಳಿಸದೆ ಸಾಮಾಜೋಧಾರ್ಮಿಕ, ಮಾನವನ ಸರ್ವತೋಮುಖ ಬೆಳವಣಿಗೆಗೆ ಅತ್ಯಂತ ಆವಶ್ಯಕ ವಾದ, ಎಲ್ಲ ವಿಷ ಯಗಳನ್ನೂ ಸ್ವೀಕರಿಸಿ ತೀಕ್ಷ್ಯಬುದ್ಧಿಶಕ್ತಿಯಿಂದ ಅವುಗಳನ್ನು ಚೆನ್ನಾಗಿ ಮಥಿಸಿ, ಧಾರ್ಮಿಕ ಹಿನ್ನೆಲೆಯಲ್ಲಿ ಅವುಗಳನ್ನೆಲ್ಲ ಸಮನ್ವಯಗೊಳಿಸಿ ಒಂದು ಅಪೂರ್ವ ವಾಹ್ಮಯ ವಚನಗಳ ಅಮೃತಧಾರೆಯನ್ನು ನಮ್ಮ ಮುಂದೆ ಇಟ್ಟಿರುವರು. ಹಾಗಾಗೀ ಅವರು ಕರ್ಮಯೋಗಿ ಕಾಯಕಯೋಗಿ, ಶಿವಯೋಗಿ, ಹಠಯೋಗಿ, ರಾಜಯೋಗಿ, ಯೋಗಿಗಳ ಯೋಗಿ ಎಂದು ಗುರುತಿಸಲ್ಪಡುವರು ಎಂದರು.


ಸೂರ್ಯನನ್ನು ನೋಡಬೇಕಾ ದರೆ ಯಾವ ದೀಪದ ಬೆಳಕೂ ಬೇಕಾಗಿಲ್ಲ. ಸೂರ್ಯ ಹುಟ್ಟಿದ ಕೂಡಲೇ ಸ್ವಭಾವತಃ ನಮಗೆ ಅದು ಗೊತ್ತಾಗುವುದು. ಮಾನವಕೋಟಿಯ ಗುರುವು ನಮ್ಮ ಉದ್ಧಾರಕ್ಕೆ ಬಂದಾಗ ಆತನಿಗೆ ಸತ್ಯ ಸಿಕ್ಕಿದೆ ಎಂದು ತನಗೆ ತಾನೆ ಗೊತ್ತಾಗುವುದು. ಸತ್ಯವು ಸ್ವಯಂ ಪ್ರಮಾಣದ ಮೇಲೆ ನಿಂತಿರುತ್ತದೆ. ಅದಕ್ಕೆ ಮತ್ತಾವ ಸಾಕ್ಷಿಯೂ ಬೇಕಾಗಿಲ್ಲ. ಅದು ಸ್ವಯಂ ಪ್ರಕಾಶ ಮಾನವಾದುದು. ಸತ್ಯವು ನಮ್ಮ ಸ್ವಭಾವದ ಅಂತರಾಳವನ್ನು ಪ್ರವೇಶಿ ಸುವುದು. ಆಗ ಪ್ರಪಂಚವೆ ಎದ್ದು ನಿಂತು ಇದು ಸತ್ಯವೆಂದು ಸಾರು ವುದು. ಯಾವ ಗುರುಗಳಲ್ಲಿ eನ ಮತ್ತು ಸತ್ಯ ಸೂರ್ಯನಂತೆ ಪ್ರಕಾಶಿ ಸುತ್ತಿರುವುದೊ ಅವರೇ ಶ್ರೇಷ್ಠತಮರಾದ ಗುರುಗಳು. ಅವರನ್ನು ಹೆಚ್ಚಿನ ಜನ ದೇವರೆಂದು ಪೂಜಿಸುತ್ತಾರೆ. ಅಂತಹಃ ವ್ಯಕ್ತಿತ್ವ ಪ್ರಕಾಶ ಹೊಂದಿದವರು ನಡೆದಾಡುವ ದೇವರು ಲಿಂಗೈಕ್ಯ ಸಿದ್ಧರಾಮೇಶ್ವರ ಸ್ವಾಮೀಜಿಯವರು ಆಗಿದ್ದರು. ಅವರು ಸ್ವತಃ ಕಾಯಕ ಯೋಗಿಗಳು, ಬಾಲತಪಸ್ವಿಗಳು ವಾಕ್ ಸಿದ್ಧಿಪುರುಷರು, ಪ್ರಮಾಣಿಕ ಪಾರದರ್ಶಕ ಜೀವನ ನಡೆಸಿ ಆದರ್ಶಪುರುಷರಾದವರು ಎಂದರು.
ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ ಮಾತ ನಾಡಿ, ಸೈಕಲ್‌ನಿಂದ ಪ್ರಾರಂಭ ವಾದ ರಥೋತ್ಸವವನ್ನು ರಾಜ್ಯ ಮಟ್ಟದ ಭೋವಿ ಜನಾಂಗದ ರಥೋತ್ಸವವನ್ನಾಗಿ ಇಮ್ಮಡಿ ಶ್ರೀಗಳು ಸಂಘಟನೆಯ ಮೂಲಕ ಪರಿವರ್ತಿಸಿzರೆ. ಯಾವುದೆ ಸರ್ಕಾರ ಬರಲಿ ಭೋವಿ ಸಮುದಾಯದ ಸಚಿವರೊಬ್ಬರು ಇರಲೇಬೇಕೆಂದು ಹೋರಾಟ ಮಾಡಿದ್ದರಿಂದ ಪ್ರತಿ ಸರ್ಕಾರದಲ್ಲೂ ಒಬ್ಬರು ಸಚಿವರು ಇರುವುದನ್ನು ನೋಡುತ್ತೇವೆ. ಸಮಾಜವನ್ನು ಸಂಘಟಿಸುವುದರ ಜೊತೆಗೆ ಎ ಸಮುದಾಯಗಳ ವಿಶ್ವಾಸವನ್ನು ಶ್ರೀಗಳು ಗಳಿಸಿzರೆ.
ಮಾದರ ಚನ್ನಯ್ಯ ಗುರುಪೀಠದ ಶ್ರೀ ಮಾದರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಶಿವರಾಜ್ ತಂಗಡಿಯವರು ಎ ಸಮುದಾಯದ ಸಚಿವರಾಗಿzರೆ. ಅವರು ಮಾಡಿರುವ ಕಾರ್ಯಗಳು ರಾಜ್ಯದ ಜನತೆ ಮೆಚ್ಚುವಂತೆ ಇರುತ್ತದೆ. ಇಮ್ಮಡಿ ಶ್ರೀಗಳು ಸಮಾಜ ಸಂಘಟನೆಗಾಗಿ ದೇಶವನ್ನೆ ಸುತ್ತಿ ಸಮುದಾಯವನ್ನ ಒಗ್ಗೂಡಿಸಿ zರೆ ಎಂದು ಹೇಳಿದರು.
ನಾರಯಾಣಗುರು ಮಠದ ಶ್ರೀ ರೇಣುಕಾನಂದ ಸ್ವಾಮೀಜಿ, ಹಡಪದ ಗುರುಪೀಠದ ಶ್ರೀ ಅನ್ನದಾನಿ ಭಾರತೀ ಅಪ್ಪಣ್ಣ ಸ್ವಾಮೀಜಿ, ಕುಂಬಾರ ಗುರುಪೀಠದ ಶ್ರೀ ಬಸವಕುಂಬಾರ ಗುಂಡಯ್ಯ ಸ್ವಾಮೀಜಿ, ಮೇದಾರ ಗುರುಪೀಠದ ಶ್ರೀ ಇಮ್ಮಡಿ ಬಸವಪ್ರಭು ಕೇತೇಶ್ವರ ಸ್ವಾಮೀಜಿ, ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಹಾವೇರಿ ಹೊಸಮಠದ ಶ್ರೀ ಶಾಂತಲಿಂಗ ಸ್ವಾಮೀಜಿ, ಮರುಳಶಂಕರ ಗುರುಪೀಠದ ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ, ಕೊರಟಗೆರೆ ಅನ್ನಪೂರ್ಣೆಶ್ವರಿ ಮಠದ ಶ್ರೀ ಬಸವ ಮಹಾಲಿಂಗ ಸ್ವಾಮೀಜಿ, ಶಿವಶಕ್ತಿಪೀಠದ ಶ್ರೀ ಬಸವ ಪ್ರಸಾದ ಸ್ವಾಮೀಜಿ, ಸಿದ್ದರೂಡ ಮಠದ ಮರುಳ ಶಂಕರ ಸ್ವಾಮೀಜಿ, ಜಯದೇವ ಸ್ವಾಮೀಜಿ, ಶಿಕಾರಿಪುರ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ, ಸಾಯಂಗವ ಮಠದ ಶ್ರೀ ಶಿವಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.
ದಾವಣಗೆರೆ ವೆಂಕಾಭೋವಿ ಕಾಲೋನಿಯಿಂದ ಆರಂಭಗೊಂಡ ಶ್ರೀ ಸಿದ್ದರಾಮೇಶ್ವರ ದೇವರ ರಥೋತ್ಸವ ಹಾಗೂ ಲಿಂಗೈಕ್ಯ ಶ್ರೀಗಳ ಭಾವಚಿತ್ರದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಿದ್ದರಾಮೇಶ್ವರ ದೇವಸ್ಥಾನ ತಲುಪಿತು. ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ, ಸೇರಿದಂತೆ ಇನ್ನಿತರ ಪ್ರಮುಖರು ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀಗಳ ದರ್ಶನಾಶೀರ್ವಾದ ಪಡೆದರು.